ಹೆಂಡ್ತಿ ಸಂಗೀತಾ ಕಂಡು ಹೆದರಿದ ‘ಭಾಗ್ಯಲಕ್ಷ್ಮಿ’ ಸುದರ್ಶನ್; ಗ್ರ್ಯಾಂಡ್ ಫಿನಾಲೆಯಲ್ಲಿ ಮಸ್ತ್ ಮನರಂಜನೆ

ಧಾರಾವಾಹಿಯಲ್ಲಿ ಪತ್ನಿಯನ್ನು ಕಂಡರೆ ತಾಂಡವ್​ಗೆ ಸ್ವಲ್ಪವೂ ಇಷ್ಟವಿಲ್ಲ. ‘ಫ್ಯಾಮಿಲಿ ಗ್ಯಾಂಗ್‍‍ಸ್ಟಾರ್ಸ್’ ಸ್ಪರ್ಧಿ ಆಗಿರುವ ಅವರಿಗೆ ನಿಜ ಜೀವನದಲ್ಲಿ ಪತ್ನಿಯನ್ನು ಕಂಡರೆ ಯಾವ ರೀತಿಯ ಅಭಿಪ್ರಾಯ ಇದೆ ಎನ್ನುವ ಬಗ್ಗೆ ಸೃಜನ್ ಅವರು ಸುದರ್ಶನ್​ನ ಪ್ರಶ್ನೆ ಮಾಡಿದ್ದಾರೆ.

ಹೆಂಡ್ತಿ ಸಂಗೀತಾ ಕಂಡು ಹೆದರಿದ ‘ಭಾಗ್ಯಲಕ್ಷ್ಮಿ’ ಸುದರ್ಶನ್; ಗ್ರ್ಯಾಂಡ್ ಫಿನಾಲೆಯಲ್ಲಿ ಮಸ್ತ್ ಮನರಂಜನೆ
ಸಂಗೀತಾ, ಸುದರ್ಶನ್, ಸೃಜನ್
Follow us
 ಶ್ರೀಲಕ್ಷ್ಮೀ ಎಚ್
| Updated By: ರಾಜೇಶ್ ದುಗ್ಗುಮನೆ

Updated on: Sep 17, 2023 | 12:25 PM

ವೀಕೆಂಡ್​ನಲ್ಲಿ ಮನರಂಜನೆ ನೀಡಲು ಕಲರ್ಸ್ ಕನ್ನಡದಲ್ಲಿ (Colors Kannada)  ಹಲವು ರಿಯಾಲಿಟಿ ಶೋಗಳು ಪ್ರಸಾರ ಕಂಡಿವೆ ಮತ್ತು ಪ್ರಸಾರ ಕಾಣುತ್ತಿವೆ. ಆ ಪೈಕಿ ‘ಫ್ಯಾಮಿಲಿ ಗ್ಯಾಂಗ್‍‍ಸ್ಟಾರ್ಸ್​’ ಕೂಡ ಒಂದು. ಇಷ್ಟು ವಾರಗಳ ಕಾಲ ಸಖತ್​ ಎಂಟರ್​ಟೇನ್​ಮೆಂಟ್ ನೀಡಿದ ಈ ಶೋ ಈಗ ಫಿನಾಲೆ ಹಂತ ತಲುಪಿದೆ. ಸೃಜನ್ ಲೋಕೇಶ್ (Srujan Lokesh) ಅವರ ನಿರೂಪಣೆಯಲ್ಲಿ ಈ ಶೋ ಪ್ರಸಾರ ಕಂಡಿದೆ. ಫಿನಾಲೆಯಲ್ಲಿ ಮನರಂಜನೆ ​ಡಬಲ್ ಆಗಿದೆ. ಇದರ ಪ್ರೋಮೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.

ಸುದರ್ಶನ್ ರಂಗಪ್ರಸಾದ್ ಅವರಿಗೆ ರಂಗಭೂಮಿ ಹಿನ್ನೆಲೆ ಇದೆ. ಅವರು ಸ್ಟ್ಯಾಂಡಪ್ ಕಾಮಿಡಿಯನ್ ಕೂಡ ಹೌದು. ಅವರು ಸದ್ಯ ಕಲರ್ಸ್ ಕನ್ನಡದಲ್ಲಿ ಪ್ರಸಾರ ಕಾಣುತ್ತಿರುವ ‘ಭಾಗ್ಯಲಕ್ಷ್ಮಿ’ ಧಾರಾವಾಹಿಯಲ್ಲಿ ತಾಂಡವ್ ಹೆಸರಿನ ಪಾತ್ರ ಮಾಡುತ್ತಿದ್ದಾರೆ. ಭಾಗ್ಯಳ ಪತಿಯ ಪಾತ್ರದಲ್ಲಿ ಅವರು ನಟಿಸುತ್ತಿದ್ದಾರೆ. ಧಾರಾವಾಹಿಯಲ್ಲಿ ಪತ್ನಿಯನ್ನು ಕಂಡರೆ ತಾಂಡವ್​ಗೆ ಸ್ವಲ್ಪವೂ ಇಷ್ಟವಿಲ್ಲ. ‘ಫ್ಯಾಮಿಲಿ ಗ್ಯಾಂಗ್‍‍ಸ್ಟಾರ್ಸ್’ ಸ್ಪರ್ಧಿ ಆಗಿರುವ ಅವರಿಗೆ ನಿಜ ಜೀವನದಲ್ಲಿ ಪತ್ನಿಯನ್ನು ಕಂಡರೆ ಯಾವ ರೀತಿಯ ಅಭಿಪ್ರಾಯ ಇದೆ ಎನ್ನುವ ಬಗ್ಗೆ ಸೃಜನ್ ಅವರು ಸುದರ್ಶನ್​ನ ಪ್ರಶ್ನೆ ಮಾಡಿದ್ದಾರೆ.

‘ತಾಂಡವ್ ಆಗಿ ಇಷ್ಟೊಂದು ಬೋಧನೆ ಮಾಡುತ್ತೀಯಲ್ಲ. ಮನೆಯಲ್ಲಿ ಹೆಂಡತಿ ಉಗಿಯೋದಿಲ್ಲವ’ ಎಂದು ಸೃಜನ್ ಕೇಳಿದರು. ಇದಕ್ಕೆ ‘ಅಯ್ಯೋ ಉಗೀತಾಳೆ’ ಎಂದು ಸುದರ್ಶನ್ ಉತ್ತರಿಸಿದರು. ಆ ಸಮಯಕ್ಕೆ ಸರಿಯಾಗಿ ಅವರ ಪತ್ನಿ ಸಂಗೀತಾ ಭಟ್ ಹಿಂಬದಿಗೆ ಬಂದು ನಿಂತಿದ್ದರು. ಈ ವೇಳೆ ಸುದರ್ಶನ್ ಕಾಲು ಎಳೆಯೋಕೆ ಸೃಜನ್ ಪ್ರಯತ್ನಿಸಿದ್ದಾರೆ. ‘ಹೆಂಡತಿಯ ಕುತ್ತಿಗೆ ಹಿಸುಕಿ ಸಾಯಿಸಬೇಕು ಎಂದು ಯಾವಾಗಲೂ ಅನಿಸಿಲ್ಲವೇ’ ಎಂದು ಕೇಳಲಾಯಿತು. ‘ಯಾವ ಗಂಡಿಗೆ ತಾನೇ ಅನಿಸಲ್ಲ ಹೇಳಿ’ ಎಂದು ಉತ್ತರಿಸಿದರು ಸುದರ್ಶನ್.

ಈ ಡೈಲಾಗ್​ ಹೇಳುವಾಗ ಸುದರ್ಶನ್ ಪತ್ನಿ ಸಂಗೀತಾ ಹಿಂದೆಯೇ ಇದ್ದರು. ‘ಹೆಂಡತಿಗೆ ಈ ಡೈಲಾಗ್ ಹೇಳಿ’ ಎಂದು ಸುದರ್ಶನ್ ಅವರನ್ನು ಹಿಂದಕ್ಕೆ ತಿರುಗಿಸಿದರು. ಹಿಂದೆ ಪತ್ನಿಯನ್ನು ನೋಡಿ ಒಮ್ಮೆ ಹೆದರಿದರು ಸುದರ್ಶನ್. ‘ಭಾಗ್ಯಳ ಬಳಿ ಹೇಗೆ ಮಾತಾಡ್ತೀಯೋ ಹಾಗೆಯೇ ಸಂಗೀತಾ ಬಳಿಯೂ ಮಾತನಾಡು’ ಎಂದು ಸೃಜನ್ ಸವಾಲು ಹಾಕಿದರು. ಆದರೆ, ಈ ಸವಾಲನ್ನು ಸ್ವೀಕರಿಸೋಕೆ ಸುದರ್ಶನ್ ಬಳಿ ಸಾಧ್ಯವೇ ಆಗಿಲ್ಲ.

ಇದನ್ನೂ ಓದಿ: ಬಿಗ್ ಬಾಸ್ ಸಂದರ್ಭದಲ್ಲೇ ಕಲರ್ಸ್​ನಲ್ಲಿ ಬರ್ತಿದೆ ಹೊಸ ಧಾರಾವಾಹಿ ‘ಬೃಂದಾವನ’; ರಾಮ್ ಜಿ ನಿರ್ದೇಶನ

‘ಭಾಗ್ಯಲಕ್ಷ್ಮಿ’ ಧಾರಾವಾಹಿ ಕಲರ್ಸ್ ಕನ್ನಡದಲ್ಲಿ ಸಂಜೆ ಏಳು ಗಂಟೆಗೆ ಪ್ರಸಾರ ಕಾಣುತ್ತಿದೆ. ಕಲರ್ಸ್ ಕನ್ನಡದ ಧಾರಾವಾಹಿಗಳಲ್ಲಿ ಇದು ಒಳ್ಳೆಯ ಟಿಆರ್​ಪಿ ಪಡೆದುಕೊಳ್ಳುತ್ತಿದೆ. ಸುಷ್ಮಾ ರಾವ್, ಪದ್ಮಜಾ ರಾವ್, ಸುದರ್ಶನ್ ಮೊದಲಾದವರು ಈ ಧಾರಾವಾಹಿಯಲ್ಲಿ ನಟಿಸುತ್ತಿದ್ದಾರೆ. ಅವರ ನಟನೆಗೆ ಮೆಚ್ಚುಗೆ ಕೇಳಿ ಬರುತ್ತಿದೆ. ಸಂಗೀತಾ ಭಟ್ ಅವರು ಚಿತ್ರರಂಗದಲ್ಲಿ ಆ್ಯಕ್ಟೀವ್ ಆಗಿದ್ದಾರೆ. ಹಲವು ಸಿನಿಮಾಗಳಲ್ಲಿ ಅವರು ನಟಿಸಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ

ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ