AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಬಿಗ್ ಬಾಸ್ ಸಂದರ್ಭದಲ್ಲೇ ಕಲರ್ಸ್​ನಲ್ಲಿ ಬರ್ತಿದೆ ಹೊಸ ಧಾರಾವಾಹಿ ‘ಬೃಂದಾವನ’; ರಾಮ್ ಜಿ ನಿರ್ದೇಶನ

ರಾಮ್ ಜಿ ಧಾರಾವಾಹಿಗಳು ಕೌಟುಂಬಿಕ ಕಥೆಯನ್ನು ಹೊಂದಿರುತ್ತದೆ. ಮಹಿಳಾ ಪಾತ್ರಗಳು ಮಾಸ್ ಹಾಗೂ ಭಾವನಾತ್ಮಕವಾಗಿರುತ್ತವೆ. ಇದಕ್ಕೆ ‘ಗೀತಾ’, ‘ಮಂಗಳಗೌರಿ’ ಮೊದಲಾದ ಧಾರಾವಾಹಿಗಳೇ ಇದಕ್ಕೆ ಸಾಕ್ಷಿ. ಹೀಗಾಗಿ, ‘ಬೃಂದಾವನ’ ಧಾರಾವಾಹಿಯಲ್ಲೂ ಇದೇ ರೀತಿಯ ಥೀಮ್ ಇರಬಹುದು ಎಂದು ವೀಕ್ಷಕರು ಊಹಿಸುತ್ತಿದ್ದಾರೆ.

ಬಿಗ್ ಬಾಸ್ ಸಂದರ್ಭದಲ್ಲೇ ಕಲರ್ಸ್​ನಲ್ಲಿ ಬರ್ತಿದೆ ಹೊಸ ಧಾರಾವಾಹಿ ‘ಬೃಂದಾವನ’; ರಾಮ್ ಜಿ ನಿರ್ದೇಶನ
ರಾಜೇಶ್ ದುಗ್ಗುಮನೆ
|

Updated on: Sep 17, 2023 | 9:52 AM

Share

‘ಬಿಗ್ ಬಾಸ್’ (Bigg Boss) ಆರಂಭಕ್ಕೆ ದಿನಗಣನೆ ಶುರುವಾಗಿದೆ. ಮೂಲಗಳ ಪ್ರಕಾರ ಸೆಪ್ಟೆಂಬರ್ ಕೊನೆ ಅಥವಾ ಅಕ್ಟೋಬರ್​ನಲ್ಲಿ ಈ ರಿಯಾಲಿಟಿ ಶೋ ಪ್ರಸಾರ ಆರಂಭಿಸಲಿದೆ ಎನ್ನಲಾಗಿದೆ. ಈ ಸಂದರ್ಭದಲ್ಲಿ ಒಂದಷ್ಟು ಧಾರಾವಾಹಿಗಳು ಕೊನೆಗೊಳ್ಳೋದು ಅನಿವಾರ್ಯ. ಹಾಗಿರುವಾಗಲೇ ಕಲರ್ಸ್ ಕನ್ನಡ (Colors Kannada) ಹೊಸ ಧಾರಾವಾಹಿಯೊಂದಿಗೆ ಬರಲು ರೆಡಿ ಆಗಿದೆ. ಈ ಕುರಿತು ಪ್ರೋಮೋ ರಿಲೀಸ್ ಮಾಡಲಾಗಿದೆ. ಈ ವಿಚಾರ ಕೇಳಿ ವೀಕ್ಷಕರ ವಲಯದಲ್ಲಿ ಕುತೂಹಲ ಹೆಚ್ಚಿದೆ.

ರಾಮ್ ಜಿ. ಕಿರುತೆರೆಯಲ್ಲಿ ಸಾಕಷ್ಟು ಧಾರಾವಾಹಿಗಳನ್ನು ನಿರ್ದೇಶನ ಮಾಡಿ ಫೇಮಸ್ ಆಗಿದ್ದಾರೆ. ಕಲರ್ಸ್ ಕನ್ನಡದ ‘ಪುಟ್ಟಗೌರಿ’, ‘ಮಂಗಳಗೌರಿ’, ‘ಅಕ್ಕ’ ಧಾರಾವಾಹಿಗಳನ್ನು ಈ ಮೊದಲು ಅವರು ನಿರ್ದೇಶನ ಮಾಡಿದ್ದಾರೆ. ಈಗ ಅವರು ನಿರ್ದೇಶಿಸುತ್ತಿರುವ ‘ಗೀತಾ’ ಹಾಗೂ ‘ರಾಮಾಚಾರಿ’ ಕಲರ್ಸ್ ಕನ್ನಡದಲ್ಲಿ ಪ್ರಸಾರ ಕಾಣುತ್ತಿದ್ದು, ವೀಕ್ಷಕರಿಂದ ಮೆಚ್ಚುಗೆ ಪಡೆಯುತ್ತಿದೆ. ‘ಅನುಬಂಧ’ ಅವಾರ್ಡ್ಸ್​ನಲ್ಲಿ ಅವರ ಧಾರಾವಾಹಿಗಳು ಅನೇಕ ಪ್ರಶಸ್ತಿಗಳನ್ನು ಗೆದ್ದಿವೆ. ಈಗ ಅವರ ನಿರ್ದೇಶನದಲ್ಲಿ ಹೊಸ ಧಾರಾವಾಹಿ ‘ಬೃಂದಾವನ’ ಬರುತ್ತಿದೆ.

ರಾಮ್ ಜಿ ಧಾರಾವಾಹಿಗಳು ಕೌಟುಂಬಿಕ ಕಥೆಯನ್ನು ಹೊಂದಿರುತ್ತದೆ. ಮಹಿಳಾ ಪಾತ್ರಗಳು ಮಾಸ್ ಹಾಗೂ ಭಾವನಾತ್ಮಕವಾಗಿರುತ್ತವೆ. ಇದಕ್ಕೆ ‘ಗೀತಾ’, ‘ಮಂಗಳಗೌರಿ’ ಮೊದಲಾದ ಧಾರಾವಾಹಿಗಳೇ ಇದಕ್ಕೆ ಸಾಕ್ಷಿ. ಹೀಗಾಗಿ, ‘ಬೃಂದಾವನ’ ಧಾರಾವಾಹಿಯಲ್ಲೂ ಇದೇ ರೀತಿಯ ಥೀಮ್ ಇರಬಹುದು ಎಂದು ವೀಕ್ಷಕರು ಊಹಿಸುತ್ತಿದ್ದಾರೆ. ‘ಬೃಂದಾವನ’ ಟೈಟಲ್ ಟೀಸರ್​ನಲ್ಲಿ ಮನೆಯನ್ನು ಕೂಡ ತೋರಿಸಲಾಗಿದೆ.

‘ಬೃಂದಾವನ’ ಧಾರಾವಾಹಿಯ ಪಾತ್ರವರ್ಗದ ಬಗ್ಗೆ ಯಾವುದೇ ಮಾಹಿತಿ ರಿವೀಲ್ ಆಗಿಲ್ಲ. ಮುಂದಿನ ದಿನಗಳಲ್ಲಿ ಕಲರ್ಸ್ ಕನ್ನಡದವರು ಅಪ್​ಡೇಟ್ ನೀಡಲಿದ್ದಾರೆ. ರಾಮ್​ ಜಿಗೆ ಶುಭಕೋರಿ ಅನೇಕರು ಕಮೆಂಟ್ ಮಾಡುತ್ತಿದ್ದಾರೆ. ಪಾತ್ರವರ್ಗವನ್ನು ಶೀಘ್ರವೇ ತಿಳಿಸುವಂತೆ ಬೇಡಿಕೆ ಇಡುತ್ತಿದ್ದಾರೆ.

ಇದನ್ನೂ ಓದಿ: ಅಭ್ಯರ್ಥಿಗಳ ಲಿಸ್ಟ್​ ಅಲ್ಲ; ‘ಬಿಗ್ ಬಾಸ್’ ಬಗ್ಗೆ ವೀಕ್ಷಕರಿಗೆ ಕಾಡ್ತಿದೆ ಈ ಪ್ರಶ್ನೆ

‘ಬಿಗ್ ಬಾಸ್’ ಆರಂಭ ಆಗಲಿರುವುದರಿಂದ ಯಾವ ಧಾರಾವಾಹಿಗಳು ಕೊನೆಗೊಳ್ಳಲಿದೆ ಎನ್ನುವ ಪ್ರಶ್ನೆ ಮೂಡಿದೆ. ಈ ಬಗ್ಗೆ ಕಲರ್ಸ್ ಕನ್ನಡ ಕಡೆಯಿಂದ ಮಾಹಿತಿ ಸಿಗಬೇಕಿದೆ. ‘ಗೀತಾ’ ಧಾರಾವಾಹಿ ಶೀಘ್ರವೇ ಕೊನೆಗೊಳ್ಳಬಹುದು ಅನ್ನೋದು ಅನೇಕರ ಊಹೆ.

ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ