ಕಲರ್ಸ್ ಕನ್ನಡ ಹಾಗೂ ಜೀ ಕನ್ನಡದಲ್ಲಿ ಪ್ರಸಾರ ಆಗುತ್ತಿರುವ ಈ ಧಾರಾವಾಹಿಗಳು ಶೀಘ್ರವೇ ಮುಕ್ತಾಯ
ಎರಡು ಪ್ರಮುಖ ಧಾರಾವಾಹಿಗಳು ಕೊನೆ ಆಗುತ್ತಿವೆ. ಸದ್ಯ ಈ ವಿಚಾರ ಒಂದು ವರ್ಗದ ವೀಕ್ಷಕರಿಗೆ ಬೇಸರ ಮೂಡಿಸಿದೆ. ಯಾವ ಧಾರಾವಾಹಿ ಕೊನೆಗಳ್ಳುತ್ತಿದೆ ಎಂಬ ಬಗ್ಗೆ ಇಲ್ಲಿದೆ ಮಾಹಿತಿ.
ಕಲರ್ಸ್ ಕನ್ನಡ ಹಾಗೂ ಜೀ ಕನ್ನಡ (Zee Kannada) ಮಧ್ಯೆ ಸಖತ್ ಪೈಪೋಟಿ ಇದೆ. ಕಿರುತೆರೆ ಲೋಕಕ್ಕೆ ವಿವಿಧ ರೀತಿಯ ಧಾರಾವಾಹಿಗಳನ್ನು ನೀಡುವ ಕೆಲಸ ಇವುಗಳಿಂದ ಆಗುತ್ತಿದೆ. ಈಗ ಎರಡೂ ವಾಹಿನಿಗಳಲ್ಲಿ ಹೊಸಹೊಸ ಧಾರಾವಾಹಿಗಳು ಬರೋಕೆ ಸಿದ್ಧಗೊಂಡಿವೆ. ಹೊಸ ಧಾರಾವಾಹಿ ಬರಬೇಕು ಎಂದರೆ ಈಗ ಪ್ರಸಾರ ಆಗುತ್ತಿರುವ ಧಾರಾವಾಹಿ ಕೊನೆಗೊಳ್ಳಲೇಬೇಕು. ಹೀಗಾಗಿ, ಎರಡು ಪ್ರಮುಖ ಧಾರಾವಾಹಿಗಳು ಕೊನೆ ಆಗುತ್ತಿವೆ. ಸದ್ಯ ಈ ವಿಚಾರ ಒಂದು ವರ್ಗದ ವೀಕ್ಷಕರಿಗೆ ಬೇಸರ ಮೂಡಿಸಿದೆ. ಆ ಬಗ್ಗೆ ಇಲ್ಲಿದೆ ಮಾಹಿತಿ.
ಜೊತೆ ಜೊತೆಯಲಿ
ಜೀ ಕನ್ನಡದಲ್ಲಿ ಪ್ರಸಾರ ಆಗುತ್ತಿರುವ ‘ಜೊತೆ ಜೊತೆಯಲಿ’ ಧಾರಾವಾಹಿ ಈ ವಾರ (ಮೇ 19) ಪೂರ್ಣಗೊಳ್ಳಲಿದೆ. ಕ್ಲೈಮ್ಯಾಕ್ಸ್ ಸಂಚಿಕೆಯ ಶೂಟಿಂಗ್ ಈಗಾಗಲೇ ಮುಗಿದಿದೆ ಎನ್ನಲಾಗುತ್ತಿದೆ. ಮೇಘಾ ಶೆಟ್ಟಿ ಅನು ಹೆಸರಿನ ಪಾತ್ರದಲ್ಲಿ ಕಾಣಿಸಿಕೊಂಡರೆ, ಹರೀಶ್ ರಾಜ್ ಅವರು ಆರ್ಯವರ್ಧನ್ ಪಾತ್ರದಲ್ಲಿ ನಟಿಸುತ್ತಿದ್ದಾರೆ. ಈಗ ಧಾರಾವಾಹಿ ಪೂರ್ಣಗೊಳಿಸಲು ನಿರ್ಮಾಪಕ ಆರೂರು ಜಗದೀಶ್ ನಿರ್ಧರಿಸಿದ್ದಾರೆ.
ಕಲಾವಿದರ ಡೇಟ್ಸ್ ಹೊಂದಿಸಲು ಆರೂರು ಜಗದೀಶ್ಗೆ ಸಾಧ್ಯವಾಗುತ್ತಿಲ್ಲ. ಅವರು ಇತ್ತೀಚೆಗೆ ಈ ಬಗ್ಗೆ ಮಾತನಾಡಿದ್ದರು. ಇದಲ್ಲದೆ, ಟಿಆರ್ಪಿ ವಿಚಾರದಲ್ಲೂ ಧಾರಾವಾಹಿ ಒಳ್ಳೆಯ ಪರ್ಫಾರ್ಮೆನ್ಸ್ ಮಾಡುತ್ತಿಲ್ಲ. ಇವೆಲ್ಲವನ್ನೂ ಗಮನಿಸಿ ‘ಜೊತೆ ಜೊತೆಯಲಿ’ ಧಾರಾವಾಹಿ ಅಂತ್ಯ ಮಾಡಲಾಗುತ್ತಿದೆ. 1000 ಸಾವಿರ ಎಪಿಸೋಡ್ ಪೂರ್ಣಗೊಳಿಸಬೇಕು ಎಂಬುದು ಚಿತ್ರತಂಡದ ಉದ್ದೇಶ ಆಗಿತ್ತು. ಆದರೆ, ಅದು ಸಾಧ್ಯವಾಗಿಲ್ಲ. ಆರ್ಯನ ಪಾತ್ರ ಮಾಡುತ್ತಿದ್ದ ಅನಿರುದ್ಧ್ ಜತ್ಕರ್ ತೊರೆದಿದ್ದು ಧಾರಾವಾಹಿಗೆ ಹಿನ್ನಡೆ ಆಯಿತು.
ಗಿಣಿರಾಮ
ಕಲರ್ಸ್ ಕನ್ನಡದಲ್ಲಿ ಪ್ರಸಾರ ಕಾಣುತ್ತಿರುವ ‘ಗಿಣಿರಾಮ’ ಧಾರಾವಾಹಿ ಕೂಡ ಮೆಚ್ಚುಗೆ ಪಡೆದಿತ್ತು. ನಯನಾ ನಾಗರಾಜ್ ಅವರು ಮಹತಿ ದೇಶಪಾಂಡೆ ಆಗಿ, ರಿತ್ವಿಕ್ ಮಠದ್ ಅವರು ಶಿವರಾಮ್ ದೇಶಪಾಂಡೆ ಆಗಿ ನಟಿಸುತ್ತಿದ್ದಾರೆ. ಈ ಧಾರಾವಾಹಿ ಕೂಡ ಟಿಆರ್ಪಿ ಕಳೆದುಕೊಂಡಿದೆ. ಹೀಗಾಗಿ ಧಾರಾವಾಹಿ ಕೊನೆಗೊಳ್ಳುತ್ತಿದೆ.
ಇದನ್ನೂ ಓದಿ: ಜೀ ಕನ್ನಡದಲ್ಲಿ ಮೇ 29ರಿಂದ ‘ಅಮೃತಧಾರೆ’ ಧಾರಾವಾಹಿ ಆರಂಭ; ಯಾವ ಸೀರಿಯಲ್ ಅಂತ್ಯ?
2020ರಲ್ಲಿ ‘ಗಿಣಿರಾಮ’ ಪ್ರಸಾರ ಆರಂಭ ಆಯಿತು. ಮರಾಠಿ ಧಾರಾವಾಹಿಯ ರಿಮೇಕ್ ಇದಾಗಿದೆ. ಇಲ್ಲಿನ ಸೊಗಡಿಗೆ ತಕ್ಕಂತೆ ಕಥೆಯಲ್ಲಿ ಬದಲಾವಣೆ ಮಾಡಲಾಗಿತ್ತು. ಬೇರೆಯವರು ಮಾಡಿದ ಮೋಸಕ್ಕೆ ಒಳಗಾಗಿ ನಾಯಕಿ ಮಹತಿ ಮದುವೆಯಾಗಬೇಕಿದ್ದ ಹುಡುಗ ಮೃತಪಡುತ್ತಾನೆ. ಮಹತಿ ತಾನು ದ್ವೇಷಿಸುತ್ತಿದ್ದ ಶಿವರಾಮ್‌ನ ಮದುವೆ ಆಗುವ ಪರಿಸ್ಥಿತಿ ಬರುತ್ತದೆ. ಬಳಿಕ ಇವರ ಮಧ್ಯೆ ಪ್ರೀತಿ ಮೂಡುತ್ತದೆ. ಇದು ಧಾರಾವಾಹಿಯ ಕಥೆ.
ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 10:21 am, Wed, 17 May 23