AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

Seetha Raama: ಸೀತಾ ರಾಮರ ನಡುವಿನ ವಿಷಯದಲ್ಲಿ ಅಶೋಕ್ ತೊಳಲಾಟ; ಪ್ರಿಯಾಗೆ ಪ್ರಾಣಸಂಕಟ!

ಅಶೋಕ್ ಪ್ರಿಯಾಳ ಬಳಿ ಅಡ್ವಾನ್ಸ್ ಸ್ಯಾಲರಿ ವಿಷಯವನ್ನು ಹೇಳುತ್ತಾನೆ. ಅದನ್ನು ಕೇಳಿ ಅವಳಿಗೆ ಆಕಾಶವೇ ತಲೆ ಮೇಲೆ ಕಳಚಿ ಬಿದ್ದಂತಾಗುತ್ತದೆ. ಪ್ರಿಯಾ ಆಫೀಸ್ ಹಣವನ್ನು ಹಿಂತಿರುಗಿಸಿ ಕೊಡುತ್ತಾಳಾ? ಈ ವಿಷಯವಾಗಿ ಸೀತಾಳ ಅಭಿಪ್ರಾಯ ಏನಾಗಿರಬಹುದು? ಕಾದು ನೋಡೋಣ.

Seetha Raama: ಸೀತಾ ರಾಮರ ನಡುವಿನ ವಿಷಯದಲ್ಲಿ ಅಶೋಕ್ ತೊಳಲಾಟ; ಪ್ರಿಯಾಗೆ ಪ್ರಾಣಸಂಕಟ!
ವೈಷ್ಣವಿ ಗೌಡ
ಪ್ರೀತಿ ಭಟ್​, ಗುಣವಂತೆ
| Edited By: |

Updated on: Sep 16, 2023 | 2:46 PM

Share

‘ಸೀತಾ ರಾಮ’ (Seetha Raama Serial) ಧಾರಾವಾಹಿ (Serial) ಸಂಚಿಕೆ 46: ಪಿಕ್ನಿಕ್​​ಗೆ ಹೋಗಲು ಅಮ್ಮನ ಒಪ್ಪಿಗೆಯನ್ನು ಪಡೆಯಲು ಕಾಯುತ್ತಿರುವ ಸಿಹಿಗೆ, ಕತ್ತಲಾದರೂ ಸೀತಮ್ಮ ಬಂದಿಲ್ಲ ಎಂಬ ಚಿಂತೆ ಶುರುವಾಗುತ್ತದೆ. ತನ್ನ ಅಮ್ಮನನ್ನು ಮೆಚ್ಚಿಸಲು ಎಲ್ಲ ಸಿದ್ಧತೆಗಳನ್ನು ಮಾಡಿ ಕಾಯುತ್ತಾಳೆ. ಇನ್ನು ಅಡ್ವಾನ್ಸ್ ಸ್ಯಾಲರಿ ವಿಚಾರವಾಗಿ ರಾಮ್, ಅಶೋಕ್​ನಿಗೆ ಒಂದು ಮೀಟಿಂಗ್ ಕರೆದು ಮಾತನಾಡುವಂತೆ ಹೇಳುತ್ತಾನೆ. ಅದೇ ರೀತಿ ಮಾಡಿದ ಅಶೋಕ್ ಪ್ರಿಯಾ ಮತ್ತು ಸೀತಾಳನ್ನು ಕರೆಯುತ್ತಾನೆ.

ಸೀತಾ ಕತ್ತಲಾದರೂ ಮನೆಗೆ ಬರದಿದ್ದನ್ನು ನೋಡಿ ಅಕ್ಕ ಪಕ್ಕದ ಮನೆಯವರು ನೂರಾರು ಕಥೆ ಕಟ್ಟಿ ಸಿಹಿಗೆ ಹೇಳುತ್ತಾರೆ. ಏನು ಅರ್ಥವಾಗದ ಸಿಹಿ ಅಮ್ಮನ ಪರ ವಹಿಸಿ ಮಾತನಾಡುತ್ತಾಳೆ. ಅಷ್ಟು ಹೊತ್ತಿಗೆ ಅಲ್ಲಿಗೆ ಬಂದ ಸಿಹಿಯ ಅಜ್ಜಿ ಅವರಿಗೆಲ್ಲಾ ಬುದ್ದಿವಾದ ಹೇಳುವುದರ ಜೊತೆಗೆ ಸೀತಾಳನ್ನು ವಹಿಸಿಕೊಂಡು ಮಾತನಾಡುತ್ತಾರೆ.

ಇದನ್ನೂ ಓದಿ: Seetha Raama: ಭಾರ್ಗವಿಯ ಮೋಸದಾಟ ರಾಮ್ ಮತ್ತು ಸೂರ್ಯ ಪ್ರಕಾಶ್​ಗೆ ತಿಳಿಯುತ್ತಾ?

ಅಶೋಕ್ ಕರೆದ ಮೀಟಿಂಗ್​ಗೆ ಸೀತಾ, ರಾಮ್ ಮತ್ತು ಪ್ರಿಯಾ ಬರುತ್ತಾರೆ. ರಾಮ್​ನಿಗೆ ವಿಷಯ ಗೊತ್ತಿದ್ದರೂ ಹೇಳಲಾಗದ ಸಂದರ್ಭ. ಇನ್ನು ಪ್ರಿಯಾಳಿಗೆ ನನ್ನ ಬಳಿ ಪ್ರೀತಿಯ ವಿಷಯವನ್ನು ಮಾತನಾಡಲು ಕರೆದಿದ್ದಾರೆ ಎಂಬ ನಂಬಿಕೆ. ಸೀತಾಳಿಗೆ ಇದಾವುದರ ಬಗ್ಗೆ ಚಿಂತೆ ಇಲ್ಲವಾದರೂ ಮನೆಗೆ ಹೋಗಲು ತಡವಾಗುತ್ತದೆ ಎಂಬ ಕೊರಗು ಕಾಡುತ್ತದೆ. ಸಿಹಿಗೂ ಕರೆ ಮಾಡಿ ಈ ವಿಷಯ ತಿಳಿಸುತ್ತಾಳೆ. ಅವಳು ಬೇಸರ ಮಾಡಿಕೊಂಡರೂ ಸೀತಾಳಿಗೆ ಬೇರೆ ದಾರಿ ಇರುವುದಿಲ್ಲ. ಇನ್ನು ಅಶೋಕ್ ಪ್ರಿಯಾ ಒಬ್ಬಳೇ ಒಳಗೆ ಬಂದಿದ್ದರಿಂದ ಅಡ್ವಾನ್ಸ್ ಸ್ಯಾಲರಿ ವಿಷಯವನ್ನು ಹೇಳುತ್ತಾನೆ. ಅದನ್ನು ಕೇಳಿ ಅವಳಿಗೆ ಆಕಾಶವೇ ತಲೆ ಮೇಲೆ ಕಳಚಿ ಬಿದ್ದಂತಾಗುತ್ತದೆ. ಹಾಗಾದರೆ ಪ್ರಿಯಾ ಆಫೀಸ್ ಹಣವನ್ನು ಹಿಂತಿರುಗಿಸಿ ಕೊಡುತ್ತಾಳಾ? ಈ ವಿಷಯವಾಗಿ ಸೀತಾಳ ಅಭಿಪ್ರಾಯ ಏನಾಗಿರಬಹುದು? ಕಾದು ನೋಡೋಣ.

ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

Follow Us
ಪ್ರೀತಿ ಭಟ್​, ಗುಣವಂತೆ
ಪ್ರೀತಿ ಭಟ್​, ಗುಣವಂತೆ

ಪ್ರೀತಿ ಭಟ್ ಗುಣವಂತೆ – ಮೂಲತಃ ಹೊನ್ನಾವರದ ಗುಣವಂತೆಯವಳು. ಪತ್ರಿಕೋದ್ಯಮ ಮತ್ತು ಸಮೂಹ ಸಂವಹನದಲ್ಲಿ (M.C.J) ಎಂ.ಎ ಮಾಡಿದ್ದು ಪತ್ರಿಕಾ ರಂಗದಲ್ಲಿ 6 ವರ್ಷಗಳ ಅನುಭವವಿದೆ. ಸುದ್ದಿ ಬಿಡುಗಡೆ ವಾರ ಪತ್ರಿಕೆಯಲ್ಲಿ, ಉದಯವಾಣಿ ದಿನ ಪತ್ರಿಕೆಯಲ್ಲಿ ಕೆಲಸ ಮಾಡಿದ್ದೇನೆ. ಅದಾದ ಬಳಿಕ 2023ರಿಂದ ಟಿವಿ9 ಕನ್ನಡದಲ್ಲಿ ಕೆಲಸ ಮಾಡುತ್ತಿದ್ದೇನೆ. ಅಧ್ಯಾತ್ಮ, ಆರೋಗ್ಯ, ಜೀವನಶೈಲಿಗೆ ಸಂಬಂಧಿಸಿದ ಲೇಖನಗಳನ್ನು ಬರೆಯುವುದರಲ್ಲಿ ಆಸಕ್ತಿ ಹೊಂದಿದ್ದು, ಓದುಗರಿಗೆ ಉತ್ತಮ ಲೇಖನಗಳನ್ನು ಒದಗಿಸುವಲ್ಲಿ ಪ್ರೀತಿಯಿಂದ, ಪ್ರಾಮಾಣಿಕವಾಗಿ ಪ್ರಯತ್ನಿಸುತ್ತಿದ್ದೇನೆ. ಬರವಣಿಗೆ ಹೊರತು ಪಡಿಸಿದರೆ ನನ್ನ ಆಸಕ್ತಿಕರ ಕ್ಷೇತ್ರ ಪ್ರವಾಸ.

Read More
ನಿಮ್ಮ ರಾಶಿಯ ಆರ್ಥಿಕ, ವೃತ್ತಿ ಜಾತಕ ಹೇಗಿದೆ?
ನಿಮ್ಮ ರಾಶಿಯ ಆರ್ಥಿಕ, ವೃತ್ತಿ ಜಾತಕ ಹೇಗಿದೆ?
ಮಂಗಳೂರಿಗೆ ಮರಳಿದ 'ಚಿನ್ನದ ಹುಡುಗಿ' ಪೂವಮ್ಮಗೆ ಅದ್ಧೂರಿ ಸ್ವಾಗತ
ಮಂಗಳೂರಿಗೆ ಮರಳಿದ 'ಚಿನ್ನದ ಹುಡುಗಿ' ಪೂವಮ್ಮಗೆ ಅದ್ಧೂರಿ ಸ್ವಾಗತ
ಆಷಾಢದಲ್ಲೂ ನವದಂಪತಿಯನ್ನು ಒಂದುಗೂಡಿಸುವ ಚಾಮರಾಜೇಶ್ವರ ಜಾತ್ರೆ
ಆಷಾಢದಲ್ಲೂ ನವದಂಪತಿಯನ್ನು ಒಂದುಗೂಡಿಸುವ ಚಾಮರಾಜೇಶ್ವರ ಜಾತ್ರೆ
ಕಬ್ಬು ಬೆಳಗಾರರ ಪ್ರತಿಭಟನೆ ಬೆನ್ನಲ್ಲೇ ಅ.12ರಂದು ದಿಲ್ಲಿಯಲ್ಲಿ ಸಭೆ
ಕಬ್ಬು ಬೆಳಗಾರರ ಪ್ರತಿಭಟನೆ ಬೆನ್ನಲ್ಲೇ ಅ.12ರಂದು ದಿಲ್ಲಿಯಲ್ಲಿ ಸಭೆ
ಮೂರೂ ಪಕ್ಷಗಳಿಂದ ಲಿಂಗಾಯತ ಸಮುದಾಯಕ್ಕೆ ಮಣೆ: 2028ಕ್ಕೆ ಮಾಸ್ಟರ್ ಪ್ಲಾನ್
ಮೂರೂ ಪಕ್ಷಗಳಿಂದ ಲಿಂಗಾಯತ ಸಮುದಾಯಕ್ಕೆ ಮಣೆ: 2028ಕ್ಕೆ ಮಾಸ್ಟರ್ ಪ್ಲಾನ್
‘ಪಟ್ಟ ಕಷ್ಟ ಅಷ್ಟಿಷ್ಟಲ್ಲ’, ‘ಪ್ರೇಮದ ಊರಲಿ’ ಯಶಸ್ಸಿನ ಬಗ್ಗೆ ನಾಯಕ ಶ್ರೀರಾಮ
‘ಪಟ್ಟ ಕಷ್ಟ ಅಷ್ಟಿಷ್ಟಲ್ಲ’, ‘ಪ್ರೇಮದ ಊರಲಿ’ ಯಶಸ್ಸಿನ ಬಗ್ಗೆ ನಾಯಕ ಶ್ರೀರಾಮ
ಬಿಗ್​​ಬಾಸ್ ಮನೆಯಲ್ಲಿ ಆಸಿಯಾ, ಯಶಸ್​​ ‘ಮಿಡ್ ನೈಟ್ ಆಪರೇಷನ್’
ಬಿಗ್​​ಬಾಸ್ ಮನೆಯಲ್ಲಿ ಆಸಿಯಾ, ಯಶಸ್​​ ‘ಮಿಡ್ ನೈಟ್ ಆಪರೇಷನ್’
ಎಸ್​​ಐಆರ್ ವೇಳೆ ಮೈಸೂರಿನಲ್ಲಿ ಫಾರ್ಮ್​​ 7 ದುರ್ಬಳಕೆ: ಕೇಸ್ ಬುಕ್
ಎಸ್​​ಐಆರ್ ವೇಳೆ ಮೈಸೂರಿನಲ್ಲಿ ಫಾರ್ಮ್​​ 7 ದುರ್ಬಳಕೆ: ಕೇಸ್ ಬುಕ್
ಕಡಿಮೆ ಬಜೆಟ್, ಸೂಪರ್ ಕಲೆಕ್ಷನ್: ಪ್ರೇಮದ ಊರಲಿ ಬಗ್ಗೆ ಚಿತ್ರಮಂದಿರದವರ ಮಾತು
ಕಡಿಮೆ ಬಜೆಟ್, ಸೂಪರ್ ಕಲೆಕ್ಷನ್: ಪ್ರೇಮದ ಊರಲಿ ಬಗ್ಗೆ ಚಿತ್ರಮಂದಿರದವರ ಮಾತು
ಚೆನಾಬ್- ಅಂಜಿ ಸೇತುವೆ ಮೇಲೆ 100 ಕಿ.ಮೀ. ವೇಗದಲ್ಲಿ ಚಲಿಸಿದ ವಂದೇ ಭಾರತ್
ಚೆನಾಬ್- ಅಂಜಿ ಸೇತುವೆ ಮೇಲೆ 100 ಕಿ.ಮೀ. ವೇಗದಲ್ಲಿ ಚಲಿಸಿದ ವಂದೇ ಭಾರತ್