ನಿರ್ದೇಶನಕ್ಕೆ ಇಳಿದ ಸೃಜನ್ ಲೋಕೇಶ್; ಮೊದಲ ಚಿತ್ರದಲ್ಲೇ ಮಗನಿಗೆ ಚಾನ್ಸ್

‘ಜಿಎಸ್​ಟಿ’ ಚಿತ್ರವನ್ನು ಸೃಜನ್ ಲೋಕೇಶ್ ನಿರ್ದೇಶನ ಮಾಡುತ್ತಿದ್ದಾರೆ. ಹಲವು ಸೂಪರ್ ಹಿಟ್ ಚಿತ್ರಗಳನ್ನು ನೀಡಿರುವ ಸಂದೇಶ್​ ಅವರು ಈ ಚಿತ್ರವನ್ನು ನಿರ್ಮಾಣ ಮಾಡುತ್ತಿದ್ದಾರೆ. ಸಂದೇಶ್ ಪ್ರೊಡಕ್ಷನ್ಸ್ ಬ್ಯಾನರ್ ಅಡಿಯಲ್ಲಿ ಚಿತ್ರ ಮೂಡಿಬರಲಿದೆ.

ನಿರ್ದೇಶನಕ್ಕೆ ಇಳಿದ ಸೃಜನ್ ಲೋಕೇಶ್; ಮೊದಲ ಚಿತ್ರದಲ್ಲೇ ಮಗನಿಗೆ ಚಾನ್ಸ್
ಜಿಎಸ್​ಟಿ ತಂಡ
Follow us
ರಾಜೇಶ್ ದುಗ್ಗುಮನೆ
|

Updated on: Aug 22, 2023 | 7:10 AM

ನಟ ಸೃಜನ್ ಲೋಕೇಶ್ ಅವರ ಕುಟುಂಬ ಈ ಮೊದಲಿನಿಂದಲೂ ಕಲಾ ಸೇವೆ ಮಾಡುತ್ತಲೇ ಬರುತ್ತಿದೆ. ಸೃಜನ್ ಲೋಕೇಶ್ (Srujan Lokesh) ತಾತ ಸುಬ್ಬಯ್ಯ ನಾಯ್ಡು ರಂಗಭೂಮಿ ಕಲಾವಿದರಾಗಿದ್ದರು. ಅವರು ಸಿನಿಮಾಗಳಲ್ಲೂ ನಟಿಸಿದ್ದಾರೆ. ಸೃಜನ್ ತಂದೆ-ತಾಯಿ ಲೋಕೇಶ್ ಹಾಗೂ ಗಿರಿಜಾ ಲೋಕೇಶ್ ಅವರು ಚಿತ್ರರಂಗಕ್ಕೆ ನೀಡಿದ ಕೊಡುಗೆ ಅಪಾರ. ಲೋಕೇಶ್-ಗಿರಿಜಾ ಮಕ್ಕಳಾದ ಸೃಜನ್ ಹಾಗೂ ಪೂಜಾ ಚಿತ್ರರಂಗದಲ್ಲಿ ತೊಡಗಿಕೊಂಡಿದ್ದಾರೆ. ನಿರೂಪಕನಾಗಿ, ನಟನಾಗಿ ಸೃಜನ್ ಗಮನ ಸೆಳೆದಿದ್ದಾರೆ. ಈಗ ಅವರು ನಿರ್ದೇಶನಕ್ಕೆ ಇಳಿದಿದ್ದಾರೆ. ಅವರ ನಿರ್ದೇಶನದ ಮೊದಲ ಚಿತ್ರದಲ್ಲಿ ಮಗ ಸುಕೃತ್ ಕೂಡ ನಟಿಸುತ್ತಿದ್ದಾನೆ ಅನ್ನೋದು ವಿಶೇಷ.

‘ಜಿಎಸ್​ಟಿ’ ಚಿತ್ರವನ್ನು ಸೃಜನ್ ಲೋಕೇಶ್ ನಿರ್ದೇಶನ ಮಾಡುತ್ತಿದ್ದಾರೆ. ಹಲವು ಸೂಪರ್ ಹಿಟ್ ಚಿತ್ರಗಳನ್ನು ನೀಡಿರುವ ಸಂದೇಶ್​ ಅವರು ಈ ಚಿತ್ರವನ್ನು ನಿರ್ಮಾಣ ಮಾಡುತ್ತಿದ್ದಾರೆ. ಸಂದೇಶ್ ಪ್ರೊಡಕ್ಷನ್ಸ್ ಬ್ಯಾನರ್ ಅಡಿಯಲ್ಲಿ ಚಿತ್ರ ಮೂಡಿಬರಲಿದೆ. ಈ ಚಿತ್ರದ ಮುಹೂರ್ತ ಇತ್ತೀಚೆಗೆ ಬಂಡೆ ಮಹಾಕಾಳಿ ದೇವಸ್ಥಾನದಲ್ಲಿ ನೆರವೇರಿದೆ. ಮೊದಲ ದೃಶ್ಯಕ್ಕೆ ಸಂದೇಶ್ ನಾಗರಾಜ್ ಆರಂಭ ಫಲಕ ತೋರಿಸಿದರು. ಕ್ಯಾಮೆರಾಗೆ ಗಿರಿಜಾ ಲೋಕೇಶ್ ಚಾಲನೆ ಮಾಡಿದರು. ಇನ್ನು, ಪಿ.ಶೇಷಾದ್ರಿ, ಟಿ.ಎಸ್.ನಾಗಾಭರಣ, ತಾರಾ, ಶೃತಿ, ಸುಂದರರಾಜ್, ನಿರೂಪ್ ಭಂಡಾರಿ ಮೊದಲಾದವರು ಆಗಮಿಸಿ ತಂಡಕ್ಕೆ ಶುಭಕೋರಿದ್ದಾರೆ.

ಸೃಜನ್ ಅವರ ಲಕ್ಕಿ ಸಂಖ್ಯೆ 7. ಎಲ್ಲವೂ ಈ ಲಕ್ಕಿ ನಂಬರ್​ಗೆ ಕನೆಕ್ಟ್ ಆಗಿದೆ. ಇದಕ್ಕೆ ಕಾರಣ ವಿವರಿಸಿದ್ದಾರೆ. ಸದ್ಯ ನಾವು 2023ನೇ ಇಸವಿಯಲ್ಲಿದ್ದೇವೆ. 2+0+2+3 ಮಾಡಿದರೆ ಬರೋದು 7. ಸೃಜನ್ ಲೋಕೇಶ್ ನಟನೆಯ 25ನೇ ಸಿನಿಮಾ. 2+5 ಕೂಡಿದರೂ ಏಳೇ ಬರುತ್ತದೆ.  ಇನ್ನು ಸಂದೇಶ್ ಪ್ರೊಡಕ್ಷನ್ಸ್ ನಿರ್ಮಾಣದ 34ನೇ ಸಿನಿಮಾ ಇದು. 3+4 ಕೂಡಿದಾಗ ಬರೋದು ಏಳು. ಈ ವಿಚಾರವನ್ನು ಸೃಜನ್ ಲೋಕೇಶ್ ಹಂಚಿಕೊಂಡರು.

ಸುಬ್ಬಯ್ಯ ನಾಯ್ಡು ಸಿನಿಮಾದಲ್ಲಿ ಲೋಕೇಶ್ ಬಾಲ ಕಲಾವಿದನಾಗಿ ನಟಿಸಿದ್ದರು. ಲೋಕೇಶ್ ಸಿನಿಮಾದಲ್ಲಿ ಸೃಜನ್ ಬಾಲ ಕಲಾವಿದರಾಗಿದ್ದರು. ಈಗ ಸೃಜನ್ ಸಿನಿಮಾದಲ್ಲಿ ಸುಕೃತ್ ಬಾಲ ಕಲಾವಿದನಾಗಿ ನಟಿಸುತ್ತಿದ್ದಾನೆ. ಈ ಮೂಲಕ ಈ ಕುಟುಂಬದ ನಾಲ್ಕನೇ ಜನರೇಶನ್ ನಟನೆಗೆ ಕಾಲಿಟ್ಟಿದೆ. ಸೃಜನ್ ನಿರ್ದೇಶನದ ಮೊದಲ ಸಿನಿಮಾದಲ್ಲಿ ಗಿರಿಜಾ ಲೋಕೇಶ್ ಕೂಡ ನಟಿಸುತ್ತಿದ್ದಾರೆ.

ಇದನ್ನೂ ಓದಿ: ಸೃಜನ್ ಲೋಕೇಶ್ ನಿರೂಪಣೆಯಲ್ಲಿ ಹೊಸ ರಿಯಾಲಿಟಿ ಶೋ ‘ಫ್ಯಾಮಿಲಿ ಗ್ಯಾಂಗ್​ಸ್ಟಾರ್ಸ್’; ಕಿರುತೆರೆ ಕಲಾವಿದರ ದಂಡು

‘ಜಿಎಸ್​ಟಿ’ ಚಿತ್ರಕ್ಕೆ ‘ಘೋಸ್ಟ್ ಇನ್ ಟ್ರಬಲ್’ ಎಂಬ ಕ್ಯಾಪ್ಶನ್ ನೀಡಲಾಗಿದೆ. ದೆವ್ವಗಳೂ ಸಮಸ್ಯೆಯಲ್ಲಿವೆ ಅನ್ನೋದು ಇದರ ಅರ್ಥ. ಈಗಾಗಲೇ ಸಿನಿಮಾಗೆ ಶೂಟಿಂಗ್ ಕೂಡ ಆರಂಭ ಆಗಿದೆ. ಈ ಚಿತ್ರದಲ್ಲಿ ಗಿರಿಜಾ ಲೋಕೇಶ್, ಪ್ರಮೋದ್ ಶೆಟ್ಟಿ, ರಜನಿ ಭಾರದ್ವಾಜ್, ನಿವೇದಿತಾ, ಅರವಿಂದ್ ರಾವ್, ತಬಲ ನಾಣಿ, ರವಿಶಂಕರ್ ಗೌಡ, ವಿನೋದ್ ಗೊಬ್ಬರಗಾಲ ಮೊದಲಾದವರು ಬಣ್ಣ ಹಚ್ಚಿದ್ದಾರೆ. ಚಂದನ್ ಶೆಟ್ಟಿ ಸಂಗೀತ ಸಂಯೋಜನೆ ಸಿನಿಮಾಗಿದೆ.

ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ

ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ