ಸೃಜನ್ ಲೋಕೇಶ್ ನಿರೂಪಣೆಯಲ್ಲಿ ಹೊಸ ರಿಯಾಲಿಟಿ ಶೋ ‘ಫ್ಯಾಮಿಲಿ ಗ್ಯಾಂಗ್​ಸ್ಟಾರ್ಸ್’; ಕಿರುತೆರೆ ಕಲಾವಿದರ ದಂಡು

Srujan Lokesh: ಇತ್ತೀಚೆಗೆ ಸೃಜನ್ ಲೋಕೇಶ್ ಅವರು ನಿರೂಪಣೆಗಿಂತ ಜಡ್ಜ್​ ಆಗಿಯೇ ಕಾಣಿಸಿಕೊಂಡಿದ್ದರು. ಇದೇ ಥೀಮ್​ನಲ್ಲಿ ಹೊಸ ಪ್ರೋಮೋ ಮೂಡಿಬಂದಿದೆ.

ಸೃಜನ್ ಲೋಕೇಶ್ ನಿರೂಪಣೆಯಲ್ಲಿ ಹೊಸ ರಿಯಾಲಿಟಿ ಶೋ ‘ಫ್ಯಾಮಿಲಿ ಗ್ಯಾಂಗ್​ಸ್ಟಾರ್ಸ್’; ಕಿರುತೆರೆ ಕಲಾವಿದರ ದಂಡು
ಸೃಜನ್ ಲೋಕೇಶ್​
Follow us
ರಾಜೇಶ್ ದುಗ್ಗುಮನೆ
|

Updated on:May 25, 2023 | 8:40 AM

ನಟ ಸೃಜನ್ ಲೋಕೇಶ್ (Srujan Lokesh) ಅವರು ನಟನಾಗಿ, ರಿಯಾಲಿಟಿ ಶೋ ಜಡ್ಜ್​ ಹಾಗೂ ನಿರೂಪಕನಾಗಿ ಗಮನ ಸೆಳೆದಿದ್ದಾರೆ. ಅವರ ಖ್ಯಾತಿ ದಿನಕಳೆದಂತೆ ಹೆಚ್ಚುತ್ತಲೇ ಇದೆ. ಅವರು ವೇದಿಕೆ ಏರಿದರು ಎಂದರೆ ಅಲ್ಲಿ ನಗು ಗ್ಯಾರಂಟಿ. ಈಗ ಅವರು ಫ್ಯಾಮಿಲಿ ಗ್ಯಾಂಗ್ ಕಟ್ಟಿಕೊಂಡು ಬರುತ್ತಿದ್ದಾರೆ. ಅರ್ಥಾತ್ ಕಲರ್ಸ್ ಕನ್ನಡದಲ್ಲಿ ಆರಂಭ ಆಗುತ್ತಿರುವ ಹೊಸ ರಿಯಾಲಿಟಿ ಶೋ ‘ಫ್ಯಾಮಿಲಿ ಗ್ಯಾಂಗ್​ಸ್ಟಾರ್ಸ್​’ಗೆ (Family Gangstars) ಸೃಜನ್ ಲೋಕೇಶ್ ನಿರೂಪಣೆ ಇರಲಿದೆ. ಕಲರ್ಸ್ ಕನ್ನಡ ವಾಹಿನಿಯ ಸೋಶಿಯಲ್ ಮೀಡಿಯಾ ಖಾತೆಯಲ್ಲಿ ಈ ಪ್ರೋಮೋ ಹಂಚಿಕೊಳ್ಳಲಾಗಿದೆ. ಈ ವಿಡಿಯೋ ಮೆಚ್ಚುಗೆ ಪಡೆದಿದೆ.

ಇತ್ತೀಚೆಗೆ ಸೃಜನ್ ಲೋಕೇಶ್ ಅವರು ನಿರೂಪಣೆಗಿಂತ ಜಡ್ಜ್​ ಆಗಿಯೇ ಕಾಣಿಸಿಕೊಂಡಿದ್ದರು. ಇದೇ ಥೀಮ್​ನಲ್ಲಿ ಹೊಸ ಪ್ರೋಮೋ ಮೂಡಿಬಂದಿದೆ. ಸೃಜನ್ ಲೋಕೇಶ್ ಅವರನ್ನು ಕೆಲವರು ಕಿಡ್ನ್ಯಾಪ್ ಮಾಡಿ ಕುರ್ಚಿಮೇಲೆ ಕಟ್ಟಿರುತ್ತಾರೆ. ‘ಟಾಕಿಂಗ್ ಸ್ಟಾರ್ ಸೈಲೆಂಟ್ ಮೂಡ್​ನಲ್ಲಿದ್ದಾರೆ. ಜಡ್ಜ್​ ಆಗಿ ಕೂತಿದ್ದಾರಲ್ಲ, ಅಷ್ಟೇ ಮುಗೀತು ಇನ್ನು ನಿಲ್ಲೋಕೆ ಆಗಲ್ಲ’ ಎನ್ನುತ್ತಾರೆ ಕಿಡ್ನ್ಯಾಪರ್ಸ್​.

ಇದೇ ಸಮಯಕ್ಕೆ ಸೃಜನ್​ ಲೋಕೇಶ್​ಗೆ ಕರೆ ಬರುತ್ತದೆ. ‘ಫ್ಯಾಮಿಲಿ ಕಾಲಿಂಗ್​, ಒಂದೇ ಒಂದು ಬಾರಿ ಮಾತಾಡ್ತೀನಿ’ ಎನ್ನುತ್ತಾರೆ. ಕರೆ ಸ್ವೀಕರಿಸುತ್ತಿದ್ದಂತೆ ಕಲರ್ಸ್ ಕನ್ನಡ ಸೀರಿಯಲ್ ಜೋಡಿಗಳ ಎಂಟ್ರಿ ಆಗುತ್ತದೆ. ಅವರು ಬಂದು ಸೃಜನ್​​ನ ಬಚಾವ್ ಮಾಡುತ್ತಾರೆ. ‘ನಾನು ಒಬ್ನೇ ಬಂದ್ರೆ ಹಾವಳಿ, ಇನ್ನು, ಫ್ಯಾಮಿಲಿ ಕಟ್ಟಿಕೊಂಡು ಬರ್ತಿದೀನಿ. ಇನ್ನು ನಿತ್ಯ ದೀಪಾವಳಿ’ ಎಂದು ಸೃಜನ್ ಡೈಲಾಗ್ ಹೊಡೆಯುತ್ತಾರೆ.

ಇದನ್ನೂ ಓದಿ: ‘ನನ್ನಮ್ಮ ಸೂಪರ್ ಸ್ಟಾರ್​ ಜಡ್ಜ್​​ಗಳಿಗೆ ಸೃಜನ್ ಲೋಕೇಶ್​​ ವಿಶೇಷ ಗಿಫ್ಟ್’; ಗಳಗಳನೆ ಅತ್ತ ಅನುಪಮಾ ಗೌಡ​

‘ಕಲರ್ಸ್ ಸಂಸಾರಗಳ ಕಲರ್​ಫುಲ್ ಹಣಾಹಣಿ… ಫ್ಯಾಮಿಲಿ ಗ್ಯಾಂಗ್​ಸ್ಟಾರ್ಸ್’ ಎಂದು ಈ ಪ್ರೋಮೋಗೆ ಕ್ಯಾಪ್ಶನ್ ಈಡಲಾಗಿದೆ. ಇದು ರಿಯಾಲಿಟಿ ಗೇಮ್​ಶೋ. ‘ಲಕ್ಷ್ಮೀ ಬಾರಮ್ಮ’, ‘ತ್ರಿಪುರ ಸುಂದರಿ’, ‘ಭಾಗ್ಯ ಲಕ್ಷ್ಮೀ’ ಮೊದಲಾದ ಸೀರಿಯಲ್​ಗಳ ಕಾಲವಿದರು ರಿಯಾಲಿಟಿ ಗೇಮ್​ ಶೋನಲ್ಲಿ ಭಾಗಿ ಆಗಲಿದ್ದಾರೆ. ಈ ಶೋ ಯಾವ ರೀತಿಯಲ್ಲಿ ಮೂಡಿಬರಲಿದೆ ಎನ್ನುವ ಕುತೂಹಲ ಅಭಿಮಾನಿಗಳಲ್ಲಿ ಮೂಡಿದೆ.

ಈ ಪ್ರೋಮೋ ವೀಕ್ಷಕರಿಗೆ ಇಷ್ಟವಾಗಿದೆ. ಸೋಶಿಯಲ್ ಮೀಡಿಯಾ ಪೇಜ್​ನಲ್ಲಿ ಹಂಚಿಕೊಂಡ ವಿಡಿಯೋಗೆ ಎಲ್ಲರೂ ಮೆಚ್ಚುಗೆ ಸೂಚಿಸುತ್ತಿದ್ದಾರೆ. ಕಲರ್ಸ್ ಕನ್ನಡ ಧಾರಾವಾಹಿ ಕಲಾವಿದರನ್ನು ಒಂದೇ ವೇದಿಕೆ ಮೇಲೆ ನೋಡಲು ಫ್ಯಾನ್ಸ್ ಕಾದಿದ್ದಾರೆ. ಇದರ ಪ್ರಸಾರ ದಿನಾಂಕ ಇನ್ನಷ್ಟೇ ಅನೌನ್ಸ್ ಆಗಬೇಕಿದೆ.

ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ

Published On - 8:40 am, Thu, 25 May 23

ಅಜ್ಜನ ಜಾತ್ರೆ ಸಂಪನ್ನ: ಭಕ್ತರಲ್ಲಿ ಮೂರು ವಚನ ಕೇಳಿದ ಕೊಪ್ಪಳದ ಗವಿಶ್ರೀ
ಅಜ್ಜನ ಜಾತ್ರೆ ಸಂಪನ್ನ: ಭಕ್ತರಲ್ಲಿ ಮೂರು ವಚನ ಕೇಳಿದ ಕೊಪ್ಪಳದ ಗವಿಶ್ರೀ
Daily Devotional: ಮಾಘ ಸ್ನಾನದ ಹಿಂದಿನ ರಹಸ್ಯ ಹಾಗೂ ಮಹತ್ವ ತಿಳಿಯಿರಿ
Daily Devotional: ಮಾಘ ಸ್ನಾನದ ಹಿಂದಿನ ರಹಸ್ಯ ಹಾಗೂ ಮಹತ್ವ ತಿಳಿಯಿರಿ
Daily Horoscope: ಈ ರಾಶಿಯವರಿಗೆ ಇಂದು ಆರ್ಥಿಕವಾಗಿ ಲಾಭವಾಗಲಿದೆ
Daily Horoscope: ಈ ರಾಶಿಯವರಿಗೆ ಇಂದು ಆರ್ಥಿಕವಾಗಿ ಲಾಭವಾಗಲಿದೆ
ಪ್ರಿಯಕರನೊಂದಿಗೆ ಹೆಂಡತಿ ಹೋಗುತ್ತಿದ್ದ ಕಾರಿನ ಮೇಲೆ ಹತ್ತಿ ಕುಳಿತ ಗಂಡ!
ಪ್ರಿಯಕರನೊಂದಿಗೆ ಹೆಂಡತಿ ಹೋಗುತ್ತಿದ್ದ ಕಾರಿನ ಮೇಲೆ ಹತ್ತಿ ಕುಳಿತ ಗಂಡ!
ಅಯ್ಯೋ.. ಸಿಸಿಟಿವಿ ರಿಪೇರಿ ಮಾಡಲು ಬಂದಿದ್ದವನ ವಜ್ರದ ಉಂಗುರ ಬಿಡದ ಖದೀಮರು
ಅಯ್ಯೋ.. ಸಿಸಿಟಿವಿ ರಿಪೇರಿ ಮಾಡಲು ಬಂದಿದ್ದವನ ವಜ್ರದ ಉಂಗುರ ಬಿಡದ ಖದೀಮರು
ಗಾಂಧಿ ಭಾರತ ಒಂದು ಸರ್ಕಾರೀ ಕಾರ್ಯಕ್ರಮ, ಎಲ್ಲರೂ ಭಾಗವಹಿಸಬಹುದು: ಶಿವಕುಮಾರ್
ಗಾಂಧಿ ಭಾರತ ಒಂದು ಸರ್ಕಾರೀ ಕಾರ್ಯಕ್ರಮ, ಎಲ್ಲರೂ ಭಾಗವಹಿಸಬಹುದು: ಶಿವಕುಮಾರ್
ಮಹಾಕುಂಭದಲ್ಲಿ ಹೂವಿನ ಹಾರ ಮಾರುವ ಯುವತಿ ಸೌಂದರ್ಯಕ್ಕೆ ಫ್ಯಾನ್ ಆಗದವರೇ ಇಲ್ಲ
ಮಹಾಕುಂಭದಲ್ಲಿ ಹೂವಿನ ಹಾರ ಮಾರುವ ಯುವತಿ ಸೌಂದರ್ಯಕ್ಕೆ ಫ್ಯಾನ್ ಆಗದವರೇ ಇಲ್ಲ
ನಾನು ನಿಷ್ಠಾವಂತ ಕಾರ್ಯಕರ್ತ, ಸತೀಶ್ ಜಾರಕಿಹೊಳಿ ಹಿಂಬಾಲಕನಲ್ಲ: ಕಾರ್ಯಕರ್ತ
ನಾನು ನಿಷ್ಠಾವಂತ ಕಾರ್ಯಕರ್ತ, ಸತೀಶ್ ಜಾರಕಿಹೊಳಿ ಹಿಂಬಾಲಕನಲ್ಲ: ಕಾರ್ಯಕರ್ತ
ಸುಮ್ಮನಿರುವಂತೆ ಸತೀಶ್ ಹೇಳಿದರೂ ಕೂಗಾಟ ನಿಲ್ಲಿಸದ ಕಾರ್ಯಕರ್ತರು!
ಸುಮ್ಮನಿರುವಂತೆ ಸತೀಶ್ ಹೇಳಿದರೂ ಕೂಗಾಟ ನಿಲ್ಲಿಸದ ಕಾರ್ಯಕರ್ತರು!
ಈ ಸೀಸನ್​ನ ಕೊನೆಯ ನಾಮಿನೇಷನ್​ನಲ್ಲಿ ಮಂಜಣ್ಣ ಟಾರ್ಗೆಟ್
ಈ ಸೀಸನ್​ನ ಕೊನೆಯ ನಾಮಿನೇಷನ್​ನಲ್ಲಿ ಮಂಜಣ್ಣ ಟಾರ್ಗೆಟ್