ಸಿರಿಕನ್ನಡ ವಾಹಿನಿಯಲ್ಲಿ ಸಾಲು-ಸಾಲು ಮನರಂಜನೆ

Siri Kannada channel: ಕನ್ನಡದ 'ಸಿರಿ ಕನ್ನಡ' ವಾಹಿನಿಯು ಹಲವು ಹೊಸ ಮನರಂಜನಾತ್ಮಕ ಕಾರ್ಯಕ್ರಮಗಳನ್ನು ಪ್ರಸಾರ ಮಾಡುತ್ತಿದೆ. ಗೌರಿ-ಗಣೇಶ ಹಬ್ಬದ ಪ್ರಯುಕ್ತ ವಿಶೇಷ ಕಾರ್ಯಕ್ರಮಗಳನ್ನು ಪ್ರಸಾರ ಮಾಡುತ್ತಿದೆ.

ಸಿರಿಕನ್ನಡ ವಾಹಿನಿಯಲ್ಲಿ ಸಾಲು-ಸಾಲು ಮನರಂಜನೆ
ಸಿರಿ ಕನ್ನಡ
Follow us
ಮಂಜುನಾಥ ಸಿ.
|

Updated on: Sep 16, 2023 | 10:27 PM

ಕನ್ನಡದ ಜನಪ್ರಿಯ ಮನರಂಜನಾ (Entertaining) ಚಾನೆಲ್​ಗಳಲ್ಲಿ ಒಂದಾಗಿರುವ ಸಿರಿ ಕನ್ನಡ (Siri Kannada) ವಾಹನಿಯ ಹಲವು ಹೊಸ ಕಾರ್ಯಕ್ರಮಗಳನ್ನು ಹೊತ್ತು ಬಂದಿದೆ. ಕರ್ನಾಟಕದ ಹೆಸರಾಂತ ಹಾಸ್ಯ ದಿಗ್ಗಜರು ನಡೆಸಿಕೊಡುವ “ಹಾಸ್ಯ ದರ್ಬಾರ್ ಸೀಸನ್ 02” ಹಾಗೂ ತಾಯಿ – ಮಗು ಭಾಗವಹಿಸುವ “ಲಿಟಲ್ ಕಿಲಾಡೀಸ್” ಗೇಮ್ ಶೋ ಆರಂಭ ಆಗಿದೆ. ಹೊಸ ಕಾರ್ಯಕ್ರಮದ ಕುರಿತು ಪತ್ರಿಕಾಗೋಷ್ಠಿ ನಡೆಸಿ ಮಾಹಿತಿ ನೀಡಲಾಗಿದೆ.

ಸಿರಿಕನ್ನಡ ವಾಹಿನಿಯ ರಾಜೇಶ್ ರಾಜಘಟ್ಟ‌, “ಹಾಸ್ಯ ದರ್ಬಾರ್ ಸೀಸನ್ 2” ನಲ್ಲಿ ಭಾಗಿಯಾಗಿರುವ ಎಲ್ಲಾ ಹಾಸ್ಯ ದಿಗ್ಗಜರು ಹಾಗೂ “ಲಿಟಲ್ ಕಿಲಾಡೀಸ್” ಕಾರ್ಯಕ್ರಮದ ನಿರ್ದೇಶಕ ಮಂಜೇಶ್ ಮಾಹಿತಿ ನೀಡಿದರು. ನಿರೂಪಕಿ ರಶ್ಮಿತಾ ಚಂಗಪ್ಪ ಹಾಜರಿದ್ದರು. ರಾಜೇಶ್ ರಾಜಘಟ್ಟ ಮಾತನಾಡಿ, ”ನಾಡಿನ ಪ್ರತಿಯೊಬ್ಬ ವೀಕ್ಷಕರನ್ನು ತಲುಪುವಂತಹ ಎರಡು ಜನಪ್ರಿಯ ಕಾರ್ಯಕ್ರಮಗಳು ನಮ್ಮ ವಾಹಿನಿಯಲ್ಲಿ ಆರಂಭವಾಗಿದೆ. ಅದರಲ್ಲಿ ನಾಡಿನ ಪ್ರಮುಖ ಹಾಸ್ಯ ದಿಗ್ಗಜರು ನಡೆಸಿಕೊಡುವ ‘ಹಾಸ್ಯ ದರ್ಬಾರ್ ಸೀಸನ್ 2’ ಸೋಮವಾರದಿಂದ ಶುಕ್ರವಾರದವರೆಗೂ ರಾತ್ರಿ 8 ರಿಂದ 9 ರವರೆಗೂ ಪ್ರಸಾರವಾಗಲಿದೆ. ಹಾಗೂ ಮಕ್ಕಳು ಹಾಗೂ ಅಮ್ಮಂದಿರನ್ನು ಒಂದೇ ವೇದಿಕೆಯಲ್ಲಿ ಒಟ್ಟಾಗಿಸಿ ತಾಯಿ ಮಗುವಿನ ಭಾವುಕತೆ, ಹಾಸ್ಯ, ಆಟಗಳು, ಡ್ರಾಮಾ, ನಾಯಕತ್ವ ಗುಣ ಬೆಳೆಸುವ ಕ್ರಿಯೆಗಳನ್ನು ಈ ಆಟ ಒಳಗೊಂಡಿರಲಿದೆ” ಎಂದರು.

ಇದನ್ನೂ ಓದಿ:ಶುರು ಆಗ್ತಿದೆ ನೂರು ದಿನದ ಹಬ್ಬ: ಬಿಗ್​ಬಾಸ್ 10 ಪ್ರೋಮೋ ಬಿಡುಗಡೆ

” ಲಿಟಲ್ ಕಿಲಾಡೀಸ್” ಗೇಮ್ ಶೋ ಸೋಮವಾರದಿಂದ ಶುಕ್ರವಾರದ ವರೆಗೆ ಸಂಜೆ 6 ರಿಂದ 7 ಗಂಟೆಯವರೆಗೆ ಪ್ರಸಾರ ಆಗಲಿದೆ. ಕಿರುತೆರೆಯ ಜನಪ್ರಿಯ ನಟಿ ರಶ್ಮಿತಾ ಚಂಗಪ್ಪ ಈ ಕಾರ್ಯಕ್ರಮದ ನಿರೂಪಣೆ ಮಾಡುತ್ತಿದ್ದಾರೆ. ಈ ಎರಡು ಕಾರ್ಯಕ್ರಮಗಳು ಪ್ರೇಕ್ಷಕರ ಮೆಚ್ಚುಗೆಗೆ ಕಾರಣವಾಗಿದೆ ಹಾಗೂ ಉತ್ತಮವಾಗಿ ಮೂಡಿಬರುತ್ತಿದೆ ಮತ್ತು ಜನಮನ್ನಣೆ ಪಡೆದಿದೆ ಎಂದರು.

‘ಹಾಸ್ಯ ದರ್ಬಾರ್ ಸೀಸನ್ 2’ನಲ್ಲಿ ಹಿರೇಮಗಳೂರು ಕಣ್ಣನ್, ಮುಖ್ಯಮಂತ್ರಿ ಚಂದ್ರು, ರಿಚರ್ಡ್ ಲೂಯಿಸ್, ಪ್ರಾಣೇಶ್, ಪ್ರೊ .ಕೃಷ್ಣೇ ಗೌಡ, ಎಂ.ಎಸ್ ನರಸಿಂಹಮೂರ್ತಿ, ಮಿಮಿಕ್ರಿ ದಯಾನಂದ್, ಯಶವಂತ ಸರ್ ದೇಶಪಾಂಡೆ, ಗುಂಡುರಾವ್, ದುಂಡಿರಾಜ್, ನರಸಿಂಹ ಜೋಶಿ, ಮಹಾಮನೆ ಮುಂತಾದವರು ಕಾರ್ಯಕ್ರಮದ ಬಗ್ಗೆ ಮಾಹಿತಿ ನೀಡಿ, ಇಂತಹ ಕಾರ್ಯಕ್ರಮವನ್ನು ಪ್ರಸಾರ ಮಾಡುತ್ತಿರುವ “ಸಿರಿ ಕನ್ನಡ” ವಾಹಿನಿಯನ್ನು ಕೊಂಡಾಡಿದರು. ಗೌರಿಗಣೇಶ ಹಬ್ಬದ ಪ್ರಯುಕ್ತ ಹಲವು ಕಾರ್ಯಕ್ರಮಗಳನ್ನು ಸಿರಿಕನ್ನಡ ವಾಹಿನಿ ಪ್ರಸಾರ ಮಾಡಲಿದೆ. “ಲಿಟಲ್ ಕಿಲಾಡೀಸ್” ಕಾರ್ಯಕ್ರಮದಲ್ಲಿ “ಟಗರು’ ಖ್ಯಾತಿಯ ಮಾನ್ವಿತಾ ಕಾಮತ್ ಎಲ್ಲರ ಮನರಂಜಿಸಲಿದ್ದಾರೆ. ಇನ್ನೂ ಕೆಲವು ಕಾರ್ಯಕ್ರಮಗಳು ಸಹ ಪ್ರಸಾರ ಆಗಲಿವೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ