ಶುರು ಆಗ್ತಿದೆ ನೂರು ದಿನದ ಹಬ್ಬ: ಬಿಗ್ಬಾಸ್ 10 ಪ್ರೋಮೋ ಬಿಡುಗಡೆ
Bigg Boss Kannada: ಬಿಗ್ಬಾಸ್ ಕನ್ನಡ 10ನೇ ಸೀಸನ್ ಶೀಘ್ರವೇ ಪ್ರಸಾರ ಆರಂಭಿಸಲಿದೆ. ಬಿಗ್ಬಾಸ್ ಕನ್ನಡ 10ರ ಎರಡನೇ ಪ್ರೋಮೋ ಇಂದು (ಸೆಪ್ಟೆಂಬರ್ 14) ಬಿಡುಗಡೆ ಆಗಿದ್ದು, ಸುದೀಪ್, ಸಖತ್ ಸ್ಟೈಲಿಷ್ ಆಗಿ ಪ್ರೋಮೋನಲ್ಲಿ ಕಾಣಿಸಿಕೊಂಡಿದ್ದಾರೆ.
ಬಿಗ್ಬಾಸ್ (Bigg Boss) ಮತ್ತೆ ಬಂದಿದೆ. ಒಂಬತ್ತು ಯಶಸ್ವಿ ಸೀಸನ್ಗಳನ್ನು ಮುಗಿಸಿ ಇದೀಗ ಹತ್ತನೇ ಸೀಸನ್ಗೆ ತಯಾರಾಗಿದ್ದು, ಇಂದು (ಸೆಪ್ಟೆಂಬರ್ 14) ಬಿಗ್ಬಾಸ್ ಸೀಸನ್ 10ರ ಮೊದಲ ಪ್ರೋಮೋ ಎರಡನೇ ಪ್ರೋಮೋ ಬಿಡುಗಡೆ ಮಾಡಲಾಗಿದೆ. ಕೆಲವು ದಿನಗಳ ಹಿಂದೆ ಮೊದಲ ಪ್ರೋಮೋ ಬಿಡುಗಡೆ ಆಗಿತ್ತು, ಪ್ರೋಮೋನಲ್ಲಿ ಸಿಸಿಟಿವಿ ದೃಶ್ಯಗಳ ಮಾದರಿಯ ದೃಶ್ಯಗಳನ್ನು ಬಳಸಿಕೊಳ್ಳಲಾಗಿತ್ತು. ಈಗ ಬಿಡುಗಡೆ ಆಗಿರುವ ಪ್ರೋಮೋನಲ್ಲಿ ಸುದೀಪ್ ಕಾಣಿಸಿಕೊಂಡಿದ್ದಾರೆ.
‘ಬಿಗ್ ಬಾಸ್’ ರಿಯಾಲಿಟಿ ಶೋ ಅನ್ನು ನೂರು ದಿನದ ಹಬ್ಬ ಎಂದು ಪ್ರೋಮೋನಲ್ಲಿ ಕರೆದಿದ್ದು, ಇಡೀ ಊರೇ ಹಬ್ಬ ಆಚರಿಸಲು ತಯಾರಾಗುತ್ತಿರುವಂತೆ ಪ್ರೋಮೋನಲ್ಲಿ ಚಿತ್ರಿಸಲಾಗಿದೆ. ಜೊತೆಗೆ ಸುದೀಪ್ ಕೋಣೆಯೊಂದರಲ್ಲಿ ಕೂತು ತಮ್ಮ ಪಾಡಿಗೆ ತಾವು ಚದುರಂಗದ ಆಟ ಆಡುತ್ತಿರುವ ದೃಶ್ಯಗಳು ಸಹ ಪ್ರೋಮೋನಲ್ಲಿವೆ. ಆದರೆ ಪ್ರೋಮೋನಲ್ಲಿ, ಬಿಗ್ಬಾಸ್ ಕನ್ನಡ 10 ಯಾವ ದಿನದಿಂದ ಪ್ರಾರಂಭವಾಗುತ್ತದೆ ಎಂಬ ಮಾಹಿತಿ ಇಲ್ಲ.
ಆಟೋ ಡ್ರೈವರ್ಗಳು, ಸಣ್ಣ ಮಕ್ಕಳು, ಯುವಕರು ಎಲ್ಲರೂ ಬಿಗ್ಬಾಸ್ಗೆ ಕಾಯುತ್ತಿದ್ದಾರೆ ಎಂದು ಸೂಚಿಸುವ ದೃಶ್ಯಗಳು ಇದೀಗ ಬಿಡುಗಡೆ ಆಗಿರುವ ಬಿಗ್ಬಾಸ್ ಪ್ರೋಮೋನಲ್ಲಿವೆ. ಜೊತೆಗೆ ”ಊರ ಹಬ್ಬಕ್ಕೆ ಇಲ್ಲಿದೆ ರೀಸನ್; ಶುರುವಾಗ್ತಿದೆ ಹ್ಯಾಪಿ ಬಿಗ್ಬಾಸ್ ಕನ್ನಡ ಹತ್ತನೇ ಸೀಸನ್” ಎಂಬ ಕ್ಯಾಪ್ಷನ್ ಜೊತೆಗೆ ಪ್ರೋಮೋ ವಿಡಿಯೋವನ್ನು ಕಲರ್ಸ್ ಹಂಚಿಕೊಂಡಿದೆ. ಪ್ರೋಮೋ ಹಂಚಿಕೊಂಡ ಕೇವಲ ಒಂದು ಗಂಟೆಯಲ್ಲಿ 28 ಸಾವಿರಕ್ಕೂ ಹೆಚ್ಚು ಮಂದಿ ವಿಡಿಯೋವನ್ನು ಲೈಕ್ ಮಾಡಿದ್ದು, ಸಾವಿರಾರು ಮಂದಿ ಕಮೆಂಟ್ ಸಹ ಮಾಡಿದ್ದಾರೆ.
ಬಿಗ್ಬಾಸ್ 10ರ ಹೊಸ ಪ್ರೋಮೋ
View this post on Instagram
ಇದು ಹತ್ತನೇ ಸೀಸನ್ ಆಗಿರುವ ಕಾರಣ ತುಸು ಭಿನ್ನವಾಗಿ, ಅದ್ಧೂರಿಯಾಗಿ ಬಿಗ್ಬಾಸ್ ರಿಯಾಲಿಟಿ ಶೋ ಇರಲಿದೆ ಎನ್ನಲಾಗುತ್ತಿದೆ. ಸಾಮಾನ್ಯರೂ ಈ ಬಾರಿ ಬಿಗ್ಬಾಸ್ ಮನೆ ಸೇರುವ ಸಾಧ್ಯತೆಯನ್ನೂ ಅಲ್ಲಗಳೆಯುವಂತಿಲ್ಲ. ಬಿಗ್ಬಾಸ್ 10ರ ಮೊದಲ ಪ್ರೋಮೋ ಈ ಬಗ್ಗೆ ಸಣ್ಣ ಸುಳಿವೊಂದನ್ನು ಬಿಟ್ಟುಕೊಟ್ಟಿದೆ.
ಇನ್ನು ಈ ಬಾರಿ ಯಾವ ಯಾವ ಸ್ಪರ್ಧಿಗಳು ಬಿಗ್ಬಾಸ್ ಮನೆ ಸೇರಲಿದ್ದಾರೆ ಎಂಬ ಕುತೂಹಲ ಸಾಮಾನ್ಯ. ಕಳೆದ ಬಾರಿಯಂತೆ ಅನುಭವಿ ಸ್ಪರ್ಧಿಗಳು ಹಾಗೂ ಹೊಸ ಸ್ಪರ್ಧಿಗಳ ನಡುವೆ ಸ್ಪರ್ಧೆ ಮಾಡಿಸುತ್ತಾರೆಯೇ? ಅಥವಾ ಈ ಬಾರಿ ಸಂಪೂರ್ಣ ಹೊಸಬರನ್ನೇ ಕರೆತರುತ್ತಾರೆಯೋ ಕಾದು ನೋಡಬೇಕಿದೆ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ