ರಾಮನಿಗೆ ಕೌಂಟರ್ ಕೊಡಲು ಮಾಸ್ಟರ್ ಪ್ಲಾನ್ ಮಾಡಿದ ಭಾರ್ಗವಿ; ಸೀತಾಳಿಗೆ ಸಂಕಷ್ಟ
ಪ್ರಿಯಾಳಿಗೆ ಬಂದ ಹಣವನ್ನು ಸೀತಾಳಿಗೆ ಕೊಡಿಸುವ ವ್ಯವಸ್ಥೆ ಮಾಡು ಎಂದು ಅಶೋಕನ ಬಳಿ ರಾಮ ಕೇಳಿಕೊಳ್ಳುತ್ತಾನೆ. ಪ್ರಿಯಾ ಜೊತೆ ಈ ವಿಷಯ ಮಾತನಾಡು ಎಂದು ಹೇಳುತ್ತಾನೆ. ಇದೆಲ್ಲಾ ಕೇಳಿಸಿಕೊಂಡ ಮ್ಯಾನೇಜರ್ ಚರಣ್, ರಾಮನ ಚಿಕ್ಕಮ್ಮ ಭಾರ್ಗವಿಗೆ ವಿಷಯ ತಿಳಿಸುತ್ತಾನೆ.
‘ಸೀತಾ ರಾಮ’ (Seetha Raama Serial) ಧಾರಾವಾಹಿ (Serial) ಸಂಚಿಕೆ 45: ಶಾಲೆಯಿಂದ ಒಂದು ಚಿಕ್ಕ ಪ್ರವಾಸಕ್ಕೆ ಹೋಗಲು ಸೀತಮ್ಮನನ್ನು ಒಪ್ಪಿಸಿ ಎಂದು ಅಜ್ಜಿ ತಾತನ ಬಳಿ ಸಿಹಿ ಕೇಳಿಕೊಳ್ಳುತ್ತಾಳೆ ಸಿಹಿ. ಅದಕ್ಕೆ ಇಬ್ಬರ ಒಪ್ಪಿಗೆಯೂ ಸಿಗುತ್ತದೆ. ಸಿಹಿ ಮತ್ತು ಅವಳ ಗೆಳೆಯ ಶ್ರೇಯಸ್ ಇಬ್ಬರೂ ಸೇರಿ ಪಿಕ್ನಿಕ್ಗೆ ಏನೇನು ಬೇಕು ಎಂಬುದನ್ನು ಲಿಸ್ಟ್ ಮಾಡಿಕೊಂಡು ಬಜೆಟ್ ಲೆಕ್ಕ ಹಾಕುತ್ತಾರೆ. ಅಮ್ಮನಿಗೆ ಜಾಸ್ತಿ ಖರ್ಚು ಬರುತ್ತದೇಯೋ ಏನೋ ಎಂದು ಅನಗತ್ಯ ವಸ್ತುಗಳನ್ನು ತೆಗೆದುಕೊಳ್ಳದೇ ಎಲ್ಲವನ್ನೂ ಕ್ಯಾನ್ಸಲ್ ಮಾಡುತ್ತಾಳೆ. ಅದನ್ನು ನೋಡಿದ ಅಜ್ಜಿ ತಾತ ಅವಳಿಗೆ ಅಗತ್ಯವಿರುವ ಕೆಲವು ವಸ್ತುಗಳನ್ನು ತಂದು ಕೊಡುತ್ತಾರೆ. ಅಮ್ಮನ ಸ್ವಲ್ಪ ಭಾರ ಇಳಿಸಿದಂತಾಯಿತು ಎಂದು ಸಿಹಿಯೂ ಖುಷಿ ಪಡುತ್ತಾಳೆ.
ಇನ್ನು ಸೀತಾಳ ಅತ್ತಿಗೆ ರುದ್ರ ಪ್ರತಾಪನ ಕಾಟದಿಂದ ಹೈರಾಣವಾಗುತ್ತಾಳೆ. ದುಡ್ಡಿನ ಆಸೆಗೋಸ್ಕರ ಲಾಯರ್ ಹೇಳಿದ ಹಾಗೇ ಮಾಡುತ್ತಾ ಬಂದ ಅವಳಿಗೆ, ಸೀತಾಳ ಹಠ ನುಂಗಲಾರದ ಬಿಸಿ ತುಪ್ಪವಾಗುತ್ತದೆ. ಇನ್ನು ಲಕ್ಷ ಹಣ ಬಂದ ಖುಷಿಯಲ್ಲಿ ಪ್ರಿಯಾ ಅಶೋಕ್ಗೆ ಉಡುಗೊರೆ ನೀಡಲು ಶಾಪಿಂಗ್ಗೆ ಹೋಗುತ್ತಾಳೆ. ಏನು ತೆಗೆದುಕೊಳ್ಳಬೇಕು ಎಂದು ತಿಳಿಯದೇ ಅಂಗಡಿಯೆಲ್ಲಾ ಹುಡುಕಾಡುತ್ತಾಳೆ. ಕೊನೆಗೂ ಒಂದು ಉಡುಗೊರೆ ತೆಗೆದುಕೊಳ್ಳುತ್ತಾಳೆ.
ಇದನ್ನೂ ಓದಿ: ಟಿಆರ್ಪಿ ವಿವರ: ಎರಡನೇ ಸ್ಥಾನದಲ್ಲೇ ಮುಂದುವರಿದ ‘ಸೀತಾ ರಾಮ’; ಟಾಪ್ 5 ಧಾರಾವಾಹಿಗಳಿವು..
ಪ್ರಿಯಾಳಿಗೆ ಬಂದ ಹಣವನ್ನು ಸೀತಾಳಿಗೆ ಕೊಡಿಸುವ ವ್ಯವಸ್ಥೆ ಮಾಡು ಎಂದು ಅಶೋಕನ ಬಳಿ ರಾಮ ಕೇಳಿಕೊಳ್ಳುತ್ತಾನೆ. ಪ್ರಿಯಾ ಜೊತೆ ಈ ವಿಷಯ ಮಾತನಾಡು ಎಂದು ಹೇಳುತ್ತಾನೆ. ಇದೆಲ್ಲಾ ಕೇಳಿಸಿಕೊಂಡ ಮ್ಯಾನೇಜರ್ ಚರಣ್, ರಾಮನ ಚಿಕ್ಕಮ್ಮ ಭಾರ್ಗವಿಗೆ ವಿಷಯ ತಿಳಿಸುತ್ತಾನೆ. ಅದನ್ನು ಕೇಳಿದ ಅವಳು ಸೀತಾಳಿಗೆ ಇನ್ನಷ್ಟು ತೊಂದರೆ ಕೊಡಲು ಸ್ಯಾಲರಿ ಡೀಟೇಲ್ಸ್ ಕೇಳುತ್ತಾಳೆ. ಸೀತಾಳಿಗೆ ಬರಬೇಕಾದ ಹಣ ಅವಳ ಕೈ ಸೇರುತ್ತಾ? ಭಾರ್ಗವಿ ಆಟಕ್ಕೆ ಅಶೋಕ್ ಪೂರ್ಣವಿರಾಮ ಇಡುತ್ತಾನಾ? ಸೀತಾಳ ನಂಬಿಕೆ ಕಳೆದುಕೊಳ್ಳುತ್ತಾನಾ ರಾಮ್? ಕಾದು ನೋಡೋಣ.
ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 7:38 am, Fri, 15 September 23