AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಭಾರ್ಗವಿ ಸಂಚಿಗೆ ಬಲಿಯಾದ ಸೀತಾ; ಬೇರೆ ಖಾತೆಗೆ ಹೋದ ಹಣ ಮತ್ತೆ ಸಿಗುತ್ತಾ?

ಲಾಯರ್ ರುದ್ರ  ಪ್ರತಾಪ್, ಸೀತಾಳಿಗೆ ಫೋನ್ ಮಾಡುತ್ತಾನೆ. ತಾನು ಮನೆ ಮಾರಾಟ ಮಾಡುವುದಿಲ್ಲ, ಅದಕ್ಕೆ ಆಫೀಸ್ ನಿಂದ ವ್ಯವಸ್ಥೆ ಆಗಿದೆ ಎನ್ನುವಾಗ ರುದ್ರನಿಗೆ ಕೋಪ ಬಂದರೂ ಸೀತಾಳಿಗಾಗಿ ಖುಷಿಯಾದಂತೆ ನಟಿಸುತ್ತಾನೆ. ನಿಜವಾಗಿಯೂ ಸೀತಾಳಿಗೆ ಮನೆ ಮಾರಾಟ ಮಾಡುವ ಸಂದರ್ಭ ಒದಗಿ ಬರುತ್ತಾ? ರಾಮ್ ಸೀತಾಳಿಗೆ ಸಹಾಯ ಮಾಡುವಲ್ಲಿ ಯಶಸ್ವಿಯಾಗುತ್ತಾನಾ? ಕಾದು ನೋಡೋಣ.

ಭಾರ್ಗವಿ ಸಂಚಿಗೆ ಬಲಿಯಾದ ಸೀತಾ; ಬೇರೆ ಖಾತೆಗೆ ಹೋದ ಹಣ ಮತ್ತೆ ಸಿಗುತ್ತಾ?
ವೈಷ್ಣವಿ
TV9 Web
| Edited By: |

Updated on: Sep 14, 2023 | 7:45 AM

Share

‘ಸೀತಾ ರಾಮ’ (Seetha Raama Serial) ಧಾರಾವಾಹಿ (Serial) ಸಂಚಿಕೆ 44: ಮನೆ ಉಳಿಸಿಕೊಳ್ಳಲು ಮದುವೆಯಾಗು ಎಂದು ಅತ್ತಿಗೆ ಸೀತಾಗೆ ಒತ್ತಾಯ ಮಾಡುತ್ತಾಳೆ. ಆದರೆ ಸೀತಾ ಮಾತ್ರ ಅದಕ್ಕೆ ಒಪ್ಪಿಗೆ ಸೂಚಿಸುವುದಿಲ್ಲ. ತನಗೆ ಮದುವೆಯಾಗಿ ಮನೆ ಉಳಿಸಿಕೊಳ್ಳಬೇಕಾಗಿ ಬಂದಲ್ಲಿ ನನಗೆ ಮನೆಯೇ ಬೇಡ ಎನ್ನುತ್ತಾಳೆ. ಅವಳ ಅತ್ತಿಗೆಗೆ ತಾನು ಮಾಡಿದ ಪ್ಲಾನ್ ಹಾಳಾಯಿತಲ್ಲ ಎಂದು ನೊಂದುಕೊಳ್ಳುವುದರ ಜೊತೆಗೆ ರುದ್ರ ಪ್ರತಾಪನ ಕೈಯಲ್ಲಿ ಸಿಕ್ಕಿಹಾಕಿಕೊಳ್ಳಬೇಕಲ್ಲ ಎಂಬ ಭಯವೂ ಆಗುತ್ತದೆ.

ಇನ್ನು ಸೀತಾಳಿಗೆ ಹೋಗಬೇಕಾಗಿದ್ದ 25 ಲಕ್ಷ ರೂ. ಅವಳ ಗೆಳತಿ ಪ್ರಿಯಾಳಿಗೆ ಹೋಗುತ್ತದೆ. ತನಗೆ ಗೊತ್ತಿಲ್ಲದಂತೆ ದುಡ್ಡು ಬಂದಿರುವುದನ್ನು ನೋಡಿ ಬಾಸ್ ತನಗಾಗಿಯೇ ಪ್ರೀತಿಯ ರೂಪದಲ್ಲಿ ಕೊಟ್ಟಿದ್ದಾರೆ ಎಂದು ಸಂತೋಷ ಪಡುತ್ತಾಳೆ. ಯಾರಿಗೂ ಹೇಳಬೇಡ ಎಂದ ಮ್ಯಾನೇಜರ್ ಚರಣ್ ಮಾತನ್ನು ಮೀರಿ ರಾಮನಿಗೆ ವಿಷಯ ತಿಳಿಸುತ್ತಾಳೆ. ಅದನ್ನು ಕೇಳಿ ರಾಮನಿಗೆ ಸಿಡಿಲು ಬಡಿದಂತಾಗುತ್ತದೆ. ತಾನು ಹೇಳಿ ಮಾಡಿಸಿದ ಕೆಲಸ ಕೊನೆಯ ಹಂತದಲ್ಲಿ ಹೇಗೆ ಕೆಟ್ಟಿತು ಎಂಬುದು ಅವನಿಗೆ ತಿಳಿಯುವುದಿಲ್ಲ. ಇನ್ನು ಈ ವಿಷಯವನ್ನು ಚರಣ್ ಭಾರ್ಗವಿಗೆ ತಿಳಿಸುತ್ತಾನೆ. ದೇಸಾಯಿ ಮನೆಯನ್ನು ರಾಮ ರಾಜ್ಯ ಮಾಡಲು ಬಿಡಲಿಲ್ಲ ಎಂಬ ವಿಷಯ ಭಾರ್ಗವಿಗೆ ತುಂಬಾ ಖುಷಿ ಕೊಡುತ್ತದೆ.

ರಾಮ್, ನಾವು ಹಾಕಿದ ಹಣ ಪ್ರಿಯಾಳ ಖಾತೆಗೆ ಹೋಗಲು ಹೇಗೇ ಸಾಧ್ಯ ಎಂದು ಅಶೋಕ್ ಬಳಿ ಬಂದು ಕೇಳುತ್ತಾನೆ. ಏನು ಅರಿಯದ ಅಶೋಕ್ ಈ ಬಗ್ಗೆ ವಿಚಾರಿಸಿ ತಿಳಿಸುವುದಾಗಿ ರಾಮ್ ಗೆ ಭರವಸೆ ನೀಡುತ್ತಾನೆ. ಸೀತಾ ಬಳಿ ರಾಮ್ ಮನೆ ವಿಚಾರವಾಗಿ ಮಾತನಾಡುತ್ತಾನೆ. ಮನೆ ಉಳಿಸಿಕೊಳ್ಳಲು ಇನ್ನು ಕಡಿಮೆ ಸಮಯ ಇದೆ ಎಂಬುದನ್ನು ಸೀತಾ ಬಾಯಲ್ಲಿ ಕೇಳಿ ರಾಮ್ ಚಿಂತೆ ಮತ್ತು ಹೆಚ್ಚಾಗುತ್ತದೆ.

ಇದನ್ನೂ ಓದಿ: ಟಿಆರ್​ಪಿ ವಿವರ: ಎರಡನೇ ಸ್ಥಾನದಲ್ಲೇ ಮುಂದುವರಿದ ‘ಸೀತಾ ರಾಮ’; ಟಾಪ್ 5 ಧಾರಾವಾಹಿಗಳಿವು..

ಅದೇ ವೇಳೆ ಲಾಯರ್ ರುದ್ರ  ಪ್ರತಾಪ್ ಸೀತಾಳಿಗೆ ಫೋನ್ ಮಾಡುತ್ತಾನೆ. ತಾನು ಮನೆ ಮಾರಾಟ ಮಾಡುವುದಿಲ್ಲ, ಅದಕ್ಕೆ ಆಫೀಸ್ ನಿಂದ ವ್ಯವಸ್ಥೆ ಆಗಿದೆ ಎನ್ನುವಾಗ ರುದ್ರನಿಗೆ ಕೋಪ ಬಂದರೂ ಸೀತಾಳಿಗಾಗಿ ಖುಷಿಯಾದಂತೆ ನಟಿಸುತ್ತಾನೆ. ನಿಜವಾಗಿಯೂ ಸೀತಾಳಿಗೆ ಮನೆ ಮಾರಾಟ ಮಾಡುವ ಸಂದರ್ಭ ಒದಗಿ ಬರುತ್ತಾ? ರಾಮ್ ಸೀತಾಳಿಗೆ ಸಹಾಯ ಮಾಡುವಲ್ಲಿ ಯಶಸ್ವಿಯಾಗುತ್ತಾನಾ? ಕಾದು ನೋಡೋಣ.

ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ