ಹಿರಿಯ ನಟಿ ಭಾರತಿ ವಿಷ್ಣುವರ್ಧನ್​ ಮನೆಗೆ ಭೇಟಿ ನೀಡಿ ಆರೋಗ್ಯ ವಿಚಾರಿಸಿದ ವಿನೋದ್​ ರಾಜ್​

ಹಿರಿಯ ನಟಿ ಭಾರತಿ ವಿಷ್ಣುವರ್ಧನ್​ ಮನೆಗೆ ಭೇಟಿ ನೀಡಿ ಆರೋಗ್ಯ ವಿಚಾರಿಸಿದ ವಿನೋದ್​ ರಾಜ್​

ಮದನ್​ ಕುಮಾರ್​
|

Updated on: Feb 05, 2024 | 10:56 PM

ಮಂಡಿ ನೋವಿನಿಂದಾಗಿ ಹಿರಿಯ ನಟಿ ಭಾರತಿ ವಿಷ್ಣುವರ್ಧನ್​ ಅವರಿಗೆ ನಡೆದಾಡಲು ಕಷ್ಟವಾಗಿದೆ. ಆದ್ದರಿಂದ ಅವರು ವ್ಹೀಲ್ ಚೇರ್ ಬಳಸುತ್ತಿದ್ದಾರೆ. ಕಳೆದ 2 ತಿಂಗಳುಗಳಿಂದ ಅವರು ಎಲ್ಲಿಯೂ ಹೋಗಿಲ್ಲ. ಸದ್ಯ ಮನೆಯಲ್ಲೇ ಅವರು ವಿಶ್ರಾಂತಿ ತೆಗೆದುಕೊಳ್ಳುತ್ತಿದ್ದಾರೆ. ಬೆಡ್​ ರೆಸ್ಟ್​ನಲ್ಲಿ ಇರುವ ಭಾರತಿ ಅವರನ್ನು ಭೇಟಿ ಮಾಡಿ ವಿನೋದ್​ ರಾಜ್​ ಧೈರ್ಯ ತುಂಬಿದ್ದಾರೆ.

ನಟ ವಿನೋದ್​ ರಾಜ್​ ಅವರು ಹಿರಿಯ ನಟಿ ಭಾರತಿ ವಿಷ್ಣುವರ್ಧನ್​ (Bharathi Vishnuvardhan) ಅವರ ನಿವಾಸಕ್ಕೆ ಭೇಟಿ ನೀಡಿದ್ದಾರೆ. ಭಾರತಿ ವಿಷ್ಣುವರ್ಧನ್​ ಅವರಿಗೆ ಮಂಡಿನೋವು ಉಂಟಾಗಿದೆ. ಕಳೆದ ಕೆಲವು ತಿಂಗಳುಗಳಿಂದ ಅವರು ಈ ನೋವಿನಿಂದ ಬಳಲುತ್ತಿದ್ದಾರೆ. ಹಾಗಾಗಿ ಅವರ ಮನೆಗೆ ಬಂದು ವಿನೋದ್​ ರಾಜ್​ (Vinod Raj) ಅವರು ಆರೋಗ್ಯ ವಿಚಾರಿಸಿದ್ದಾರೆ. ಮಂಡಿ ನೋವಿನ (Knee Pain) ಕಾರಣದಿಂದ ಹಿರಿಯ ನಟಿಗೆ ನಡೆದಾಡಲು ಕಷ್ಟ ಆಗಿದೆ. ಹಾಗಾಗಿ ಅವರು ವ್ಹೀಲ್ ಚೇರ್ ಬಳಸುತ್ತಿದ್ದಾರೆ. ಎರಡು ತಿಂಗಳಿಂದ ಭಾರತಿ ಅವರು ಎಲ್ಲಿಯೂ ಹೋಗಿಲ್ಲ. ಮನೆಯಲ್ಲಿಯೇ ಅವರು ವಿಶ್ರಾಂತಿ ಪಡೆಯುತ್ತಿದ್ದಾರೆ. ಸದ್ಯ ಬೆಡ್​ ರೆಸ್ಟ್​ನಲ್ಲಿ ಇರುವ ಅವರನ್ನು ಭೇಟಿ ಮಾಡಿದ ವಿನೋದ್​ ರಾಜ್​ ಧೈರ್ಯ ತುಂಬಿದ್ದಾರೆ. ಈ ಸಂದರ್ಭದಲ್ಲಿ ವಿಷ್ಣುವರ್ಧನ್​ ಅವರ ಅಳಿಯ, ನಟ ಅನಿರುದ್ಧ್​ ಜತ್ಕರ್​ ಕೂಡ ಜೊತೆಗಿದ್ದರು. 2023ರ ಡಿಸೆಂಬರ್​ ತಿಂಗಳಲ್ಲಿ ತಾಯಿ ಲೀಲಾವತಿ ಅವರನ್ನು ವಿನೋದ್​ ರಾಜ್​ ಕಳೆದುಕೊಂಡಿದ್ದರು. ತಾಯಿಯ ಸ್ಮಾರಕ ನಿರ್ಮಾಣ ಕಾರ್ಯ ನಡೆಯುತ್ತಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ