Video: ಟ್ರೀಟ್ಮೆಂಟ್ ಕೊಡಲ್ಲ ಏನ್ ಮಾಡ್ಕೋತೀರೋ ಮಾಡ್ಕೊಳಿ ಎಂದು ರೋಗಿಯ ತಂದೆಯ ಕಪಾಳಕ್ಕೆ ಬಾರಿಸಿದ ವೈದ್ಯೆ
ವೈದ್ಯೋ ನಾರಾಯಣೋ ಹರಿಃ ಅಂತಾರೆ, ಜನರ ಜೀವವನ್ನು ಕಾಪಾಡುವ ದೇವರು ಎಂದೇ ಜನರು ಭಾವಿಸಿದ್ದಾರೆ. ಆದರೆ ವೈದ್ಯರು ರಾಕ್ಷಸರಂತೆ ನಡೆದುಕೊಂಡಿರುವ ಘಟನೆ ಅಹಮದಾಬಾದ್ನಲ್ಲಿ ನಡೆದಿದೆ. ವೈದ್ಯೆಯೊಬ್ಬರು ರೋಗಿಯ ತಂದೆಗೆ ಕಪಾಳಮೋಕ್ಷ ಮಾಡಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಚಿಕಿತ್ಸೆ ಕೊಡಲ್ಲ ಏನು ಮಾಡುತ್ತೀರೋ ಮಾಡಿ ಎಂದು ಹೇಳುತ್ತಾ ಆಶಿಕ್ ಹರಿಭಾಯ್ ಚಾವ್ಡಾ ಎಂಬ ವ್ಯಕ್ತಿಗೆ ವೈದ್ಯೆ ಕಪಾಳಕ್ಕೆ ಹೊಡೆದಿದ್ದಾರೆ. ಘಟನೆ ಅಹಮದಾಬಾದ್‌ನ ಸೋಲಾ ಸಿವಿಲ್ ಆಸ್ಪತ್ರೆಯಲ್ಲಿ ನಡೆದಿದ
ಅಹಮದಾಬಾದ್, ಅಕ್ಟೋಬರ್ 28: ವೈದ್ಯೋ ನಾರಾಯಣೋ ಹರಿಃ ಅಂತಾರೆ, ಜನರ ಜೀವವನ್ನು ಕಾಪಾಡುವ ದೇವರು ಎಂದೇ ಜನರು ಭಾವಿಸಿದ್ದಾರೆ. ಆದರೆ ವೈದ್ಯರು ರಾಕ್ಷಸರಂತೆ ನಡೆದುಕೊಂಡಿರುವ ಘಟನೆ ಅಹಮದಾಬಾದ್ನಲ್ಲಿ ನಡೆದಿದೆ. ವೈದ್ಯೆಯೊಬ್ಬರು ರೋಗಿಯ ತಂದೆಗೆ ಕಪಾಳಮೋಕ್ಷ ಮಾಡಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಚಿಕಿತ್ಸೆ ಕೊಡಲ್ಲ ಏನು ಮಾಡುತ್ತೀರೋ ಮಾಡಿ ಎಂದು ಹೇಳುತ್ತಾ ಆಶಿಕ್ ಹರಿಭಾಯ್ ಚಾವ್ಡಾ ಎಂಬ ವ್ಯಕ್ತಿಗೆ ವೈದ್ಯೆ ಕಪಾಳಕ್ಕೆ ಹೊಡೆದಿದ್ದಾರೆ. ಘಟನೆ ಅಹಮದಾಬಾದ್‌ನ ಸೋಲಾ ಸಿವಿಲ್ ಆಸ್ಪತ್ರೆಯಲ್ಲಿ ನಡೆದಿದೆ.
ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Latest Videos

