ವಂದೇ ಮಾತರಂ ಹಾಡಿ ಪ್ರಧಾನಿ ಮೋದಿ ಮನ ಗೆದ್ದ ಮಿಜೋರಾಂ ಬಾಲಕಿ

|

Updated on: Dec 06, 2024 | 8:18 PM

ಮಕ್ಕಳಿರಲಿ, ದೊಡ್ಡವರಿರಲಿ, ಪ್ರತಿಯೊಬ್ಬರೂ ಭಾರತ ದೇಶದ ಬಗ್ಗೆ ಗೌರವ, ದೇಶಪ್ರೇಮ ಹೊಂದಿರುತ್ತಾರೆ. ದೆಹಲಿಯ ಭಾರತ ಮಂಟಪದಲ್ಲಿ ಈಶಾನ್ಯ ಭಾರತದ ರಾಜ್ಯಗಳ ಸಿಎಂಗಳೊಂದಿಗೆ ಪ್ರಧಾನಿ ನರೇಂದ್ರ ಮೋದಿ ಅವರ ಸಮ್ಮುಖದಲ್ಲಿ ಪುಟ್ಟ ಬಾಲಕಿಯೊಬ್ಬಳು 'ವಂದೇ ಮಾತರಂ' ಹಾಡಿರುವ ವಿಡಿಯೋ ವೈರಲ್ ಆಗಿದೆ.

ದೆಹಲಿಯಲ್ಲಿ ಈಶಾನ್ಯ ರಾಜ್ಯಗಳ ಸಾಂಸ್ಕೃತಿಕ ವೈವಿಧ್ಯತೆಯನ್ನು ಪರಿಚಯಿಸಲು ಅಷ್ಟಲಕ್ಷ್ಮಿ ಉತ್ಸವ ಆಯೋಜಿಸಲಾಗಿದೆ. ಈ ಕಾರ್ಯಕ್ರಮವನ್ನು ಪ್ರಧಾನಿ ನರೇಂದ್ರ ಮೋದಿ ಉದ್ಘಾಟಿಸಿದ್ದಾರೆ. ಈ ವೇಳೆ ಈಶಾನ್ಯ ರಾಜ್ಯವಾದ ಮಿಜೋರಾಂನ ಪುಟ್ಟ ಬಾಲಕಿಯೊಬ್ಬಳು ಪ್ರಧಾನಿ ಮೋದಿ ಮತ್ತು ಈಶಾನ್ಯ ರಾಜ್ಯಗಳ ಇತರ ಮುಖ್ಯಮಂತ್ರಿಗಳು, ಸಚಿವರ ಸಮ್ಮುಖದಲ್ಲಿ ‘ವಂದೇ ಮಾತರಂ’ ಹಾಡಿರುವ ಸುಂದರ ವಿಡಿಯೋ ವೈರಲ್ ಆಗಿದೆ.

ಈ ಹಿಂದೆ, ಎಆರ್ ರೆಹಮಾನ್ ಅವರ ‘ವಂದೇ ಮಾತರಂ’ ಹಾಡನ್ನು ಇದೇ ಬಾಲಕಿ ಹಾಡುವ ವೀಡಿಯೊವನ್ನು ಮಿಜೋರಾಂನ ಮಾಜಿ ಮುಖ್ಯಮಂತ್ರಿ ಹಂಚಿಕೊಂಡಿದ್ದರು. ಪ್ರಧಾನಿ ನರೇಂದ್ರ ಮೋದಿ ಕೂಡ ಆ ವಿಡಿಯೋ ಶೇರ್ ಮಾಡಿದ್ದರು. ಆ ಪುಟ್ಟ ಹುಡುಗಿಯ ಹೆಸರು ಎಸ್ತರ್ ಹ್ನ್ಮೇಟ್. ಆಕೆ ಮಿಜೋರಾಂ ಮೂಲದವಳು. ಇಂದು ಮೋದಿ ಸಮ್ಮುಖದಲ್ಲಿ ಆಕೆ ವಂದೇ ಮಾತರಂ ಹಾಡಿ ಮನ ಗೆದ್ದಿದ್ದಾಳೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ