ಅರ್ಧ ಅಡಿಯಷ್ಟು ನೀರು ತುಂಬಿದ್ದರೂ ಶಾಸಕರು ತೆಪ್ಪದಲ್ಲಿ ಬಂದ್ರು ಮಾರಾಯ್ರೆ
ಅರ್ಧ ಅಡಿ ನೀರಲ್ಲಿ ನಡೆದು ಬರುವ ಬದಲು ತೆಪ್ಪದಲ್ಲಿ ಬಂದ ಕೊಳ್ಳೇಗಾಲ ಶಾಸಕ ಎನ್.ಮಹೇಶ್ ಅವರ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ.
ಚಾಮರಾಜನಗರ: ಅರ್ಧ ಅಡಿ ನೀರಲ್ಲಿ ನಡೆದು ಬರುವ ಬದಲು ತೆಪ್ಪದಲ್ಲಿ ಬಂದ ಶಾಸಕರ ಅಂದ ದರ್ಬಾರ್ನ ವಿಡಿಯೋ ಸಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ. ಸುರ್ವಣಾವತಿ ನದಿ ಪ್ರವಾಹಕ್ಕೆ ಯಳಂದೂರು ತಾಲೂಕಿನ ಮಾಂಬಳ್ಳಿ ಗ್ರಾಮ ಜಲಾವೃತಗೊಂಡಿತ್ತು. ಈ ವೇಳೆ ರಸ್ತೆ ಮೇಲೆ ನೀರು ಹರಿಯುತ್ತಿತ್ತು. ಹೀಗಾಗಿ ಪ್ರವಾಹ ವೀಕ್ಷಣೆಗೆಂದು ತೆರಳಿದ ಕೊಳ್ಳೇಗಾಲ ಶಾಸಕ ಎನ್.ಮಹೇಶ್ (N.Mahesh), ತೆಪ್ಪದಲ್ಲಿ ಕುಳಿತುಕೊಂಡು ಬಂದಿದ್ದಾರೆ. ಗಮನಿಸಬೇಕಾದ ಅಂಶವೆಂದರೆ ಆ ಸಂದರ್ಭದಲ್ಲಿ ಕೇವಲ ಅರ್ಧ ಅಡಿಯಷ್ಟು ನೀರಿದ್ದರೂ ಶಾಸಕರು ನಡೆದುಕೊಂಡು ಹೋಗುವ ಬದಲು ತೆಪ್ಪದಲ್ಲಿ ಬಂದಿದ್ದಾರೆ. ತೆಪ್ಪವನ್ನು ಅವರ ಬೆಂಗಲಿಗರು ತಳ್ಳಿಕೊಂಡು ಬಂದಿದ್ದು, ಸ್ವಲ್ಪ ದೂರದಲ್ಲಿ ತೆಪ್ಪದಿಂದ ಇಳಿದು ಶಾಸಕರು ನಡೆದುಕೊಂಡು ಪ್ರವಾಹ ಸ್ಥಿತಿ ವೀಕ್ಷಣೆ ಮಾಡಿದ್ದಾರೆ. ಕಳೆದ ಮೂರ್ನಾಲ್ಕು ದಿನಗಳ ಹಿಂದಿನ ವಿಡಿಯೋ ವೈರಲ್ (Video Viral) ಆಗುತ್ತಿದೆ.
ಮತ್ತಷ್ಟು ವಿಡಿಯೋ ಸ್ಟೋರಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published on: Sep 10, 2022 11:49 AM