ಭಾರಿ ಗಾತ್ರದ ಹಾವನ್ನು ನುಂಗುತ್ತಿದ್ದ ಮತ್ತೊಂದು ಹಾವು! ಉರಗ ರಕ್ಷಕರಿಂದ ರಕ್ಷಣೆ, ಮೈಜುಮ್ಮೆನ್ನಿಸುವ ವಿಡಿಯೋ ಇಲ್ಲಿದೆ ನೋಡಿ
ಕೋಲಾರ ತಾಲ್ಲೂಕಿನ ದೊಡ್ಡಹಸಾಳದಲ್ಲಿ ಹಾವೊಂದು ಮತ್ತೊಂದು ಬೃಹತ್ ಹಾವನ್ನೇ ಭಕ್ಷಿಸುತ್ತಿದ್ದ ಮೈಜುಮ್ಮೆನ್ನಿಸುವ ದೃಶ್ಯ ಕಂಡುಬಂದಿದೆ. ಉರಗ ರಕ್ಷಕ ನಾಗರಾಜ್ ಅವರ ಸಮಯಪ್ರಜ್ಞೆಯಿಂದಾಗಿ ಸಾವಿನ ದವಡೆಯಲ್ಲಿದ್ದ ಹಾವು ಬಚಾವಾಗಿದ್ದು, ಈ ಅಪರೂಪದ ರಕ್ಷಣಾ ಕಾರ್ಯಾಚರಣೆಯ ವಿಡಿಯೋ ಇಲ್ಲಿದೆ. ಸದ್ಯ ಈ ವಿಡಿಯೋ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗುತ್ತಿದೆ.
ಕೋಲಾರ, ಮಾರ್ಚ್ 30: ಕೋಲಾರ ಜಿಲ್ಲೆಯ ದೊಡ್ಡಹಸಾಳ ಗ್ರಾಮದ ಬಳಿ ಹಾವೊಂದು ಮತ್ತೊಂದು ಭಾರಿ ಗಾತ್ರದ ಹಾವನ್ನೇ ನುಂಗಲು ಯತ್ನಿಸಿದ ಅಪರೂಪದ ಘಟನೆ ನಡೆದಿದೆ. ವಿಷಯ ತಿಳಿದ ತಕ್ಷಣ ಸ್ಥಳಕ್ಕೆ ಧಾವಿಸಿದ ಉರಗ ರಕ್ಷಕ ನಾಗರಾಜ್, ಅತ್ಯಂತ ಜಾಣ್ಮೆಯಿಂದ ಕಾರ್ಯಾಚರಣೆ ನಡೆಸಿದ್ದಾರೆ. ಮತ್ತೊಂದು ಹಾವಿನ ಬಾಯಿಗೆ ಆಹಾರವಾಗುತ್ತಿದ್ದ ಹಾವನ್ನು ಸುರಕ್ಷಿತವಾಗಿ ಬಿಡಿಸುವಲ್ಲಿ ನಾಗರಾಜ್ ಯಶಸ್ವಿಯಾಗಿದ್ದಾರೆ. ಉರಗ ರಕ್ಷಕನ ಈ ಸಾಹಸದ ವಿಡಿಯೋ ಈಗ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ವೈರಲ್ ಆಗುತ್ತಿದೆ.
ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Loading...
Unable to load recommendations.
Follow Us