ಗಂಡ 12 ಸಾವಿರದ ಬಟ್ಟೆ ತೆಗೆದುಕೊಟ್ಟಿಲ್ಲ ಎಂದು ಕಣ್ಣೀರು ಹಾಕಿದ ಪತ್ನಿ: ನಾನು ಬಡವ ಕಣಮ್ಮ

Updated on: Feb 09, 2026 | 4:16 PM

12 ಸಾವಿರ ರೂ. ವಸ್ತುವನ್ನು ಪತಿ ನಿರಾಕರಿಸಿದ್ದಕ್ಕೆ ಪತ್ನಿ ಕಣ್ಣೀರು ಹಾಕಿದ ವಿಡಿಯೋ ವೈರಲ್ ಆಗಿದೆ. ಇದು ಮಧ್ಯಮ ವರ್ಗದ ಕುಟುಂಬಗಳಲ್ಲಿ ಆರ್ಥಿಕ ನಿರ್ವಹಣೆ, ಗೃಹಿಣಿಯರ ಆಸೆಗಳು ಮತ್ತು ಹಣದ ಮೌಲ್ಯದ ಕುರಿತು ದೊಡ್ಡ ಚರ್ಚೆಗೆ ಕಾರಣವಾಗಿದೆ. ಗೃಹಿಣಿ ಪತಿಯ ಮೇಲೆ ಅವಲಂಬಿತಳಾಗಿರುವುದು, ಹಾಗೂ ₹12,000 ದೊಡ್ಡ ಮೊತ್ತವೇ ಎಂಬ ವಿಷಯದ ಕುರಿತು ನೆಟ್ಟಿಗರು ಭಿನ್ನಾಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಈ ಘಟನೆ ಸಾಮಾಜಿಕ ಮಾಧ್ಯಮದಲ್ಲಿ ಆಳವಾದ ಸಂಭಾಷಣೆ ಹುಟ್ಟುಹಾಕಿದೆ.

ಮಹಿಳೆಯೊಬ್ಬಳು ತಾನು ಕೇಳಿದ 12 ಸಾವಿರ ರೂ. ವಸ್ತುವನ್ನು ಪತಿ ತೆಗೆದುಕೊಟ್ಟಿಲ್ಲ ಎಂದು ಕಣ್ಣೀರು ಹಾಕಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್​​ ಆಗಿದೆ. ಮಹಿಳೆ 12 ಸಾವಿರ ರೂ. ಬಟ್ಟೆ ಕೊಡಿಸುತ್ತಾರೆ ಎಂದು ಅಂಗಡಿಯಲ್ಲಿ ಒಂದು ಗಂಟೆ ಕೂತಿದ್ದಾಳೆ, ಆದ್ರೂ ಗಂಡ ತೆಗೆದುಕೊಟ್ಟಿಲ್ಲ ಎಂದು ಕಣ್ಣೀರು ಹಾಕಿದ್ದಾರೆ. ಇದಕ್ಕೆ ಗಂಡ ನಿರಾಕರಿಸಿದ್ದಾನೆ. ಈ ಕಾರಣಕ್ಕೆ ಚಿಕ್ಕ ಮಕ್ಕಳಂತೆ ಕಣ್ಣೀರು ಹಾಕಿದ್ದಾಳೆ. ಮಾಧ್ಯಮ ವರ್ಗದಲ್ಲಿ ಇಂತಹ ಆಸೆಗಳು ಸಹಜ, ಆದರೆ ಇಂತಹ ಆಸೆಗಳನ್ನು ಈಡೇರಿಸುವ ಮುನ್ನ ಮನೆಯ ಗಂಡಸಿನ ಪರಿಸ್ಥಿತಿಯನ್ನು ನೋಡಬೇಕು ಎಂದು ನೆಟ್ಟಿಗರು ಹೇಳಿದ್ದಾರೆ. ವಿಡಿಯೋದಲ್ಲಿ ಆಕೆಯ ಪುಟ್ಟ ಮಗು ತಾಯಿಯ ಕಣ್ಣೀರನ್ನು ಒರೆಸಿ ಸಮಾಧಾನ ಮಾಡುವುದನ್ನು ನೋಡಬಹುದು. ಈ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ದೊಡ್ಡ ಮಟ್ಟದ ಚರ್ಚೆಯನ್ನು ಹುಟ್ಟುಹಾಕಿದೆ. ಒಬ್ಬಳೇ ಮನೆಯಲ್ಲಿ ಕೆಲಸ ಮಾಡುವ ಗೃಹಿಣಿಗೆ ತನ್ನ ಆಸೆಗಳನ್ನು ಈಡೇರಿಸಿಕೊಳ್ಳಲು ಪತಿಯ ಮೇಲೆಯೇ ಅವಲಂಬಿತಳಾಗಬೇಕಾದ ಅಸಹಾಯಕತೆ ಇದು ಎಂದು ಒಂದು ಕಡೆ ವಾದವಾದರೆ. ಇನ್ನೊಂದು ಕಡೆ ಇಂದಿನ ದಿನಗಳಲ್ಲಿ ₹12,000 ಎಂಬುದು ಒಂದು ಮಧ್ಯಮ ವರ್ಗದ ಕುಟುಂಬಕ್ಕೆ ದೊಡ್ಡ ಮೊತ್ತ. ಕೇವಲ ಒಂದು ವಸ್ತುವಿಗಾಗಿ ಇಷ್ಟು ಹಣ ಖರ್ಚು ಮಾಡುವುದು ಸರಿಯಲ್ಲ. ಹಣದ ಮೌಲ್ಯ ತಿಳಿಯದೆ ಕಣ್ಣೀರು ಹಾಕುವುದು ಸಣ್ಣ ಬುದ್ಧಿ ಎಂದು ಹೇಳಲಾಗಿದೆ.

ವಿಡಿಯೋ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

 

Loading...
Unable to load recommendations.
Follow Us
ಅಕ್ಷಯ್​ ಪಲ್ಲಮಜಲು​​

ಅಕ್ಷಯ್ ಕುಮಾರ್ ಪಲ್ಲಮಜಲು ಅವರು ದಕ್ಷಿಣ ಕನ್ನಡ ಜಿಲ್ಲೆ, ಬಂಟ್ವಾಳ ತಾಲ್ಲೂಕಿನವರು. ಡಿಜಿಟಲ್ ಸುದ್ದಿ ಮಾಧ್ಯಮದಲ್ಲಿ​ 3 ವರ್ಷಗಳ ಅನುಭವ ಇದೆ. ಇದರ ಜತೆಗೆ ಸೋಶಿಯಲ್ ಮೀಡಿಯಾದ ಬಗ್ಗೆ ಹೆಚ್ಚಿನ ಆಸಕ್ತಿಯನ್ನು ಹೊಂದಿದ್ದಾರೆ, ಪ್ರಸ್ತುತ ಟಿವಿ9 ಕನ್ನಡದಲ್ಲಿ ಸೋಶಿಯಲ್​​​ ಮೀಡಿಯಾವನ್ನು ನೋಡಿಕೊಳ್ಳುತ್ತಿದ್ದಾರೆ. ಡಿಜಿಟಲ್ ಕ್ಷೇತ್ರದಲ್ಲಿ ಆಸಕ್ತಿಯನ್ನು ಹೊಂದಿದ್ದು, ಸೋಶಿಯಲ್​​​ ಮೀಡಿಯಾದಲ್ಲಿ ಇನ್ನೂ ಹೆಚ್ಚಿನ ವಿಚಾರಗಳನ್ನು ತಿಳಿದುಕೊಳ್ಳವ ಆಸಕ್ತಿ ಇದೆ. ಇದರ ಜತೆಗೆ ರಾಷ್ಟ್ರೀಯ ಸುದ್ದಿ ಮತ್ತು ಬ್ರೇಕಿಂಗ್​ ಸುದ್ದಿಗಳನ್ನು ಬರೆಯುತ್ತಾರೆ.

Read More