ಪುಣ್ಯಭೂಮಿಗೆ ಅದೇ ಜಾಗ ಬೇಕು: ಪಟ್ಟು ಹಿಡಿದ ವಿಷ್ಣುವರ್ಧನ್ ಅಭಿಮಾನಿಗಳು

Edited By:

Updated on: Aug 17, 2025 | 1:44 PM

ಅಭಿಮಾನ್ ಸ್ಟುಡಿಯೋದಲ್ಲಿ ಇದ್ದ ನಟ ವಿಷ್ಣುವರ್ಧನ್ ಸಮಾಧಿಯನ್ನು ಕೆಲ ದಿನಗಳ ಹಿಂದಷ್ಟೇ ನೆಲಸಮ ಮಾಡಲಾಯಿತು. ಆ ನಂತರ ವಿಷ್ಣುವರ್ಧನ್ ಅವರ ಅಭಿಮಾನಿಗಳು ತೀವ್ರವಾಗಿ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಇಂದು (ಆ.17) ಈ ಕುರಿತು ಅನಿರುದ್ಧ್ ಜತ್ಕರ್ ಅವರ ನಿವಾಸದಲ್ಲಿ ಅಭಿಮಾನಿಗಳ ಸಭೆ ಮಾಡಲಾಗಿದೆ.

ಅಭಿಮಾನ್ ಸ್ಟುಡಿಯೋದಲ್ಲಿ ಇದ್ದ ವಿಷ್ಣುವರ್ಧನ್ ಸಮಾಧಿಯನ್ನು (Vishnuvardhan Samadhi) ಕೆಲವು ದಿನಗಳ ಹಿಂದೆ ನೆಲಸಮ ಮಾಡಲಾಯಿತು. ಆ ಬಳಿಕ ವಿಷ್ಣುವರ್ಧನ್ ಅಭಿಮಾನಿಗಳು ತೀವ್ರ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಅನಿರುದ್ಧ್ ಜತ್ಕರ್ (Anirudh Jatkar) ಅವರ ನಿವಾಸದಲ್ಲಿ ಇಂದು (ಆಗಸ್ಟ್ 17) ಈ ಕುರಿತು ಅಭಿಮಾನಿಗಳ ಸಭೆ ಮಾಡಲಾಗಿದೆ. ಅದಕ್ಕೂ ಮುನ್ನ ಟಿವಿ9 ಜೊತೆ ಫ್ಯಾನ್ಸ್ ಮಾತನಾಡಿದರು. ‘ಕುಟುಂಬದವರ ಮಾತಿಗೆ ನಾವು ಬದ್ಧರಾಗಿ ಇರುತ್ತೇವೆ. ಯಾವುದೇ ಕಾರಣಕ್ಕೂ ನಾವು ಬೇರೆ ಜಾಗ ಕೇಳಲ್ಲ. ಆ ಜಾಗವನ್ನೇ ಖರೀದಿ ಮಾಡಬೇಕು ಎಂದರೂ ನಾವು ತಲಾ 1 ಲಕ್ಷ ರೂಪಾಯಿ ನೀಡಲು ಸಿದ್ಧರಾಗಿದ್ದೇವೆ. ಪುಣ್ಯಭೂಮಿಗೆ ಅದೇ ಜಾಗ ಬೇಕಾಗುತ್ತದೆ’ ಎಂದು ವಿಷ್ಣುವರ್ಧನ್ ಫ್ಯಾನ್ಸ್ (Vishnuvardhan Fans) ಹೇಳಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Published on: Aug 17, 2025 01:27 PM