Karnataka Assembly Election: ಕಲಬುರಗಿಯಲ್ಲಿ ವಿಶೇಷಚೇತನ ಮಹಿಳೆಯಿಂದ ಮತದಾನ; ವಿಡಿಯೋ ಇಲ್ಲಿದೆ
ಇಂದು (ಮೇ.10) ರಾಜ್ಯದೆಲ್ಲೆಡೆ ವಿಧಾನಸಭೆ ಚುನಾವಣೆ(Karnataka Assembly Election) ಮತದಾನ ಪ್ರಕ್ರಿಯೆ ಆರಂಭವಾಗಿದೆ. ಅದರಂತೆ ಎಲ್ಲರೂ ಕೂಡ ಮತಗಟ್ಟೆಗೆ ತೆರಳಿ ಮತದಾನ ಹಾಕುತ್ತಿದ್ದಾರೆ. ಇದೀಗ ನಗರದ ಎನ್ ವಿ ಕಾಲೇಜಿನಲ್ಲಿ ಇರುವ ಮತಗಟ್ಟೆ ಸಂಖ್ಯೆ 133 ರಲ್ಲಿ ವಿಶೇಷಚೇತನ ಮಹಿಳೆಯೊಬ್ಬರು ವೀಲ್ ಚೇರ್ನಲ್ಲಿ ಆಗಮಿಸಿ ಮತದಾನ ಮಾಡಿದ್ದಾರೆ.
ಕಲಬುರಗಿ: ಇಂದು (ಮೇ.10) ರಾಜ್ಯದೆಲ್ಲೆಡೆ ವಿಧಾನಸಭೆ ಚುನಾವಣೆ(Karnataka Assembly Election) ಮತದಾನ ಪ್ರಕ್ರಿಯೆ ಆರಂಭವಾಗಿದೆ. ಅದರಂತೆ ಎಲ್ಲರೂ ಕೂಡ ಮತಗಟ್ಟೆಗೆ ತೆರಳಿ ಮತದಾನ ಹಾಕುತ್ತಿದ್ದಾರೆ. ಇದೀಗ ನಗರದ ಎನ್ ವಿ ಕಾಲೇಜಿನಲ್ಲಿ ಇರುವ ಮತಗಟ್ಟೆ ಸಂಖ್ಯೆ 133 ರಲ್ಲಿ ವಿಶೇಷಚೇತನ ಮಹಿಳೆಯೊಬ್ಬರು ವೀಲ್ ಚೇರ್ನಲ್ಲಿ ಆಗಮಿಸಿ ಮತದಾನ ಮಾಡಿದ್ದಾರೆ. ಈ ಮೂಲಕ ಮತದಾನದ ಮಹತ್ವವನ್ನ ಸಾರಿದ್ದಾರೆ. ಇಂದು ರಾಜ್ಯದ 224 ಕ್ಷೇತ್ರದಲ್ಲಿ ಏಕಕಾಲದಲ್ಲಿ ಮತದಾನ ನಡೆಯುತ್ತಿದ್ದು, ಮತದಾರರು ಉತ್ಸಾಹದಿಂದ ಮತಗಟ್ಟೆಗೆ ಬಂದು ಮತದಾನ ಮಾಡುತ್ತಿದ್ದಾರೆ. ಮುಂಜಾನೆ 7 ಗಂಟೆಯಿಂದ ಮತದಾನ ಪ್ರಕ್ರಿಯೆ ಶುರುವಾಗಿದ್ದು, ಈಗಾಗಲೇ ಮತದಾರರು ಮತಗಟ್ಟೆಗೆ ಬಂದು ಮತ ಹಾಕುತ್ತಿದ್ದಾರೆ.
ಕರ್ನಾಟಕ ಚುನಾವಣಾ 2023 ಲೈವ್ ಅಪ್ಡೇಟ್ಸ್
ಇನ್ನಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ