ಮೈಸೂರು-ಬೆಂಗಳೂರು ಹೆದ್ದಾರಿಯಲ್ಲಿ ಹುಚ್ಚಾಟ ಮೆರೆದ ಖಾಸಗಿ ಬಸ್ ಚಾಲಕರ ಬಂಧನ ; ವಿಡಿಯೋ ವೈರಲ್
ಮೈಸೂರು-ಬೆಂಗಳೂರು ಹೆದ್ದಾರಿಯಲ್ಲಿ ಖಾಸಗಿ ಬಸ್ ಚಾಲಕ ನಿಯಮ ಉಲ್ಲಂಘಿಸಿ ಅತಿ ಸ್ಪೀಡ್ ಆಗಿ ರ್‍ಯಾಶ್ ಡ್ರೈವಿಂಗ್ ಮಾಡಿದ್ದಾನೆ. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು ವೈರಲ್ ವಿಡಿಯೋಗೆ ಚಾಲಕನ ವಿರುದ್ದ ನೆಟ್ಟಿಗರು ಆಕ್ರೋಶ ಹೊರ ಹಾಕಿದ್ದಾರೆ. ಸದ್ಯ ಪೊಲೀಸರು ಇಬ್ಬರು ಚಾಲಕರನ್ನು ಬಂಧಿಸಿದ್ದಾರೆ.
ಮಂಡ್ಯ, ಆಗಸ್ಟ್.29: ಮೈಸೂರು-ಬೆಂಗಳೂರು ದಶಪಥ ಹೆದ್ದಾರಿಯಲ್ಲಿ (Mysuru Bengaluru Expressway) ನಿಯಮ ಉಲ್ಲಂಘಿಸಿ VRL ಬಸ್ ಚಾಲಕ ಹುಚ್ಚಾಟ ಮೆರೆದಿದ್ದಾನೆ. ಸಾಮಾಜಿಕ ಜಾಲತಾಣದಲ್ಲಿ ಖಾಸಗಿ ಬಸ್ ಚಾಲಕನ ಹುಚ್ಚಾಟದ ವಿಡಿಯೋ ವೈರಲ್ ಆಗಿದೆ. ಸದ್ಯ ಸಂಚಾರ ನಿಯಮ ಉಲ್ಲಂಘನೆ ಮಾಡಿದ ಬಸ್ ಜಪ್ತಿ ಮಾಡಲಾಗಿದೆ. ಘಟನೆ ಸಂಬಂಧ ಶ್ರೀರಂಗಪಟ್ಟಣ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಆ.24 ರಂದು ಶ್ರೀರಂಗಪಟ್ಟಣದ ಬ್ರಹ್ಮಪುರದ ಬಳಿಯ ಮೈಸೂರು-ಬೆಂಗಳೂರು ಹೆದ್ದಾರಿಯಲ್ಲಿ ಖಾಸಗಿ ಬಸ್ ಚಾಲಕ ನಿಯಮ ಉಲ್ಲಂಘಿಸಿ ಅತಿ ಸ್ಪೀಡ್ ಆಗಿ ರ್‍ಯಾಶ್ ಡ್ರೈವಿಂಗ್ ಮಾಡಿದ್ದಾನೆ. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು ವೈರಲ್ ವಿಡಿಯೋಗೆ ಚಾಲಕನ ವಿರುದ್ದ ನೆಟ್ಟಿಗರು ಆಕ್ರೋಶ ಹೊರ ಹಾಕಿದ್ದಾರೆ. ನೆಟ್ಟಿಗರ X ಖಾತೆ ಮೂಲಕ ಪೊಲೀಸ್ ಇಲಾಖೆಗೆ ವೈರಲ್ ವಿಡಿಯೋ ತಲುಪಿದ್ದು ವೈರಲ್ ವಿಡಿಯೋ ಆಧರಿಸಿ ಶ್ರೀರಂಗಪಟ್ಟಣ ಗ್ರಾಮಾಂತರ ಪೋಲೀಸರು ಕಾರ್ಯಾಚರಣೆ ನಡೆಸಿ ಸಂಚಾರ ನಿಯಮ ಉಲ್ಲಂಘಿಸಿ ವಿರುದ್ದ ದಿಕ್ಕಿನಲ್ಲಿ ಬಸ್ ಓಡಿಸಿದ ಚಾಲಕ ಸೇರಿ ಬಸ್ ಜಪ್ತಿ ಮಾಡಿದ್ದಾರೆ. ಚಾಲಕರಾದ ಪ್ರಶಾಂತ್ ಹಾಗು ನೀಲಪ್ಪನನ್ನು ಬಂಧಿಸಲಾಗಿದೆ. ಚಾಲಕನ ಹುಚ್ಚಾಟದ ವಿಡಿಯೋವನ್ನು ಪ್ರಯಾಣಿಕರೊಬ್ಬರು ಮೊಬೈಲ್ ನಲ್ಲಿ ಸೆರೆಹಿಡಿದು ಸಾಮಾಜಿಕ ಜಾಲತಾಣಕ್ಕೆ ಅಪ್ಲೋಡ್ ಮಾಡಿದ್ದರು.
ಮತ್ತಷ್ಟು ವಿಡಿಯೋ ಸುದ್ದಿಗಳನ್ನು ನೋಡಲು ಇದರ ಮೇಲೆ ಕ್ಲಿಕ್ ಮಾಡಿ