AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Paralympics 2024: ಪ್ಯಾರಾಲಿಂಪಿಕ್ಸ್​ಗೆ ಅದ್ಧೂರಿ ಚಾಲನೆ: ಇಲ್ಲಿದೆ ವಿಡಿಯೋ

Paralympics 2024: ಪ್ಯಾರಾಲಿಂಪಿಕ್ಸ್​ಗೆ ಅದ್ಧೂರಿ ಚಾಲನೆ: ಇಲ್ಲಿದೆ ವಿಡಿಯೋ

ಝಾಹಿರ್ ಯೂಸುಫ್
|

Updated on:Aug 29, 2024 | 7:30 AM

Share

Paralympics 2024: 2020 ರಲ್ಲಿ ನಡೆದ ಟೋಕಿಯೋ ಪ್ಯಾರಾಲಿಂಪಿಕ್ಸ್​ನಲ್ಲಿ ಭಾರತದ 54 ಕ್ರೀಡಾಪಟುಗಳು ಭಾಗವಹಿಸಿದ್ದರು. ಈ ವೇಳೆ 5 ಚಿನ್ನದ ಪದಕ, 8 ಬೆಳ್ಳಿ ಪದಕ ಮತ್ತು 6 ಕಂಚಿನ ಪದಕ ಗೆಲ್ಲುವಲ್ಲಿ ಭಾರತೀಯರು ಯಶಸ್ವಿಯಾಗಿದ್ದರು. ಈ ಬಾರಿ 84 ಕ್ರೀಡಾಪಟುಗಳು ಭಾಗವಹಿಸುತ್ತಿರುವುದರಿಂದ ಭಾರತವು ಹೆಚ್ಚಿನ ಪದಕಗಳ ನಿರೀಕ್ಷೆಯಲ್ಲಿದೆ.

ಬಹುನಿರೀಕ್ಷಿತ ಪ್ಯಾರಾಲಿಂಪಿಕ್ಸ್​​ಗೆ ಅಧಿಕೃತ ಚಾಲನೆ ದೊರೆತಿದೆ. ಫ್ರಾನ್ಸ್​ನ ರಾಜಧಾನಿ ಪ್ಯಾರಿಸ್​ನಲ್ಲಿ ನಡೆದ ಉದ್ಘಾಟನಾ ಸಮಾರಂಭದಲ್ಲಿ 184 ದೇಶಗಳ ಕ್ರೀಡಾಪಟುಗಳು ಭಾಗವಹಿಸಿದ್ದಾರೆ. ಈ ಸಮಾರಂಭಕ್ಕೂ ಮುನ್ನ ಹಾಲಿವುಡ್ ನಟ ಜಾಕಿ ಚಾನ್ ಒಲಂಪಿಕ್ ಜ್ಯೋತಿಯನ್ನು ಹೊತ್ತು ತಂದರು. ಇನ್ನು ಈ ವರ್ಣರಂಜಿತ ಸಮಾರಂಭವನ್ನು ವೀಕ್ಷಿಸಲು 50,000 ಕ್ಕೂ ಹೆಚ್ಚು ಪ್ರೇಕ್ಷಕರು ಹಾಜರಿದ್ದರು. ರಾಷ್ಟ್ರಗಳ ಪರೇಡ್​ನಲ್ಲಿ ಭಾರತವನ್ನು ಸುಮಿತ್ ಆಂಟಿಲ್ ಮತ್ತು ಭಾಗ್ಯಶ್ರೀ ಜಾಧವ್ ಮುನ್ನಡೆಸಿದರು. ಈ ಬಾರಿ 84 ಭಾರತೀಯ ಸ್ಪರ್ಧಿಗಳು ಒಟ್ಟು 12 ಕ್ರೀಡೆಗಳಲ್ಲಿ ಸ್ಪರ್ಧಿಸಲಿದ್ದಾರೆ. ಇದರಲ್ಲಿ 38 ಸ್ಪರ್ಧಿಗಳು ಅಥ್ಲೆಟಿಕ್ಸ್​ನಲ್ಲಿ ಕಣಕ್ಕಿಳಿಯಲಿರುವುದು ವಿಶೇಷ. ಇದಲ್ಲದೆ, ಆರ್ಚರಿ, ಈಜು, ಟೇಬಲ್‌ ಟೆನಿಸ್‌, ಬ್ಯಾಡ್ಮಿಂಟನ್‌, ಸೈಕ್ಲಿಂಗ್‌, ಪವರ್‌ಲಿಫ್ಟಿಂಗ್‌, ರೋಯಿಂಗ್‌, ಶೂಟಿಂಗ್‌, ಜುಡೋ, ಪ್ಯಾರಾಕೆನೋಯಿಂಗ್‌, ಟೆಕ್ವಾಂಡೋ ಕ್ರೀಡೆಗಳಲ್ಲಿ ಭಾರತೀಯರು ಕಣಕ್ಕಿಳಿಯಲಿದ್ದಾರೆ.

17ನೇ ಆವೃತ್ತಿಯ ಪ್ಯಾರಾಲಿಂಪಿಕ್ಸ್ ಬುಧವಾರದಿಂದ (ಆ.28) ಆರಂಭವಾಗಿದ್ದು, ವಿಕಲಚೇತನರ ಈ ಕ್ರೀಡಾಕೂಟವು ಸೆಪ್ಟೆಂಬರ್ 8 ರವರೆಗೆ ನಡೆಯಲಿದೆ. ಈ ಬಾರಿಯ ಕ್ರೀಡಾಕೂಟದಲ್ಲಿ 184 ದೇಶಗಳ 4400 ಕ್ಕೂ ಹೆಚ್ಚಿನ ಕ್ರೀಡಾಳುಗಳು ಭಾಗವಹಿಸಲಿದ್ದಾರೆ. ಇವರಲ್ಲಿ 84 ಭಾರತೀಯ ಸ್ಪರ್ಧಿಗಳಿರುವುದರಿಂದ ಹೆಚ್ಚಿನ ಪದಕಗಳನ್ನು ನಿರೀಕ್ಷಿಸಲಾಗುತ್ತಿದೆ.

ಗುರುವಾರದಿಂದ ಭಾರತವು ಪ್ಯಾರಾಲಿಂಪಿಕ್ಸ್ ಅಭಿಯಾನ ಆರಂಭಿಸಲಿದ್ದು, ಆಗಸ್ಟ್ 29 ರಂದು ಭಾರತೀಯ ಕ್ರೀಡಾಪಟುಗಳು ಕಣಕ್ಕಿಳಿಯಲಿರುವ ಸ್ಪರ್ಧೆಗಳ ವೇಳಾಪಟ್ಟಿ ಇಲ್ಲಿದೆ…

12:00 PM ಬಳಿಕ- ಪ್ಯಾರಾ ಬ್ಯಾಡ್ಮಿಂಟನ್ ಮಿಶ್ರ ಡಬಲ್ಸ್: ನಿತೇಶ್ ಕುಮಾರ್/ತುಳಸಿಮತಿ ಮುರುಗೇಶನ್ vs ಸುಹಾಸ್ ಯತಿರಾಜ್/ಪಾಲಕ್ ಕೊಹ್ಲಿ

12:40 PM ಬಳಿಕ- ಪ್ಯಾರಾ ಬ್ಯಾಡ್ಮಿಂಟನ್ ಮಿಶ್ರ ಡಬಲ್ಸ್ SH6: ಗುಂಪು B – ಶಿವರಾಜನ್ ಸೋಲೈಮಲೈ/ನಿತ್ಯ ಶ್ರೀ ಸುಮತಿ ಶಿವನ್ vs ಮೈಲ್ಸ್ ಕ್ರೇಜ್ವ್ಸ್ಕಿ/ಜೇಸಿ ಸೈಮನ್ (ಯುಎಸ್ಎ)

14:00 PM- ಪ್ಯಾರಾ ಬ್ಯಾಡ್ಮಿಂಟನ್ ಮಹಿಳೆಯರ ಸಿಂಗಲ್ಸ್: ಮಾನಸಿ ಜೋಶಿ vs ಕೊನಿತಾ ಇಖ್ತಿಯಾರ್ ಸಯಕುರೊಹ್ (ಇಂಡೊನೇಷ್ಯಾ)

14:00 PM- ಪ್ಯಾರಾ ಬ್ಯಾಡ್ಮಿಂಟನ್ ಮಹಿಳೆಯರ ಸಿಂಗಲ್ಸ್ SL3: ಮನ್ದೀಪ್ ಕೌರ್ vs ಮರಿಯಮ್ ಎನಿಯೋಲಾ ಬೋಲಾಜಿ (ನೈಜೀರಿಯಾ)

14:34 PM – ಪ್ಯಾರಾ ಟೇಕ್ವಾಂಡೋ ವುಮೆನ್ಸ್ K44 -47kg: ಅರುಣಾ vs ನುರ್ಚಿಹಾನ್ ಎಕಿನ್ಸಿ

14:40 PM- ಪ್ಯಾರಾ ಬ್ಯಾಡ್ಮಿಂಟನ್ ಪುರುಷರ ಸಿಂಗಲ್ಸ್: ಸುಕಾಂತ್ ಕದಮ್ vs ಅಮೀನ್ ಬುರ್ಹಾನುದ್ದೀನ್

15:20 PM- ಪ್ಯಾರಾ ಬ್ಯಾಡ್ಮಿಂಟನ್ – ಪುರುಷರ ಸಿಂಗಲ್ಸ್ SL4: ಸುಹಾಸ್ ಯತಿರಾಜ್ vs ಹಿಕ್ಮತ್ ರಾಮ್ದಾನಿ

15:20 PM- ಪ್ಯಾರಾ ಬ್ಯಾಡ್ಮಿಂಟನ್ ಪುರುಷರ ಸಿಂಗಲ್ಸ್ SL4 ಗುಂಪು D: ತರುಣ್ vs ರೊಜೆರಿಯೊ ಜೂನಿಯರ್ ಕ್ಸೇವಿಯರ್ ಡಿ

16:00 PM- ಪ್ಯಾರಾ ಬ್ಯಾಡ್ಮಿಂಟನ್ – ಪುರುಷರ ಸಿಂಗಲ್ಸ್ SL3 ಗುಂಪು A: ನಿತೇಶ್ ಕುಮಾರ್ vs ಮನೋಜ್ ಸರ್ಕಾರ್

16:25 PM – ವುಮೆನ್ಸ್​ ಪ್ಯಾರಾ ಸೈಕ್ಲಿಂಗ್ ಟ್ರ್ಯಾಕ್ 3000m – ಜ್ಯೋತಿ ಗಡೇರಿಯಾ

16:30 PM – ಪ್ಯಾರಾ ಆರ್ಚರಿ ವುಮೆನ್ಸ್ – ಶೀತಲ್ ದೇವಿ (ST), ಸರಿತಾ (W2)

16:30 PM – ಪ್ಯಾರಾ ಆರ್ಚರಿ ಪುರುಷರ ರೌಂಡ್: ಹರ್ವಿಂದರ್ ಸಿಂಗ್ (ST)

16:40 PM – ಪ್ಯಾರಾ ಬ್ಯಾಡ್ಮಿಂಟನ್ – ಮಹಿಳೆಯರ ಸಿಂಗಲ್ಸ್ SL4 ಗುಂಪು C – ಪಾಲಕ್ ಕೊಹ್ಲಿ vs ಮಿಲೆನಾ ಸರ್ರೋ

 

 

Published on: Aug 29, 2024 07:29 AM