ಸೌಂದರ್ಯ ಜಗದೀಶ್ ಪತ್ನಿ ವಿರುದ್ಧ ಗಂಭೀರ ಆರೋಪ; 10 ಕೋಟಿ ರೂ.ಗೆ ಇತ್ತು ಬೇಡಿಕೆ
ನಿರ್ಮಾಪಕ ಸೌಂದರ್ಯ ಜಗದೀಶ್ ಆತ್ಮಹತ್ಯೆ ಮಾಡಿಕೊಂಡ ಬಳಿಕ ಅವರ ಬಿಸ್ನೆಸ್ ಪಾರ್ಟ್ನರ್ ವಿ.ಎಸ್. ಸುರೇಶ್, ಎಸ್.ಪಿ. ಹೊಂಬಣ್ಣ, ಎಸ್. ಸುಧೀಂದ್ರ ವಿರುದ್ಧ ಆರೋಪ ಕೇಳಿಬಂದಿತ್ತು. ಜಗದೀಶ್ ಆತ್ಮಹತ್ಯೆಗೆ ಪ್ರಚೋದನೆ ನೀಡಿದ ಆರೋಪದಲ್ಲಿ ಈ ಮೂವರ ವಿರುದ್ಧ ಕೇಸ್ ದಾಖಲಾಗಿತ್ತು. ಅದು ಖುಲಾಸೆಗೊಂಡಿದೆ.
ನಿರ್ಮಾಪಕ ಸೌಂದರ್ಯ ಜಗದೀಶ್ ಅವರು ಈ ವರ್ಷ ಆತ್ಮಹತ್ಯೆ ಮಾಡಿಕೊಂಡಿದ್ದರು. ಅವರ ಸಾವಿನ ಸುತ್ತ ಸಾಕಷ್ಟು ಅನುಮಾನಗಳ ಮೂಡಿದ್ದವು. ಅವರ ಸಾವಿಗೆ ಬಿಸ್ನೆಸ್ ಪಾರ್ಟ್ನರ್ಗಳಾದ ವಿ.ಎಸ್. ಸುರೇಶ್, ಎಸ್.ಪಿ. ಹೊಂಬಣ್ಣ, ಎಸ್. ಸುಧೀಂದ್ರ ಕಾರಣ ಎಂದು ಕುಟುಂಬದವರು ಆರೋಪಿಸಿದ್ದರು. ಈ ಕೇಸ್ ಖುಲಾಸೆ ಆಗಿದೆ. ಈ ಬಗ್ಗೆ ವಿ.ಎಸ್. ಸುರೇಶ್ ಸುದ್ದಿಗೋಷ್ಠಿ ಕರೆದಿದ್ದರು. ‘ನಾವು ಅಣ್ಣ-ತಮ್ಮನ ರೀತಿ ಇದ್ದೆವು. ಕಷ್ಟಪಟ್ಟು ನಾವು ಆಸ್ತಿ ಮಾಡಿದ್ದೆವು. ಮೂರು ಜನಕ್ಕೆ ಸರಿಯಾದ ಪಾಲಿತ್ತು. ಮಣ್ಣು ಮಾಡುವಾಗ ನಾವು ಜೊತೆಗೆ ಇದ್ದೆವು. ಜಗದೀಶ್ ಅವರ ಪತ್ನಿ ರೇಖಾ ಅವರು ತಮ್ಮ ಹೆಸರಲ್ಲಿ ಎಲ್ಲವನ್ನೂ ರಿಜಿಸ್ಟರ್ ಮಾಡಿಕೊಂಡರು. ಮೇ 11ರಂದು ನಮ್ಮನ್ನು ಹೋಟೆಲ್ಗೆ ಕರೆದರು. 10 ಕೋಟಿ ರೂಪಾಯಿ ಕೊಡಿ ಎಂದರು. ನಾವು ಕೊಡಲ್ಲ ಎಂದೆವು’ ಎಂದಿದ್ದಾರೆ ಸುರೇಶ್.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.
Latest Videos