ಯಾದಗಿರಿ ಜಿಲ್ಲೆಯಲ್ಲಿ ರೈತರಿಗೆ ಸಿಗುತ್ತಿರುವ ಪರಿಹಾರದ ಮೊತ್ತವೂ ತನ್ನದೆನ್ನುತ್ತಿರುವ ವಕ್ಫ್ ಬೊರ್ಡ್!

|

Updated on: Nov 27, 2024 | 11:52 AM

ಕಲ್ಯಾಣ ಕರ್ನಾಟಕ ಭಾಗದಲ್ಲಿ ಅನೇಕ ರೈತರು ವಕ್ಫ್ ಬೋರ್ಡ್ ನೋಟೀಸ್ ಗಳಿಂದ ಸಂಕಷ್ಟಕ್ಕೀಡಾಗಿದ್ದಾರೆ. ಬೇರೆ ಬೇರೆ ಇಲಾಖೆಗಳಿಂದ ರೈತರಿಗೆ ಸಿಗಬೇಕಿರುವ ಪರಿಹಾರದ ಮೊತ್ತ ತನ್ನದು ಅಂತ ವಕ್ಫ್ ಹೇಳಿರುವ ಹಲವಾರು ಪ್ರಕರಣಗಳು ಬಸನಗೌಡ ಯತ್ನಾಳ್, ಅರವಿಂದ ಲಿಂಬಾವಳಿ, ಕುಮಾರ ಬಂಗಾರಪ್ಪ ಅವರನ್ನೊಳಗೊಂಡ ತಂಡಕ್ಕೆ ಎದುರಾಗುತ್ತಿವೆ.

ಯಾದಗಿರಿ: ವಕ್ಫ್ ಬೋರ್ಡ್ ವಿರುದ್ಧ ಹೋರಾಡುತ್ತಿರುವ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಅವರ ತಂಡ ಇಂದು ಯಾದಗಿರಿ ಜಿಲ್ಲೆಗೆ ಕಾಲಿರಿಸಿದೆ. ಜಿಲ್ಲೆಯಲ್ಲಿ ರಸ್ತೆ ಬದಿಯಿರುವ ಜಮೀನುಗಳಿಗೆ ಹೋಗಿ ವಕ್ಫ್ ಮಂಡಳಿ ರೈತರಿಗೆ ನೀಡಿರುವ ನೋಟೀಸ್ ಗಳ ಬಗ್ಗೆ ಯತ್ನಾಳ್ ತಂಡ ಮಾಹಿತಿ ಸಂಗ್ರಹಿಸುತ್ತಿದೆ. ಇಲ್ಲೊಬ್ಬ ರೈತನ ಜಮೀನು ಮೂಲಕ ರೇಲ್ವೇ ಟ್ರ್ಯಾಕ್ ಹಾದು ಹೋಗಲಿದೆ ಮತ್ತು ಇಲಾಖೆಯ ಭೂಸ್ವಾಧೀನ ಮಾಡಿಕೊಂಡಿರುವುದಕ್ಕೆ ಸಂಬಂಧಿಸಿದಂತೆ ಪರಿಹಾರದ ಮೊತ್ತವನ್ನೂ ವಿತರಿಸಿದೆ. ಅದರೆ ವಕ್ಫ್ ಬೋರ್ಡ್ ಪರಿಹಾರ ತನಗೆ ಸಿಗಬೇಕೆಂದು ದಾವೆ ಹೂಡಿದ ಕಾರಣ ಹಣ ನ್ಯಾಯಾಲಯದಲ್ಲೇ ಉಳಿದುಬಿಟ್ಟಿದೆ.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಇದನ್ನೂ ಓದಿ:  ವಕ್ಫ್ ಬೋರ್ಡ್ ವಿರುದ್ಧ ನಡೆಯುತ್ತಿರುವ ಹೋರಾಟದಲ್ಲಿ ವಿಜಯೇಂದ್ರ ಯಾವತ್ತೂ ಭಾಗಿಯಾಗಿಲ್ಲ: ಯತ್ನಾಳ್