ಸ್ಮಶಾನದಲ್ಲಿ ತ್ಯಾಜ್ಯ ಹಾಕಿದ್ದಕ್ಕೆ ಪಂಚಾಯತ್​ ಮುಂದೆ ಕಸ ಸುರಿದು ಪ್ರತಿಭಟನೆ

Updated on: Nov 20, 2025 | 7:09 PM

ಸೋಪುರ ಕೈಗಾರಿಕಾ ಪ್ರದೇಶದಲ್ಲಿ ಸಂಗ್ರಹವಾಗುವ ಕಸವನ್ನ ಸ್ಮಶಾನದಲ್ಲಿ ಸುರಿದ ಪಂಚಾಯತ್​​ ನಡೆಗೆ ಸಿಡಿದೆದ್ದ ಸಾರ್ವಜನಿಕರು, ಮನೆಗಳಲ್ಲಿ ಸಂಗ್ರಹ ಮಾಡುವ ಕಸವನ್ನು ಕಚೇರಿ ಮುಂದೆ ಸುರಿದು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಸ್ಮಶಾನದಲ್ಲಿ ಕಸ ಹಾಕಲು ಸೂಚನೆ ನೀಡಿದ್ದ ಪಿಡಿಓ ವಿರುದ್ಧ ಕಿಡಿ ಕಾರಿದ್ದಾರೆ. ಆ ಮೂಲಕ ಅಧಿಕಾರಿಗಳಿಗೆ ಪಾಠ ಕಲಿಸಿದ್ದಾರೆ.

ನೆಲಮಂಗಲ, ನವೆಂಬರ್​ 20: ಎಲ್ಲೆಂದರಲ್ಲಿ ಕಸ ಎಸೆಯುವವರ ವಿರುದ್ಧ ಬೆಂಗಳೂರಲ್ಲಿ ಜಿಬಿಎ ಕಠಿಣ ಕ್ರಮಕ್ಕೆ ಮುಂದಾಗಿದೆ. ಕಸ ಎಸೆಯುವವರ ಮನೆ ಮುಂದೆ ಲೋಡ್​​ಗಟ್ಟಲೆ ಕಸ ತಂದು ಸುರಿದು ಅದನ್ನು ಸಾಮಾಜಿಕ ಜಾಲತಾಣದಲ್ಲಿ ಹರಿಬಿಡುವ ಜೊತೆಗೆ ದಂಡವನ್ನೂ ವಿಧಿಸುವ ಕೆಲಸ ಮಾಡುತ್ತಿದೆ. ಆದ್ರೆ ಬೆಂಗಳೂರು ಗ್ರಾಮಾಂತರದ ನೆಲಮಂಗಲದಲ್ಲಿ ಈ ಮಾದರಿ​ ಉಲ್ಟಾ ಆಗಿದೆ. ಎಲ್ಲೆಂದರಲ್ಲಿ ತ್ಯಾಜ್ಯ ಸುರಿದಿದ್ದಕ್ಕೆ ಪಂಚಾಯತ್​​ ಕಚೇರಿ ಮುಂದೆಯೇ ಕಸ ತಂದು ಸುರಿದು ಜನ ಪಾಠ ಕಲಿಸಿದ್ದಾರೆ. ಸೋಪುರ ಕೈಗಾರಿಕಾ ಪ್ರದೇಶದಲ್ಲಿ ಸಂಗ್ರಹವಾಗುವ ಕಸವನ್ನ ಸ್ಮಶಾನದಲ್ಲಿ ಸುರಿದ ಪಂಚಾಯತ್​​ ನಡೆಗೆ ಸಿಡಿದೆದ್ದ ಸಾರ್ವಜನಿಕರು, ಮನೆಗಳಲ್ಲಿ ಸಂಗ್ರಹ ಮಾಡುವ ಕಸವನ್ನು ಕಚೇರಿ ಮುಂದೆ ಸುರಿದು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಸ್ಮಶಾನದಲ್ಲಿ ಕಸ ಹಾಕಲು ಸೂಚನೆ ನೀಡಿದ್ದ ಪಿಡಿಓ ವಿರುದ್ಧ ಕಿಡಿ ಕಾರಿದ್ದಾರೆ.

ಮತ್ತಷ್ಟು ವಿಡಿಯೋ ನೋಡಲು ಇಲ್ಲಿ ಕ್ಲಿಕ್​ ಮಾಡಿ.

Published on: Nov 20, 2025 09:09 AM