ತಡರಾತ್ರಿವರೆಗೂ ಕಾದು ನೀರು ತುಂಬಿಸಿಕೊಳ್ಳುವ ಸ್ಥಿತಿ; ಚಿಕ್ಕಮಗಳೂರು ಜಿಲ್ಲಾಡಳಿತ ವಿರುದ್ಧ ಜನರ ಆಕ್ರೋಶ

| Updated By: ಆಯೇಷಾ ಬಾನು

Updated on: May 12, 2024 | 9:28 AM

ಕಳೆದ ಎರಡು ತಿಂಗಳಿನಿಂದ ಕುಡಿಯುವ ನೀರಿಗೆ ಗ್ರಾಮಸ್ಥರು ಪರದಾಡುತ್ತಿದ್ದಾರೆ. ಅಜ್ಜಂಪುರ ತಾಲೂಕಿನ ಕೆಂಚಪುರ ಗ್ರಾಮದಲ್ಲಿ 200ಕ್ಕೂ ಹೆಚ್ಚು ಮನೆಗಳಿವೆ. ಗ್ರಾಮಕ್ಕೆ ನೀರಿನ ಮೂಲವಾಗಿದ್ದ ಬೋರ್ವೆಲ್​ನಲ್ಲಿ ನೀರು ಬರುತ್ತಿಲ್ಲ. ಹೀಗಾಗಿ ಗ್ರಾಮಸ್ಥರು ಟ್ಯಾಂಕರ್ ನೀರಿನ ಮೊರೆ ಹೋಗಿದ್ದಾರೆ. ಟ್ಯಾಂಕರ್ ನೀರಿಗಾಗಿ ಕಾದು ಕುಳಿತು ನೀರು ತುಂಬಿಸಿಕೊಳ್ಳುತ್ತಿದ್ದಾರೆ.

ಚಿಕ್ಕಮಗಳೂರು, ಮೇ.12: ಚಿಕ್ಕಮಗಳೂರು ಜಿಲ್ಲೆಯ ಮಲೆನಾಡು ಭಾಗದಲ್ಲಿ ಧಾರಾಕಾರ ಮಳೆ ಸುರಿಯುತ್ತಿದೆ. ಆದರೆ ಬಯಲು ಸೀಮೆ ಭಾಗದಲ್ಲಿ ಹನಿಹನಿ ನೀರಿಗೂ ಹಾಹಾಕಾರ ಶುರುವಾಗಿದೆ. ನೀರಿಗಾಗಿ ಮಧ್ಯರಾತ್ರಿವರೆಗೂ ಗ್ರಾಮಸ್ಥರು ಕಾದು ಕುಳಿತುಕೊಳ್ಳುವಂತಾಗಿದೆ. ಹತ್ತಾರು ಮಹಿಳೆಯರು ತಡರಾತ್ರಿ ವರೆಗೂ ನೂರಾರು ಖಾಲಿ ಕೊಡವಿಟ್ಟು ನೀರಿಗಾಗಿ ಕಾದು ಕುಳಿತ ದೃಶ್ಯಗಳು ನೀರಿನ ಹಾಹಾಕಾರದ ಬಗ್ಗೆ ವಿವರಿಸುವಂತಿವೆ.

ಕಳೆದ ಎರಡು ತಿಂಗಳಿನಿಂದ ಕುಡಿಯುವ ನೀರಿಗೆ ಗ್ರಾಮಸ್ಥರು ಪರದಾಡುತ್ತಿದ್ದಾರೆ. ಅಜ್ಜಂಪುರ ತಾಲೂಕಿನ ಕೆಂಚಪುರ ಗ್ರಾಮದಲ್ಲಿ 200ಕ್ಕೂ ಹೆಚ್ಚು ಮನೆಗಳಿವೆ. ಗ್ರಾಮಕ್ಕೆ ನೀರಿನ ಮೂಲವಾಗಿದ್ದ ಬೋರ್ವೆಲ್​ನಲ್ಲಿ ನೀರು ಬರುತ್ತಿಲ್ಲ. ಹೀಗಾಗಿ ಗ್ರಾಮಸ್ಥರು ಟ್ಯಾಂಕರ್ ನೀರಿನ ಮೊರೆ ಹೋಗಿದ್ದಾರೆ. ಟ್ಯಾಂಕರ್ ನೀರಿಗಾಗಿ ಕಾದು ಕುಳಿತು ನೀರು ತುಂಬಿಸಿಕೊಳ್ಳುತ್ತಿದ್ದಾರೆ. ನೀರಿಗಾಗಿ ಹಗಲು-ರಾತ್ರಿ ಕಾದು ಕುಳಿತು ನೀರು ತುಂಬಿಸಿಕೊಳ್ಳುವಂತಾಗಿದೆ. ಚಿಕ್ಕಮಗಳೂರು ಜಿಲ್ಲಾಡಳಿತದ ವಿರುದ್ಧ ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಮತ್ತಷ್ಟು ವಿಡಿಯೋ ಸುದ್ದಿಗಳನ್ನು ನೋಡಲು ಇದರ ಮೇಲೆ ಕ್ಲಿಕ್ ಮಾಡಿ

Follow us on