ಲಿಂಗನಮಕ್ಕಿ ಜಲಾಶಯದಿಂದ ಶರಾವತಿ ನದಿಗೆ ನೀರು ಬಿಡುಗಡೆ, ಗೇಟ್​ಗಳಿಂದ ಧುಮ್ಮಿಕ್ಕುತ್ತಿರುವ ಜಲಧಾರೆ!

Updated on: Aug 28, 2025 | 11:08 AM

ಶಿವಮೊಗ್ಗ ಜಿಲ್ಲೆಯಲ್ಲಿ ಮಳೆ ಸುರಿಯುವುದು ಮುಂದುವರಿದಿರುವುದರಿಂದ ಲಿಂಗನಮಕ್ಕಿ ಜಲಾಶಯದಲ್ಲಿ ಒಳಹರಿವು ಹೆಚ್ಚಾಗಿ ನೀರನ್ನು ಶರಾವತಿ ನದಿ ಹರಿಬಿಡುವ ಅನಿವಾರ್ಯತೆ ಸೃಷ್ಟಿಯಾಗಿದೆ. ನಮ್ಮ ವರದಿಗಾರ ನೀಡುವ ಮಾಹಿತಿಯ ಪ್ರಕಾರ ಡ್ಯಾಂನ ಹನ್ನೊಂದು ಗೇಟ್ ಗಳ ಮೂಲಕ ಶರಾವತಿ ನದಿಗೆ 36,000 ಕ್ಯೂಸೆಕ್ಸ್ ನೀರನ್ನು ರಿಲೀಸ್ ಮಾಡಿದ್ದಾರೆ; ಆಗ ಲಿಂಗನಮಕ್ಕಿ ಜಲಾಶಯ ಕಂಡಿದ್ದು ಹೀಗೆ!

ಶಿವಮೊಗ್ಗ, ಆಗಸ್ಟ್ 28: ಧುಮ್ಮಿಕ್ಕಿ ಹರಿಯುವ ಜಲಧಾರೆಯಲ್ಲೂ, ದುಂಬಿಯ ಹಾಡಿನ ಝೇಂಕಾರದಲ್ಲೂ, ಘಮ್ಮನೆ ಹೊಮ್ಮಿರುವ ಹೊಸ ಹೂವಿನಲ್ಲೂ, ತುಂಬಿದೆ ಒಲವಿನ ಜೀವನ ಸಾಕ್ಷಾತ್ಕಾರ; ಒಲವೇ ಜೀವನ ಸಾಕ್ಷಾತ್ಕಾರ, ಒಲವೇ ಮರೆಯದ ಮಮಕಾರ……ಕನ್ನಡಿಗರ ಅಚ್ಚುಮೆಚ್ಚಿನ ಗೀತೆಗಳಲ್ಲಿ ಇದೂ ಒಂದು. ಡಾ ರಾಜ್​ಕುಮಾರ್ ಅಭಿನಯದ 1971ರಲ್ಲಿ ರಿಲೀಸ್ ಆದ ಪುಟ್ಟಣ ಕಣಗಾಲ್ ನಿರ್ದೇಶನದ ‘ಸಾಕ್ಷಾತ್ಕಾರ’ ಚಿತ್ರದ ಹಾಡು ಆ ಜಮಾನದಲ್ಲಿ ಬಹಳ ಫೇಮಸ್ಸು ಅಂತ ಹಿರೀಕರು ಹೇಳುತ್ತಾರೆ. ಶಿವಮೊಗ್ಗ ಜಿಲ್ಲೆಯಲ್ಲಿರುವ ಲಿಂಗನಮಕ್ಕಿ ಜಲಾಶಯದಿಂದ ಶರಾವತಿ ನದಿಗೆ ನೀರು ಬಿಡುಗಡೆ ಮಾಡಿದಾಗ ಹಾಲ್ನೊರೆಯಂತೆ ಧುಮ್ಮುಕ್ಕುತ್ತಿರುವ ಜಲಧಾರೆಯನ್ನು ನೋಡಿ ಪಿಬಿ ಶ್ರೀನಿವಾಸ್ ಮತ್ತು ಪಿ ಸುಶೀಲ ಅವರ ಸುಮಧುರ ಕಂಠಗಳಲ್ಲಿ ಮೂಡಿಬಂದ ಈ ಹಾಡು ನೆನಪಿಗೆ ಬರೋದು ಸಹಜ.

ಇದನ್ನೂ ಓದಿ:  ಜುಲೈ ತಿಂಗಳಲ್ಲೇ ತಮಿಳುನಾಡುಗೆ 100 ಟಿಎಂಸಿ ಹರಿಬಿಟ್ಟು ದಾಖಲೆ ನಿರ್ಮಿಸಿದ ಕೆಅರ್​ಎಸ್ ಮತ್ತು ಕಬಿನಿ ಜಲಾಶಯಗಳು

ವಿಡಿಯೋ ಸುದ್ದಿಗಳಿಗಾಗಿ ಕ್ಲಿಕ್ ಮಾಡಿ