ಜುಲೈ ತಿಂಗಳಲ್ಲೇ ತಮಿಳುನಾಡುಗೆ 100 ಟಿಎಂಸಿ ಹರಿಬಿಟ್ಟು ದಾಖಲೆ ನಿರ್ಮಿಸಿದ ಕೆಅರ್ಎಸ್ ಮತ್ತು ಕಬಿನಿ ಜಲಾಶಯಗಳು
ರಾಜ್ಯದಾದ್ಯಂತ ಉತ್ತಮ ಮಳೆಯಾಗುತ್ತಿರುವ ಕಾರಣ ಕಬಿನಿ ಮತ್ತು ಕೆಆಎರ್ಎಸ್ ಜಲಾಶಯಗಳು ತುಂಬಿ ತುಳುಕುತ್ತಿವೆ. ಮಂಡ್ಯ ಜಿಲ್ಲೆಯ ರೈತರು ಸಂತಸದಲ್ಲಿದ್ದಾರೆ ಮತ್ತು ರಾಜಕೀಯ ನಾಯಕರಿಗೂ ತಲೆಬಿಸಿ ಇಲ್ಲ. ಮತ್ತೊಂದು ಸಂತಸದ ಸಂಗತಿಯೆಂದರೆ ಎಲ್ಲ ಭಾಗಗಳಲ್ಲಿ ಉತ್ತಮ ಮಳೆಯಾಗುತ್ತಿದ್ದರೂ ಎಲ್ಲೂ ಪ್ರವಾಹದಂಥ ಸ್ಥಿತಿ ತಲೆದೋರಿಲ್ಲ. ಅಲ್ಲಲ್ಲಿ ಹಳ್ಳಕೊಳ್ಳಗಳು ಉಕ್ಕಿ ಹರಿಯುತ್ತಿರುವುದು ನಿಜ, ಆದರೆ ಗಂಭೀರ ಪರಿಸ್ಥಿತಿ ತಲೆದೋರಿಲ್ಲ.
ಮಂಡ್ಯ, ಜುಲೈ 22: ಕೃಷ್ಣರಾಜಸಾಗರ ಜಲಾಶಯ ಈ ವರ್ಷ ಒಂದಾದ ಮೇಲೊಂದರಂತೆ ದಾಖಲೆ ನಿರ್ಮಿಸುತ್ತಿದೆ. ಕೆಆರ್ಎಸ್ ಡ್ಯಾಂ ಜೂನ್ ತಿಂಗಳಲ್ಲೇ ಭರ್ತಿಯಾಗಿ ದಾಖಲೆ ನಿರ್ಮಿಸಿದ್ದು ಒಂದು ಭಾಗವಾದರೆ ಈ ಡ್ಯಾಂ ಮತ್ತು ಕಬಿನಿ ಜಲಾಶಯದಿಂದ (Kabini Reservoir) ತಮಿಳುನಾಡಿಗೆ ಈಗಾಗಲೇ 100 ಟಿಎಂಸಿ ನೀರು ಹರಿಬಿಡಲಾಗಿದೆ. ಹಿಂದೆ ಯಾವತ್ತೂ ಇಂಥದೊಂದು ಘಟನೆ ಸಂಭವಿಸಿರಲಿಲ್ಲ. ನೆರೆರಾಜ್ಯದೊಂದಿಗೆ ಆಗಿರುವ ಒಪ್ಪಂದ ಪ್ರಕಾರ ಮಾನ್ಸೂನ್ ಸೀಸನ್ನಲ್ಲಿ 177 ಟಿಎಂಸಿ ನೀರು ಬಿಡಬೇಕು. ಈ ವರ್ಷ ಜೂನ್ ಮತ್ತು ಜುಲೈ ಎರಡು ತಿಂಗಳಲ್ಲೇ 100 ಕ್ಕೂ ಹೆಚ್ಚು ಟಿಎಂಸಿ ನೀರನ್ನು ತಮಿಳುನಾಡುಗೆ ಹರಿಸಲಾಗಿದೆ.
ಇದನ್ನೂ ಓದಿ: ಮೂರೇ ದಿನಕ್ಕೆ 9 ಅಡಿ ಭರ್ತಿಯಾದ ಕೆಆರ್ಎಸ್ ಡ್ಯಾಂ: ಆಲಮಟ್ಟಿ ಸೇರಿ ಉಳಿದ ಜಲಾಶಯಗಳಿಗೂ ಭಾರಿ ಒಳಹರಿವು
ವಿಡಿಯೋ ಸುದ್ದಿಗಳಿಗಾಗಿ ಕ್ಲಿಕ್ ಮಾಡಿ