ಸುರಕ್ಷಿತವಾಗಿ ವಾಪಸ್ಸು ಕರೆತಂದ ಸಿದ್ದರಾಮಯ್ಯ ಸರ್ಕಾರಕ್ಕೆ ಧನ್ಯವಾದ: ಕಾಶ್ಮೀರ ತೆರಳಿದ್ದ ಬೆಂಗಳೂರು ನಿವಾಸಿ

ಅರುಣ್​ ಕುಮಾರ್​ ಬೆಳ್ಳಿ

Updated on: Apr 24, 2025 | 3:28 PM

ತಾವು ಸುರಕ್ಷಿತವಾಗಿ ಕರ್ನಾಟಕಕ್ಕೆ ವಾಪಸ್ಸು ಹೋಗುತ್ತೇವೆಯೋ ಇಲ್ಲವೋ ಎಂಬ ಸಂದೇಹ ತಮ್ಮ ತಂಡವನ್ನು ಕಾಡಲಾರಂಭಿಸಿತ್ತು ಎಂದು ಮೋನಿಕ ಹೇಳುತ್ತಾರೆ. ಬೆಂಗಳೂರಲ್ಲಿ ಕಾಲಿಟ್ಟ ನಂತರ ನಿರಾಳರಾಗಿರುವ ಅವರು ಕರ್ನಾಟಕ ಮತ್ತು ಬೆಂಗಳೂರಷ್ಟು ಒಳ್ಳೇ ಮತ್ತು ಸುಂದರ ಸ್ಥಳಗಳು ಬೇರೆಲ್ಲೂ ಇಲ್ಲ, ಇಲ್ಲಿನ ಜನ ಕೂಡ ಬಹಳ ಚೆನ್ನಾಗಿದ್ದಾರೆ ಎಂದು ಹೇಳುತ್ತಾರೆ.

ದೇವನಹಳ್ಳಿ, ಏಪ್ರಿಲ್ 24: ಪ್ರವಾಸಕ್ಕೆಂದು ಜಮ್ಮು ಮತ್ತು ಕಾಶ್ಮೀರದ ವಿವಿಧ ಭಾಗಗಳಿಗೆ ತೆರಳಿದ್ದ 174 ಕನ್ನಡಿಗರನ್ನು ಶ್ರೀನಗರದಿಂದ ಸುರಕ್ಷಿತವಾಗಿ ಕರೆತರಲಾಗಿದೆ. ವಿಮಾನ ನಿಲ್ದಾಣದಲ್ಲಿ ನಮ್ಮ ಪ್ರತಿನಿಧಿಯೊಂದಿಗೆ ಮಾತಾಡಿದ ಮೋನಿಕ ಸತ್ಯ (Monica Sathya) ಹೆಸರಿನ ಮಹಿಳೆ ತಮ್ಮನ್ನು ಸುರಕ್ಷಿತವಾಗಿ ಬೆಂಗಳೂರಿಗೆ ಕರೆತಂದಿದ್ದಕ್ಕೆ ಸಿದ್ದರಾಮಯ್ಯ ಸರ್ಕಾರ, ಸಚಿವ ಸಂತೋಷ್ ಲಾಡ್ ಮತ್ತು ಅಧಿಕಾರಿ ವರ್ಗಕ್ಕೆ ಧನ್ಯವಾದ ಸಲ್ಲಿಸಿದರು. ಪಹಲ್ಗಾಮ್ ನಲ್ಲಿ ಪ್ರವಾಸಿಗರ ಮೇಲೆ ದಾಳಿ ನಡೆದಾಗ ಮೋನಿಕ ಅವರ ತಂಡ ಗುಲ್ ಮೊಹರ್​ನಲ್ಲಿತ್ತಂತೆ. ಅಸಲಿಗೆ ಉಗ್ರರು ಗುಲ್ ಮೊಹರ್ ಅನ್ನೇ ಟಾರ್ಗೆಟ್ ಮಾಡಿಕೊಂಡಿದ್ದರು, ಆದರೆ ಅಲ್ಲಿನ ಬಿಗಿ ಭದ್ರತೆ ಹಿನ್ನೆಲೆ ತಮ್ಮ ಯೋಜನೆ ಬದಲಾಯಿಸಿದರು ಎಂದು ಮೋನಿಕ ಹೇಳುತ್ತಾರೆ.

ಇದನ್ನೂ ಓದಿ:  Pahalgam Terrorist Attack: ಪಹಲ್ಗಾಮ್ ಉಗ್ರ ದಾಳಿ, ಸರ್ವಪಕ್ಷ ಸಭೆ ಕರೆದ ಪ್ರಧಾನಿ ಮೋದಿ

ವಿಡಿಯೋ ಸುದ್ದಿಗಳಿಗಾಗಿ ಕ್ಲಿಕ್ ಮಾಡಿ

Follow Us
Arun Belly

ಹುಟ್ಟೂರು ಯಾದಗಿರಿ ಜಿಲ್ಲೆಯ ಗುರುಮಠಕಲ್. ಓದಿದ್ದು ಬಿಎಸ್ಸಿಯಾದರೂ ಮೆಡಿಕಲ್ ರಿಪ್ರಸೆಂಟೇಟಿವ್ ಆಗಿ ಕೆಲಸ ಮಾಡಿಕೊಂಡಿದ್ದ ನನ್ನನ್ನು ಖ್ಯಾತ ಪತ್ರಕರ್ತ ದಿವಂಗತ ರವಿ ಬೆಳಗೆರೆಯವರು ಪತ್ರಿಕೋದ್ಯಮಕ್ಕೆ ಎಳೆತಂದರು. ಮೊದಲು ಅವರ ಓ ಮನಸೇ ಪಾಕ್ಷಿಕದಲ್ಲಿ ಉಪ ಸಂಪಾದಕನಾಗಿ ಕೆಲಸ ಮಾಡಿದ ಬಳಿಕ ಲಂಕೇಶ್ ಪತ್ರಿಕೆ (ಸಹಾಯಕ ಸಂಪಾದಕ), ದುನಿಯಾ (ಕಾರ್ಯನಿರ್ವಾಹಕ ಸಂಪಾದಕ) ಮತ್ತು ಕ್ರಿಕೆಟ್ ಪಾಕ್ಷಿಕ ಪತ್ರಿಕೆಯ ಸಂಪಾದಕನಾಗಿ ಕೆಲಸ ಮಾಡಿದೆ. 2012 ರಲ್ಲಿ ಟಿವಿ9 ಸಂಸ್ಥೆಯ ಇಂಗ್ಲಿಷ್ ಚ್ಯಾನೆಲ್ ನಲ್ಲಿ ಸಹಾಯಕ ಸಂಪಾದಕನಾಗಿ ಸೇರಿ 8 ವರ್ಷ ದುಡಿದ ಬಳಿಕ 2020 ರಿಂದ ಟಿವಿ9 ಕನ್ನಡ ಡಿಜಿಟಲ್ ಗೆ ಹಿರಿಯ ಉಪ ಸಂಪಾದಕನಾಗಿ (ವಿಡಿಯೋ ಸುದ್ದಿ ವಿಭಾಗ) ಕಾರ್ಯನಿರ್ವಹಿಸುತ್ತಿರುವೆ.