ಕನ್ನಡದಲ್ಲಿ ಯಾರೂ ಷಡ್ಯಂತ್ರ ಮಾಡಲ್ಲ ಎಂದ ನಿರ್ಮಾಪಕ ಕೆ.ಮಂಜು
ಕೆ. ಮಂಜು ‘ಕೋಟಿಗೊಬ್ಬ 3’ ವೀಕ್ಷಣೆ ಮಾಡಿದ್ದಾರೆ. ನಂತರದಲ್ಲಿ ಅವರು ಸಿನಿಮಾ ಬಗ್ಗೆ ಟಿವಿ9 ಕನ್ನಡದ ಜತೆ ಮಾತನಾಡಿದ್ದಾರೆ. ಈ ವೇಳೆ ಚಿತ್ರದ ಬಗ್ಗೆ ಅವರು ಮೆಚ್ಚುಗೆಯ ಮಾತುಗಳನ್ನು ಆಡಿದ್ದಾರೆ.
‘ಕೋಟಿಗೊಬ್ಬ 3’ ಸಿನಿಮಾ ರಿಲೀಸ್ ವಿಳಂಬ ಆಗಿರೋ ವಿಚಾರ ದೊಡ್ಡ ಮಟ್ಟದಲ್ಲಿ ಚರ್ಚೆ ಆಗುತ್ತಿದೆ. ಈ ಬಗ್ಗೆ ಸುದೀಪ್ ಅವರ ಆಪ್ತರಾದ ಜಾಕ್ ಮಂಜು ಮಾತನಾಡಿದ್ದರು. ಅಲ್ಲದೆ, 10ರಿಂದ 13 ಜನರು ಒಟ್ಟುಗೂಡಿ ಷಡ್ಯಂತ್ರ ರೂಪಿಸಿದ್ದಾರೆ. ಅವರ ಹೆಸರು ಹೇಳಲು ನಾನು ಇಷ್ಟಪಡುವುದಿಲ್ಲ ಎಂದಿದ್ದರು. ಈ ಘಟನೆಗೆ ಸಂಬಂಧಿಸಿದಂತೆ ಮಾತನಾಡಿರುವ ನಿರ್ಮಾಪಕ ಕೆ. ಮಂಜು ಅವರು ‘ಕನ್ನಡದಲ್ಲಿ ಯಾರೂ ಷಡ್ಯಂತ್ರ ಮಾಡುವುದಿಲ್ಲ. ನಾವೆಲ್ಲರೂ ಸಹೋದರರಿದ್ದಂತೆ’ ಎಂದಿದ್ದಾರೆ.
ಕೆ. ಮಂಜು ‘ಕೋಟಿಗೊಬ್ಬ 3’ ವೀಕ್ಷಣೆ ಮಾಡಿದ್ದಾರೆ. ನಂತರದಲ್ಲಿ ಅವರು ಸಿನಿಮಾ ಬಗ್ಗೆ ಟಿವಿ9 ಕನ್ನಡದ ಜತೆ ಮಾತನಾಡಿದ್ದಾರೆ. ಈ ವೇಳೆ ಚಿತ್ರದ ಬಗ್ಗೆ ಅವರು ಮೆಚ್ಚುಗೆಯ ಮಾತುಗಳನ್ನು ಆಡಿದ್ದಾರೆ. ಅವರು ಹೇಳಿರೋದು ಏನು ಎನ್ನುವ ಬಗ್ಗೆ ವಿಡಿಯೋದಲ್ಲಿದೆ ಮಾಹಿತಿ.
ಇದನ್ನೂ ಓದಿ: Kotigobba 3: ಇಂದು ಬಿಡುಗಡೆಯಾಗುತ್ತಿಲ್ಲ ‘ಕೋಟಿಗೊಬ್ಬ 3’; ಇನ್ಯಾವಾಗ ಬಿಡುಗಡೆ? ಇಲ್ಲಿದೆ ಮಾಹಿತಿ
Latest Videos