ಬೆಳಗಾವಿ; ಸರ್ಕಾರದ ವೈಫಲ್ಯ ವಿರುದ್ಧ ಪ್ರತಿಭಟನೆ ನಡೆಸುತ್ತಿದ್ದೇವೆ: ಬಿಎಸ್ ಯಡಿಯೂರಪ್ಪ

|

Updated on: Dec 13, 2023 | 11:36 AM

ರಾಜ್ಯ ಬಿಜೆಪಿ ಘಟಕ ಒಡೆದ ಮನೆಯಾಗಿರುವ ವಿಷಯ ಎಲ್ಲ ಕನ್ನಡಿಗರಿಗೆ ಗೊತ್ತಿದೆ. ವಿರೋಧ ಪಕ್ಷದ ನಾಯಕ ಆರ್ ಅಶೋಕ ಸದನದಲ್ಲಿ ಮಾತಾಡುತ್ತಿರುವಾಗಲೇ ಹಿರಿಯ ಸದಸ್ಯರೊಬ್ಬರು ಹೊರನಡೆಯುತ್ತಾರೆ. ಬಸನಗೌಡ ಪಾಟೀಲ್ ಯತ್ನಾಳ್ ಪ್ರತಿದಿನ ಸದನದಲ್ಲಿ ಮತ್ತು ಸದನದ ಹೊರಗಡೆ ಯಡಿಯೂರಪ್ಪ ಮತ್ತು ಬಿವೈ ವಿಜಯೇಂದ್ರ ವಿರುದ್ಧ ಕಟುವಾದ ಟೀಕೆಗಳನ್ನು ಮಾಡುತ್ತಿದ್ದಾರೆ. ಇವತ್ತು ನಡೆಯುತ್ತಿರುವ ಹೋರಾಟದಲ್ಲಿ ನಾಯಕರ ಅಸಮಾಧಾನ ಬಹಿರಂಗಗೊಳ್ಳದಿದ್ದರೆ ಸಾಕು.

ಬೆಳಗಾವಿ: ಬಿಜೆಪಿ ಹಿರಿಯ ನಾಯಕ ಬಿಎಸ್ ಯಡಿಯೂರಪ್ಪ (BS Yediyurappa) ನೇತೃತ್ವದಲ್ಲಿ ಇಂದು ಬೆಳಗಾವಿಯಲ್ಲಿ ಬಿಜೆಪಿ ಕಾರ್ಯಕರ್ತರು (BJP workers) ಪ್ರತಿಭಟನೆ ನಡೆಸುತ್ತಿದ್ದಾರೆ. ಟಿವಿ9 ವರದಿಗಾರ ಯಡಿಯೂರಪ್ಪರೊಂದಿಗೆ ಮಾತಾಡಿದ್ದು, ಅಭಿವೃದ್ಧಿ ಕಾರ್ಯಗಳನ್ನು ಕಡೆಗಣಿಸಿರುವ ಸರ್ಕಾರವನ್ನು (Congress government) ಬಡಿದೆಬ್ಬಿಸಲು ಹೋರಾಟ ಹಮ್ಮಿಕೊಳ್ಳಲಾಗಿದೆ ಎಂದು ಮಾಜಿ ಮುಖ್ಯಮಂತ್ರಿ ಹೇಳಿದರು. ಖಜಾನೆಯಲ್ಲಿದ್ದ ಹಣವನ್ನೆಲ್ಲ ಸಿದ್ದರಾಮಯ್ಯ ಸರ್ಕಾರ ಗ್ಯಾರಂಟಿ ಯೋಜನೆಗಳಿಗೆ ಸುರಿದಿದೆ, ಅವುಗಳನ್ನು ಸಹ ಅರ್ಧಂಬರ್ಧ ಮಾಡಿದೆ, ರಾಜ್ಯದಲ್ಲಿ ಅಭಿವೃಧ್ಧಿ ಕಾಮಗಾರಿಗಳು ಸಂಪೂರ್ಣವಾಗಿ ನಿಂತುಹೋಗಿವೆ, ಒಂದು ಕಿಮೀನಷ್ಟು ಉದ್ದ ರಸ್ತೆ ಮಾಡಿಸುವ ಯೋಗ್ಯತೆ ಈ ಸರ್ಕಾರಕ್ಕಿಲ್ಲ ಎಂದು ಯಡಿಯೂರಪ್ಪ ಹೇಳಿದರು. ಆಡಳಿತದಲ್ಲಿ ಸಂಪೂರ್ಣವಾಗಿ ವಿಫಲ ಮತ್ತು ದಿವಾಳಿಯೆದ್ದಿರುವ ಸರ್ಕಾರವನ್ನು ನಿದ್ರೆಯಿಂದ ಎಚ್ಚರಿಸಲು ಪಕ್ಷದ ಹೋರಾಟದಲ್ಲಿ ಸುಮಾರು 20,000 ಕಾರ್ಯಕರ್ತರು ಭಾಗಿಯಾಗಲಿದ್ದಾರೆ ಎಂದು ಹಿರಿಯ ನಾಯಕ ಹೇಳಿದರು.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Follow us on