ಯತ್ನಾಳ್ ಬಗ್ಗೆ ವರಿಷ್ಠರಿಗೆ ಆಗಿರಬಹುದಾದ ತಪ್ಪು ಗ್ರಹಿಕೆ ಚರ್ಚಿಸಲು ಸಿದ್ಧರಿದ್ದೇವೆ: ಕುಮಾರ್ ಬಂಗಾರಪ್ಪ
ಯತ್ನಾಳ್ ಅವರು ಪಕ್ಷದ ಸಂಘಟನೆಗಾಗಿ ಹೋರಾಡುತ್ತಿದ್ದಾರೆ, ಅವರು ಯಾವತ್ತೂ ಬೇರೆ ಪಕ್ಷಗಳ ನಾಯಕರ ಜೊತೆ ಕಾಣಿಸಿಕೊಂಡಿಲ್ಲ, ಆ ದೃಷ್ಟಿಯಿಂದ ನೋಡಿದರೆ ಮೊದಲು ಎಸ್ ಟಿ ಸೋಮಶೇಖರ್ ಮತ್ತು ಶಿವರಾಂ ಹೆಬ್ಬಾರ್ ಅವರನ್ನು ಪಕ್ಷದಿಂದ ಉಚ್ಚಾಟಿಸಬೇಕಿತ್ತು, ಯತ್ನಾಳ್ ಒಬ್ಬ ಹಿರಿಯ ರಾಜಕಾರಣಿ ಮತ್ತು ಹಿಂದೆ ಕೇಂದ್ರದಲ್ಲಿ ಸಚಿವರಾಗಿದ್ದವರು ಎಂದು ಕುಮಾರ್ ಬಂಗಾರಪ್ಪ ಹೇಳಿದರು.
ಬೆಂಗಳೂರು, ಮಾರ್ಚ್ 28: ಪಕ್ಷದ ಶಿಸ್ತು ಪಾಲನಾ ಸಮಿತಿ ಬಸನಗೌಡ ಪಾಟೀಲ್ ಯತ್ನಾಳ್ ಅವರನ್ನು ಪಕ್ಷದಿಂದ ಉಚ್ಚಾಟಿಸಿರುವುದರಿಂದ ತಮ್ಮ ಹೋರಾಟಕ್ಕೆ ಹಿನ್ನಡೆಯಾಗಿದೆ ಎಂದು ಯತ್ನಾಳ್ ಕ್ಯಾಂಪಲ್ಲಿ ಗುರುತಿಸಿಕೊಂಡಿದ್ದ ಮಾಜಿ ಶಾಸಕ ಕುಮಾರ ಬಂಗಾರಪ್ಪ (Kumar Bangarappa) ಹೇಳಿದರು. ಯತ್ನಾಳ್ ಅವರ ಬಗ್ಗೆ ಪಕ್ಷದ ವರಿಷ್ಠರಿಗೆ ತಪ್ಪು ಗ್ರಹಿಕೆ ಆದಂತಿದೆ, ಅದನ್ನು ಸರಿಪಡಿಸಲು ಮತ್ತು ಯತ್ನಾಳ್ ಅವರನ್ನು ಅಮಾನತ್ತುಗೊಳಿಸಿರುವುದನ್ನು ರದ್ದುಪಡಿಸಲು ವರಿಷ್ಠರೊಂದಿಗೆ ಚರ್ಚೆ ಮಾಡಲು ತಮ್ಮ ತಂಡ ಸಿದ್ದವಿದೆ ಎಂದು ಕುಮಾರ ಬಂಗಾರಪ್ಪ ಹೇಳಿದರು.
ಇದನ್ನು ಓದಿ: ಯತ್ನಾಳ್ ಇಲ್ಲದೆ ರಾಜ್ಯದಲ್ಲಿ ಬಿಜೆಪಿ ಅಧಿಕಾರಕ್ಕೆ ಪಡೆವ ಕನಸು ಕಾಣುತ್ತಿದ್ದರೆ ಅದು ಕೇವಲ ಭ್ರಮೆ: ಬಸವಜಯ ಮೃತ್ಯುಂಜಯ ಸ್ವಾಮೀಜಿ
ವಿಡಿಯೋ ಸ್ಟೋರಿಗಳಿಗಾಗಿ ಕ್ಲಿಕ್ ಮಾಡಿ