ಆರೋಪ ಮಾಡುತ್ತಿರುವ ಗುತ್ತಿಗೆದಾರರ ಹಿಂದೆ ಯಾರಿದ್ದಾರೆ ಅಂತ ಸರ್ಕಾರಕ್ಕೆ ಚೆನ್ನಾಗಿ ಗೊತ್ತಿದೆ: ಡಿಕೆ ಶಿವಕುಮಾರ್, ಡಿಸಿಎಂ
ಗುತ್ತಿಗೆದಾರರು ಯಾರಲ್ಲಿಗಾದರೂ ಹೋಗಲಿ, ತಮ್ಮದೇನೂ ಅಭ್ಯಂತರವಿಲ್ಲ, ಅವರು ಮಾಡಿರುವ ಆರೋಪಗಳನ್ನು ತನಿಖೆಗೆ ಆದೇಶಿಸಲಾಗಿದೆ. ಅಕ್ರಮವೆಸಗದ ಗುತ್ತಿಗೆದಾರಿಗೆ ಖಂಡಿತವಾಗಿ ನ್ಯಾಯ ಒದಗಿಸಲಾಗುವುದು ಎಂದು ಶಿವಕುಮಾರ್ ಹೇಳಿದರು.
ಬೆಂಗಳೂರು: ಹಿಂದಿನ ಸರ್ಕಾರ ಅಧಿಕಾರದಲ್ಲಿದ್ದಾಗ ಬಿಬಿಎಂಪಿ ಕಾಮಗಾರಿಗಳಲ್ಲಿ ಭಾರೀ ಅಕ್ರಮಗಳು ನಡೆದಿವೆ ಅಂತ ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್ (DK Shivakumar) ಹೇಳುತ್ತಿದ್ದರೆ, ಬಿಲ್ ರಿಲೀಸ್ ಮಾಲು ಕಮೀಶನ್ ಕೇಳಲಾಗುತ್ತಿದೆ ಎಂದು ಗುತ್ತಿಗೆದಾರರ ಸಂಘದ ಅಧ್ಯಕ್ಷ ಕೆಂಪಣ್ಣ (Kempanna) ಸೇರಿದಂತೆ ಹಲವಾರು ಕಾಂಟ್ರ್ಯಾಕ್ಟರ್ ಗಳು ಆರೋಪಿಸುತ್ತಿದ್ದಾರೆ. ವಿಷಯಕ್ಕೆ ಸಂಬಂಧಿಸಿದಂತೆ ಇಂದು ಬೆಂಗಳೂರಲ್ಲಿ ಸುದ್ದಿಗಾರರೊಂದಿಗೆ ಮಾತಾಡಿದ ಉಪ ಮುಖ್ಯಮಂತ್ರಿ ಬೆಂಗಳೂರು ನಗರ ಉಸ್ತುವಾರಿ ಸಚಿವರೂ ಆಗಿರುವ ಡಿಕೆ ಶಿವಕುಮಾರ್ ಗುತ್ತಿಗೆದಾರರು (contractors) ಮಾಡುತ್ತಿರುವ ಆರೋಪ ಮತ್ತು ದೂರುಗಳನ್ನು ತೆಗೆದುಕೊಂಡು ವಿರೋಧ ಪಕ್ಷದ ನಾಯಕರ ಬಳಿಗೆ ಹೋಗುತ್ತಿರುವುದನ್ನು ಸೀರಿಯಸ್ಸಾಗಿ ತೆಗೆದುಕೊಳ್ಳದೆ, ಗುತ್ತಿಗೆದಾರರು ಯಾರಲ್ಲಿಗಾದರೂ ಹೋಗಲಿ, ತಮ್ಮದೇನೂ ಅಭ್ಯಂತರವಿಲ್ಲ, ಅವರು ಮಾಡಿರುವ ಆರೋಪಗಳನ್ನು ತನಿಖೆಗೆ ಆದೇಶಿಸಲಾಗಿದೆ. ಅಕ್ರಮವೆಸಗದ ಗುತ್ತಿಗೆದಾರಿಗೆ ಖಂಡಿತವಾಗಿ ನ್ಯಾಯ ಒದಗಿಸಲಾಗುವುದು ಎಂದು ಹೇಳಿದರು. ಗುತ್ತಿಗೆದಾರರ ಹಿಂದೆ ಯಾರಿದ್ದಾರೆ ಯಾಕೆ ಅವರಿಂದ ಆರೋಪ ಮಾಡಿಸಲಾಗುತ್ತಿದೆ ಅಂತ ತಮಗೆ ಚೆನ್ನಾಗಿ ಗೊತ್ತಿದೆ ಎಂದು ಶಿವಕುಮಾರ್ ಹೇಳಿದರು.
ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ