CM Presser: ಅಕ್ಕಿ ಬದಲು ರಾಗಿ, ಜೋಳ ಸಹ ಕೊಡಲಾಗದ ಸ್ಥಿತಿ ರಾಜ್ಯದಲ್ಲಿದೆ: ಸಿದ್ದರಾಮಯ್ಯ, ಮುಖ್ಯಮಂತ್ರಿ

|

Updated on: Jun 19, 2023 | 2:17 PM

ಅಕ್ಕಿಯನ್ನು ಹೊಂದಿಸಲು ಕೇಂದ್ರ ಸರ್ಕಾರದ ಏಜೆನ್ಸಿಗಳೇ ಆಗಿರುವ ಎನ್​ಸಿಸಿಎಫ್ ಮತ್ತು ಎನ್​ಎಎಫ್​ಇಡಿ ಗಳಿಂದ ಕೊಟೇಶನ್ ಕರೆಯಲಾಗಿದೆ ಎಂದು ಮುಖ್ಯಮಂತ್ರಿ ಹೇಳಿದರು.

ಬೆಂಗಳೂರು: ಮುಖ್ಯಮಂತ್ರಿ ಸಿದ್ದರಾಮಯ್ಯ (CM Siddaramaiah) ವಿಧಾನ ಸೌಧದಲ್ಲಿ ಇಂದು ಸುದ್ದಿಗೋಷ್ಟಿ ನಡೆಸಿ ಹಲವಾರು ಸಂಗತಿಗಳ ಬಗ್ಗೆ ಮಾತಾಡಿದರು. ಅನ್ನಭಾಗ್ಯ ಯೋಜನೆಯಡಿ (Anna Bhagya Scheme) ಬಿಪಿಎಲ್ ಕುಟುಂಬಗಳಿಗೆ ಅಕ್ಕಿ ವಿತರಿಸಲು ತೊಡಕುಗಳು ಎದುರಾಗುತ್ತಿವೆ ಅಕ್ಕಿ ಬದಲು ರಾಗಿ ಮತ್ತು ಜೋಳ ಕೊಡಲು ಕೂಡ ಸಾಧ್ಯವಾಗುತ್ತಿಲ್ಲ ಎಂದು ಮುಖ್ಯಮಂತ್ರಿ ಹೇಳಿದರು. ರಾಗಿಯನ್ನು ಪ್ರತಿ ಕುಟುಂಬಕ್ಕೆ ಎರಡೆರಡು ಕೆಜಿಯಂತೆ ವಿತರಿಸಿದರೂ ಕೇವಲ 6 ತಿಂಗಳಿಗೆ ಸಾಕಾಗುವಷ್ಟು ದಾಸ್ತಾನು ಮಾತ್ರ ರಾಜ್ಯದ ಉಗ್ರಾಣಗಳಲ್ಲಿ ಇದೆ ಅಂತ ಆಹಾರ ಮತ್ತು ನಾಗರಿಕ ಪೂರೈಕೆ ಇಲಾಖೆ ಕಾರ್ಯದರ್ಶಿ ಮುಖ್ಯಮಂತ್ರಿಯ ಗಮನಕ್ಕೆ ತಂದರು. ಜೋಳದ ದಾಸ್ತಾನು ಕೂಡ ಕಡಿಮೆ ಇದೆ ಎಂದ ಸಿದ್ದರಾಮಯ್ಯ ಅಕ್ಕಿಯನ್ನು ಹೊಂದಿಸಲು ಕೇಂದ್ರ ಸರ್ಕಾರದ ಏಜೆನ್ಸಿಗಳೇ ಆಗಿರುವ ಎನ್ ಸಿ ಸಿಎಫ್ (NCCF), ಮತ್ತು ಎನ್ ಎ ಎಫ್ ಇ ಡಿ (NAFED) ಗಳಿಂದ ಕೊಟೇಶನ್ ಕರೆಯಲಾಗಿದೆ ಎಂದರು.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ಕಿಸಿ

Follow us on