ಹುಬ್ಬಳ್ಳಿ, ಆ.30: ನಮಗೆ ಆಪರೇಷನ್ ಹಸ್ತದ ಅವಶ್ಯಕತೆಯೇ ಇಲ್ಲ, ಬಿಜೆಪಿ(BJP)ಯಲ್ಲಿ ನೊಂದು ಕಾಂಗ್ರೆಸ್ಗೆ (Congress) ಬರ್ತಿದ್ದಾರೆ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಸಲೀಂ ಅಹ್ಮದ್(Saleem Ahmed) ಹೇಳಿದ್ದಾರೆ. ಹುಬ್ಬಳ್ಳಿ (Hubballi) ಯಲ್ಲಿ ಮಾತನಾಡಿದ ಅವರು ‘ಕೆಲವರು ಕಾಂಗ್ರೆಸ್ ಪಕ್ಷದ ಸಿದ್ಧಾಂತ ಒಪ್ಪಿ ಶಾಸಕರು, ಹಿರಿಯ ಮುಖಂಡರು ಕಾಂಗ್ರೆಸ್ ಪಕ್ಷಕ್ಕೆ ಬರುತ್ತಿದ್ದಾರೆ ಎಂದರು. ಇದೇ ವೇಳೆ ಸರ್ಕಾರ ಬಂದ 100 ದಿನದ ಸಂಭ್ರಮದಲ್ಲಿ ಗೃಹಲಕ್ಷ್ಮೀಗೆ ಚಾಲನೆ ಕುರಿತು ‘ಚುನಾವಣೆ ವೇಳೆ ನೀಡಿದ್ದ ಭರವಸೆ ಈಡೇರಿಸುವ ಕೆಲಸ ಮಾಡುತ್ತಿದ್ದೇವೆ. ಡಿಸೆಂಬರ್ನಲ್ಲಿ 5ನೇ ಗ್ಯಾರಂಟಿ ಜಾರಿ, ನಾವು ನುಡಿದಂತೆ ನಡೆದಿದ್ದೇವೆ. ಶಕ್ತಿ ಯೋಜನೆ ಅಡಿ ಜೂನ್ 11ರಿಂದ ಇಂದಿನವರೆಗೆ 50 ಕೋಟಿ ಮಹಿಳೆಯರ ಪ್ರಯಾಣ ಮಾಡಿದ್ದಾರೆ. ನಾವು ಘೋಷಿಸಿದ್ದನ್ನು ಅನುಷ್ಠಾನಕ್ಕೆ ತಂದಿದ್ದೇವೆ.
ಕಳೆದ 9 ವರ್ಷಗಳಲ್ಲಿ ಕೇಂದ್ರದ ಬಿಜೆಪಿ ಸರ್ಕಾರ ಏನು ಮಾಡಿದೆ. ಇಷ್ಟು ಬೇಗ ಗ್ಯಾರಂಟಿ ಜಾರಿಗೆ ತರುತ್ತಾರೆಂದು ಬಿಜೆಪಿ ಅಂದುಕೊಂಡಿರಲಿಲ್ಲ. ಇನ್ನು ಬಿಜೆಪಿಯವರು ವಿಪಕ್ಷ ನಾಯಕರನ್ನು ಆಯ್ಕೆ ಮಾಡದಿರುವುದು ದುರ್ದೈವ. ವಿಧಾನಸಭೆ ಚುನಾವಣೆ ಸೋಲಿನ ನಂತರ ಬಿಜೆಪಿ ದಿಕ್ಕೆಟ್ಟು ಹೋಗಿದೆ. ರಸ್ತೆಯಲ್ಲಿ ನಿಂತು ಪ್ರಧಾನಿ ನೋಡೋಕೆ ಹೋಗಿದ್ದಾರೆ. ಆದ್ರೆ, ಮೋದಿ ಅವರನ್ನು ನೋಡಲೇ ಇಲ್ಲ. ಇದು ಮೋದಿ ಅವರು ಮಾಡಿದ ಕಪಾಳ ಮೋಕ್ಷ ಎಂದು ಬಿಜೆಪಿ ನಾಯಕರಿಗೆ ಟೀಕಿಸಿದ್ದಾರೆ.
ಮತ್ತಷ್ಟು ವಿಡಿಯೋ ಸುದ್ದಿಗಳನ್ನು ನೋಡಲು ಇಲ್ಲಿ ಕ್ಲಿಕ್ ಮಾಡಿ