ಹೆಚ್​ಡಿ ಕುಮಾರಸ್ವಾಮಿ ಆಸ್ಪತ್ರೆಗೆ ದಾಖಲು; ಪತ್ನಿ ಅನಿತಾ ಫಸ್ಟ್​ ರಿಯಾಕ್ಷನ್ ಹೀಗಿದೆ

ಹೆಚ್​ಡಿ ಕುಮಾರಸ್ವಾಮಿ ಆಸ್ಪತ್ರೆಗೆ ದಾಖಲು; ಪತ್ನಿ ಅನಿತಾ ಫಸ್ಟ್​ ರಿಯಾಕ್ಷನ್ ಹೀಗಿದೆ

Sunil MH
| Updated By: ಕಿರಣ್ ಹನುಮಂತ್​ ಮಾದಾರ್

Updated on: Aug 30, 2023 | 8:09 PM

ಕುಮಾರಸ್ವಾಮಿಯವರ ಆರೋಗ್ಯ ಸ್ಥಿರವಾಗಿದೆ ಎಂದು ಜಯನಗರ ಅಪೋಲೊ ಆಸ್ಪತ್ರೆಯ ವೈದ್ಯರು ಹೇಳಿದ್ದರು. ನಾವು ನೀಡುತ್ತಿರುವ ಚಿಕಿತ್ಸೆಗೆ ಸೂಕ್ತವಾಗಿ ಸ್ಪಂದಿಸುತ್ತಿದ್ದಾರೆ. ನಾವು ಈಗಾಗಲೇ ವರದಿ ಮಾಡಿರುವಂತೆ ಇಂದು ಬೆಳಗಿನ ಜಾವ ಕುಮಾರಸ್ವಾಮಿಯವರ ಆರೋಗ್ಯದಲ್ಲಿ ಏರುಪೇರಾಗಿದ್ದರಿಂದ ಅವರನ್ನು ಕೂಡಲೇ ಆಸ್ಪತ್ರೆಗೆ ತೆಗೆದುಕೊಂಡು ಹೋಗಲಾಗಿತ್ತು.

ಬೆಂಗಳೂರು, ಆ.30: ಮಾಜಿ ಸಿಎಂ ಕುಮಾರಸ್ವಾಮಿಯವರಿಗೆ (HD Kumaraswamy)ತಡರಾತ್ರಿ ಸುಸ್ತು ಮತ್ತು ವೀಕ್ನೆಸ್ ಎಂದು ಜಯನಗರದ ಅಪೋಲೊ ಖಾಸಗಿ ಆಸ್ಪತ್ರೆಗೆ (Apollo Hospital) ದಾಖಲು ಮಾಡಲಾಯಿತು. ಸದ್ಯ ಹೆಲ್ತ್ ಬುಲೆಟಿನ್ ಬಿಡುಗಡೆ ಮಾಡಿರುವ ಅಪೋಲೋ ಆಸ್ಪತ್ರೆಯವರು ಕುಮಾರಸ್ವಾಮಿರ ಆರೋಗ್ಯ ಸ್ಥಿತಿ ಸದ್ಯ ಚೇತರಿಕೆ ಕಂಡಿದೆ ಎಂದು ಅನಿತಾ ಕುಮಾರಸ್ವಾಮಿಯವರು ಹೇಳಿದ್ದಾರೆ.

ಇನ್ನು ಕುಮಾರಸ್ವಾಮಿಯವರ ಆರೋಗ್ಯ ಸ್ಥಿರವಾಗಿದೆ ಎಂದು ಜಯನಗರ ಅಪೋಲೊ ಆಸ್ಪತ್ರೆಯ ವೈದ್ಯರು ಹೇಳಿದ್ದರು. ನಾವು ನೀಡುತ್ತಿರುವ ಚಿಕಿತ್ಸೆಗೆ ಸೂಕ್ತವಾಗಿ ಸ್ಪಂದಿಸುತ್ತಿದ್ದಾರೆ. ನಾವು ಈಗಾಗಲೇ ವರದಿ ಮಾಡಿರುವಂತೆ ಇಂದು ಬೆಳಗಿನ ಜಾವ ಕುಮಾರಸ್ವಾಮಿಯವರ ಆರೋಗ್ಯದಲ್ಲಿ ಏರುಪೇರಾಗಿದ್ದರಿಂದ ಅವರನ್ನು ಕೂಡಲೇ ಆಸ್ಪತ್ರೆಗೆ ತೆಗೆದುಕೊಂಡು ಹೋಗಲಾಗಿತ್ತು. ವೈದ್ಯರ ತಪಾಸಣೆಯ ಪ್ರಕಾರ ಅವರು ಬಳಲಿಕೆ ಮತ್ತು ಒಂದು ಬಗೆಯ ಚಡಪಡಿಕೆ ಅನುಭವಿಸುತ್ತಿದ್ದರು. ಡಾ ಸತೀಶ್ ಚಂದ್ರ ನೇತೃತ್ವದ ಅಪೊಲ್ಲೋ ಆಸ್ಪತ್ರೆ ವೈದ್ಯರ ತಂಡ ಕುಮಾರಸ್ವಾಮಿಯರಿಗೆ ಚಿಕಿತ್ಸೆ ಒದಗಿಸುತ್ತಿದೆ ಎಂದಿದ್ದರು.

ಮತ್ತಷ್ಟು ವಿಡಿಯೋ ಸುದ್ದಿಗಳನ್ನು ನೋಡಲು ಇಲ್ಲಿ ಕ್ಲಿಕ್ ಮಾಡಿ