ನಿಮ್ಮ ಬಿಟ್ಟಿ ಉಪದೇಶ ಬೇಕಿಲ್ಲ, ಸಹಾಯ ಮಾಡುವುದಾದರೆ ಆಯುಧಗಳನ್ನು ನೀಡಿ ಅಂತ ಬೈಡೆನ್ ಗೆ ಹೇಳಿದರು ಜೆಲೆನ್ಸ್ಕಿ!
ಜೆಲೆನ್ಸ್ಕಿ ಅವರ ದಿಟ್ಟತನ ಮತ್ತು ದೈರ್ಯ ಅಂತರರಾಷ್ಟ್ರೀಯ ಸಮುದಾಯಕ್ಕೆ ಮೆಚ್ಚಿಕೆಯಾಗಿದೆ. ರಷ್ಯನ್ ಸೇನೆ ತಮ್ಮ ಸನಿಹಕ್ಕೆ ಬಂದಿದ್ದರೂ ಅವರು ಧೃತಿಗೆಟ್ಟಿಲ್ಲ. ಕೀವ್ ನಗರದಲ್ಲಿ ಎರಡೂ ಸೇನೆಗಳ ನಡುವೆ ಕಾದಾಟ ಶುರುವಾಗಿದೆ.
ಕೇವಲ ತನ್ನ ಸ್ವಾರ್ಥದ ಬಗ್ಗೆ ಮಾತ್ರ ಯೋಚಿಸುವ ವಿಶ್ವದ ದೊಡ್ಡಣ್ಣ ಅಮೆರಿಕ (US) ಸ್ಥಳಾಂತರ ಮಾಡಿ ಅಂತ ನೀಡಿದ ಸಲಹೆಯನ್ನು ತಿರಸ್ಕರಿಸಿದ ಉಕ್ರೇನ್ ಅಧ್ಯಕ್ಷ ವೊಲೊದಿಮಿರ್ ಜೆಲೆನ್ಸ್ಕಿ (Volodymyr Zelenskyy), ಯುದ್ದವಂತೂ ಶುರುವಾಗಿದೆ, ನಾವು ಹೋರಾಡಲು ಸಿದ್ಧರಿದ್ದೇವೆ ಎಂದು ಹೇಳಿದ್ದಾರೆ. ರಷ್ಯನ್ ಸೇನೆ ಶನಿವಾರ ಬೆಳಗ್ಗೆ ಉಕ್ರೇನಿನ ರಾಜಧಾನಿ ಕೀವ್ (Kyiv) ಅನ್ನು ಪ್ರವೇಶಿಸಿದೆ. ಉಕ್ರೇನ್ ಅಧ್ಯಕ್ಷ ಮತ್ತು ಕೀವ್ ನಿವಾಸಿಗಳು ಶನಿವಾರ ಬೆಳಗ್ಗೆ ಎದ್ದಾಗ ವ್ಲಾದಿಮಿರ್ ಪುಟಿನ್ ಅವರ ಸೇನೆ ನಗರದ ಒಳಭಾಗಕ್ಕೆ ಬಂದಿರುವುದು ಗೊತ್ತಾಗಿದೆ. ‘ಸೇನೆಯಿಂದ ನಿಮಗೆ ಮತ್ತು ಕೀವ್ ನಿವಾಸಿಗಳಿಗೆ ಅಪಾಯವಿದೆ, ಬೇಗ ಜಾಗ ಖಾಲಿ ಮಾಡಿ,’ ಎಂದು ಅಮೇರಿಕದ ಅಧ್ಯಕ್ಷ ಜೋ ಬೈಡೆನ್ ಕಳಿಸಿದ ಸಂದೇಶವನ್ನು ಕಡೆಗಣಿಸಿದ ಜೆಲೆನ್ಸ್ಕಿ, ‘ನಮಗೆ ಬೇಕಿರುವುದು ನಿಮ್ಮ ಬಿಟ್ಟಿ ಉಪದೇಶವಲ್ಲ, ಸಹಾಯ ಮಾಡುವ ಮನಸ್ಸಿದ್ದರೆ, ಮಿಲಿಟರಿ ನೆರವು ಮತ್ತು ಶಸ್ತ್ರಾಸ್ತ್ರಗಳನ್ನು ನೀಡಿ,’ ಎಂದು ಹೇಳಿದ್ದಾರೆ.
ಜೆಲೆನ್ಸ್ಕಿ ಅವರ ದಿಟ್ಟತನ ಮತ್ತು ದೈರ್ಯ ಅಂತರರಾಷ್ಟ್ರೀಯ ಸಮುದಾಯಕ್ಕೆ ಮೆಚ್ಚಿಕೆಯಾಗಿದೆ. ರಷ್ಯನ್ ಸೇನೆ ತಮ್ಮ ಸನಿಹಕ್ಕೆ ಬಂದಿದ್ದರೂ ಅವರು ಧೃತಿಗೆಟ್ಟಿಲ್ಲ. ಕೀವ್ ನಗರದಲ್ಲಿ ಎರಡೂ ಸೇನೆಗಳ ನಡುವೆ ಕಾದಾಟ ಶುರುವಾಗಿದೆ. ನಗರದಲ್ಲಿರುವ ಅಧ್ಯಕ್ಷರ ಕಟ್ಟಡದ ಮುಂದಿನ ರಸ್ತೆಯಲ್ಲಿ ಅವರು ಹೇಳಿಕೆ ನೀಡಿದ್ದಾರೆ.
‘ರಷ್ಯಾದ ದಾಳಿಗೆ ಹೆದರುವ ಮಾತೇ ಇಲ್ಲ, ನಮ್ಮ ದೇಶದ ಮಿಲಿಟರಿ ಪಡೆಗಳು ರಷ್ಯಾಗೆ ಸಮರ್ಪಕ ಉತ್ತರ ನೀಡಲು ತಯಾರಾಗಿವೆ,’ ಎಂದು ತಮ್ಮ ದೇಶದ ನಾಗರಿಕರಿಗೆ ಆಶ್ವಾಸನೆ ನೀಡಿದ ಜೆಲೆನ್ಸ್ಕಿ, ‘ನಾನು ದೇಶದಿಂದ ಪಲಾಯನ ಮಾಡಿದ್ದೇನೆ ಎಂಬ ಸುಳ್ಳು ವದಂತಿಗಳನ್ನು ಹರಡಲಾಗುತ್ತಿದೆ. ನಾನೆಲ್ಲೂ ಹೋಗಿಲ್ಲ, ಕೀವ್ ನಲ್ಲೇ ಇದ್ದೇನೆ, ನಮ್ಮ ಸೇನೆ ಶಸ್ತ್ರಾಸ್ತ್ರ ಕೈ ಚೆಲ್ಲುವ ಪ್ರಶ್ನೆ ಉದ್ಭವಿಸುವುದಿಲ್ಲ,’ ಎಂದು ಹೇಳಿದ್ದಾರೆ.