ಪ್ರಜ್ವಲ್ ಬಗ್ಗೆ ಮಾತು ಬೇಡ ಆದರೆ ಎಲ್ಲರೂ ಸಂತ್ರಸ್ತ ಮಹಿಳೆಯರ ಬಗ್ಗೆ ಯೋಚಿಸಬೇಕಿದೆ: ವಾಟಾಳ್ ನಾಗರಾಜ್

|

Updated on: May 28, 2024 | 4:03 PM

ಪ್ರಜ್ವಲ್ ರೇವಣ್ಣ ಪ್ರಕರಣ ಚುನಾವಣೆಯಲ್ಲಿ ತಮ್ಮ ಅವಕಾಶಗಳ ಮೇಲೆ ಯಾವುದೇ ಪರಿಣಾಮ ಬೀರದು ಎಂದು ನಾಗರಾಜ್ ಹೇಳಿದರು. ಆದರೆ, ಸಂತ್ರಸ್ತ ಮಹಿಳೆಯರ ಬಗ್ಗೆ ನಾವೆಲ್ಲ ಯೋಚನೆ ಮಾಡಬೇಕಿದೆ, ಸರ್ಕಾರ ಅವರ ನೆರವಿಗೆ ಧಾವಿಸಿ ಅವರು ಅನುಭವಿಸುತ್ತಿರುವ ಮಾನಸಿಕ ತೊಳಲಾಟ ಮತ್ತು ಹಿಂಸೆಯಿಂದ ಮುಕ್ತರಾಗಿಸಬೇಕಿದೆ, ಚುನಾವಣೆಯ ಬಳಿಕ ತಾನು ರಾಜ್ಯದಾದ್ಯಂತ ಓಡಾಡಿ ಶೋಷಿತ ಮಹಿಳೆಯಯರ ಪರವಾಗಿ ಧ್ವನಿಯೆತ್ತುವುದಾಗಿ ನಾಗರಾಜ್ ಹೇಳಿದರು.

ಹಾಸನ: ದಕ್ಷಿಣ ಪದವೀಧರ ಕ್ಷೇತ್ರದಿಂದ ವಿಧಾನ ಪರಿಷತ್ ಚುನಾವಣೆಯಲ್ಲಿ ಸ್ಪರ್ಧಿಸುತ್ತಿರುವ ವಾಟಾಳ್ ನಾಗರಾಜ್ (Vatal Nagaraj) ಇಂದು ಹಾಸನ ಪ್ರೆಸ್ ಕ್ಲಬ್ ನಲ್ಲಿ ಪತ್ರಿಕಾ ಗೋಷ್ಠಿ ನಡೆಸಿ ಮಾತಾಡುವಾಗ ಲೈಂಗಿಕ ಹಗರಣಗಳ ಆರೋಪಿಯಾಗಿ ವಿದೇಶದಲ್ಲಿ ತಲೆಮರೆಸಿಕೊಂಡಿರುವ (absconding) ಪ್ರಜ್ವಲ್ ರೇವಣ್ಣ (Prajwal Revanna) ಬಗ್ಗೆ ಮಾತಾಡಲು ನಿರಾಕರಿಸಿದರು. ಅಸಲಿಗೆ ಪ್ರಜ್ವಲ್ ಬಗ್ಗೆ ಕೇಳಿದಾಗ ಅವರು ಗೊಂದಕ್ಕೆ ಬಿದ್ದು ಏನು ಹೇಳಬೇಕೆಂದು ತೋಚದೆ ತೊಳಲಾಟ ಅನುಭವಿಸಿದರು. ಆ ಪ್ರಕರಣದ ಬಗ್ಗೆ ಮಾತಾಡುವುದೇ ಬೇಡ, ಅದು ಒಂದು ಕಡೆಯಿಂದ ಶುರುವಾಗಿ ಮತ್ಯಾವುದೋ ಕಡೆಗೆ ಹೋಗುತ್ತದೆ. ಒಂದು ಪದ ಹೇಳಿದಾಗ ಅದಕ್ಕೆ ಮತ್ತೊಂದು ಸೇರಿಕೊಳ್ಳುತ್ತದೆ, ಎಲ್ಲ ಸೇರಿ ಪ್ರಜ್ವಲ್ ನನ್ನು ಹುತಾತ್ಮ ಮಾಡಲು ಹೊರಟಿದ್ದಾರೆ ಎಂದು ಹೇಳಿದರು. ಪ್ರಜ್ವಲ್ ರೇವಣ್ಣ ಪ್ರಕರಣ ಚುನಾವಣೆಯಲ್ಲಿ ತಮ್ಮ ಅವಕಾಶಗಳ ಮೇಲೆ ಯಾವುದೇ ಪರಿಣಾಮ ಬೀರದು ಎಂದು ನಾಗರಾಜ್ ಹೇಳಿದರು. ಆದರೆ, ಸಂತ್ರಸ್ತ ಮಹಿಳೆಯರ ಬಗ್ಗೆ ನಾವೆಲ್ಲ ಯೋಚನೆ ಮಾಡಬೇಕಿದೆ, ಸರ್ಕಾರ ಅವರ ನೆರವಿಗೆ ಧಾವಿಸಿ ಅವರು ಅನುಭವಿಸುತ್ತಿರುವ ಮಾನಸಿಕ ತೊಳಲಾಟ ಮತ್ತು ಹಿಂಸೆಯಿಂದ ಮುಕ್ತರಾಗಿಸಬೇಕಿದೆ, ಚುನಾವಣೆಯ ಬಳಿಕ ತಾನು ರಾಜ್ಯದಾದ್ಯಂತ ಓಡಾಡಿ ಶೋಷಿತ ಮಹಿಳೆಯಯರ ಪರವಾಗಿ ಧ್ವನಿಯೆತ್ತುವುದಾಗಿ ನಾಗರಾಜ್ ಹೇಳಿದರು.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಇದನ್ನೂ ಓದಿ:  ರಾಜ್ಯ ವಿಧಾನ ಮಂಡಲ ಜಂಟಿ ಅಧಿವೇಶನ: ರಾಜ್ಯಪಾಲರ ಹಿಂದಿ ಭಾಷಣಕ್ಕೆ ವಾಟಾಳ್ ನಾಗರಾಜ್ ವಿರೋಧ