ರಾಜ್ಯ ವಿಧಾನ ಮಂಡಲ ಜಂಟಿ ಅಧಿವೇಶನ: ರಾಜ್ಯಪಾಲರ ಹಿಂದಿ ಭಾಷಣಕ್ಕೆ ವಾಟಾಳ್ ನಾಗರಾಜ್ ವಿರೋಧ

ವಿಧಾನಸೌಧದಲ್ಲಿ ಹೋರಾಟಗಾರ ವಾಟಾಳ್ ನಾಗರಾಜ್ ಮಾಧ್ಯಮದವರೊಂದಿಗೆ ಮಾತನಾಡಿದ್ದು, ರಾಜ್ಯಪಾಲರ ಬಗ್ಗೆ ಅಪಾರ ಗೌರವವಿದೆ, ಹಿಂದಿ ಭಾಷಣಕ್ಕೆ ವಿರೋಧವಿದೆ. ಶಾಸನಸಭೆಯಲ್ಲಿ ಸಚಿವರು, ಶಾಸಕರು, MLCಗಳು ವಿರೋಧಿಸಲಿಲ್ಲ. ಶಾಸಕರಿಗೆ, ಮಂತ್ರಿಗಳಿಗೆ ಕನ್ನಡ ಬೇಡ್ವಾ? ರಾಜ್ಯಪಾಲರು ಹಿಂದಿಯಲ್ಲೇ ಕನ್ನಡ ಅಭಿವೃದ್ಧಿ ಮಾಡುತ್ತೇವೆ ಅಂದರು. ರಾಜ್ಯದ ಶಾಸನ ಸಭೆಯ ಜಂಟಿ ಅಧಿವೇಶನದಲ್ಲಿ ಕನ್ನಡ ಮಾಯವಾಗಿದೆ ಎಂದು ಕಿಡಿಕಾರಿದ್ದಾರೆ.

ರಾಜ್ಯ ವಿಧಾನ ಮಂಡಲ ಜಂಟಿ ಅಧಿವೇಶನ: ರಾಜ್ಯಪಾಲರ ಹಿಂದಿ ಭಾಷಣಕ್ಕೆ ವಾಟಾಳ್ ನಾಗರಾಜ್ ವಿರೋಧ
ಹೋರಾಟಗಾರ ವಾಟಾಳ್ ನಾಗರಾಜ್
Follow us
| Updated By: ಗಂಗಾಧರ​ ಬ. ಸಾಬೋಜಿ

Updated on:Feb 12, 2024 | 5:57 PM

ಬೆಂಗಳೂರು, ಫೆಬ್ರವರಿ 12: ಕನ್ನಡ ಉಳಿಸುವುದಕ್ಕೆ ಬಹಳ ಪ್ರಮುಖವಾದಂತಹ ರಾಜ್ಯದ ಶಾಸನ ಸಭೆಯ ಜಂಟಿ ಅಧಿವೇಶನದಲ್ಲಿ ಕನ್ನಡ ಮಾಯವಾಗಿದೆ. ಹಿಂದಿಯಲ್ಲಿ ಮಾತನಾಡಿರುವುದು ಖಂಡನೆ. ಶಾಸಕರಿಗೆ, ಮಂತ್ರಿಗಳಿಗೆ ಕನ್ನಡ ಬೇಡ್ವಾ ಎಂದು ಹೋರಾಟಗಾರ ವಾಟಾಳ್ ನಾಗರಾಜ್ (Vatal Nagaraj) ವಾಗ್ದಾಳಿ ಮಾಡಿದ್ದಾರೆ. ವಿಧಾನಸೌಧದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಇವತ್ತು ಕರ್ನಾಟಕ ರಾಜ್ಯದ ವಿಧಾನಮಂಡಲದ ಮೊದಲನೆ ದಿನ. ಇದನ್ನು ಉದ್ದೇಶಿಸಿ ರಾಜ್ಯಪಾಲರು ಹಿಂದೆಯಲ್ಲಿ ಭಾಷಣ ಮಾಡಿದ್ದಾರೆ. ರಾಜ್ಯಪಾಲರ ಬಗ್ಗೆ ನನಗೆ ಗೌರವವಿದೆ. ಆದರೆ ಅವರ ಹಿಂದಿ ಭಾಷಣದ ಬಗ್ಗೆ ವಿರೋಧವಿದೆ. ಶಾಸನ ಸಭೆಯಲ್ಲಿ ಒಬ್ಬ ಶಾಸಕರು, ಎಂಎಲ್​ಸಿ, ಮಂತ್ರಿಗಳು ವಿರೋಧ ಮಾಡಿಲ್ಲ. ರಾಜ್ಯಪಾಲರು ಹಿಂದೆಯಲ್ಲೆ ಕನ್ನಡ ಅಭಿವೃದ್ಧಿ ಮಾಡುತ್ತೇವೆ ಅಂತ ಮಾತಾನಾಡಿದ್ದರು. ನಮ್ಮ ಗೌರವಾನ್ವಿತ ಸದಸ್ಯರನ್ನ ಏನು ಅಂತ ಹೇಳಬೇಕೊ ಗೊತ್ತಿಲ್ಲ. ನಮ್ಮ ಶಾಸಕರು, ಎಂಎಲ್​ಸಿ, ಮಂತ್ರಿಗಳ ಬಗ್ಗೆ ಖಂಡನೆ ಮಾಡುತ್ತೇವೆ ಎಂದು ಹೇಳಿದ್ದಾರೆ.

1967ರ ಅಂದಿನ ರಾಜ್ಯಪಾಲರ ಇಂಗ್ಲೀಷ್ ಭಾಷಣಕ್ಕೆ ಒಪ್ಪಿರಲಿಲ್ಲ. ಜೆಹೆಚ್ ಪಟೇಲ್ ಸಿಎಂ ಆಗಿದ್ದಾಗ ಸಂಪೂರ್ಣ ಭಾಷಣ ವಿರೋಧ ಮಾಡಿದ್ದೆ. ಖುರ್ಷಿದ್ ಅಲಾಂಖಾನ್ ರಾಜ್ಯಪಾಲರ ಭಾಷಣ ಮಾಡುದಕ್ಕೆ ಆಗದೆ ಕನ್ನಡದಲ್ಲಿ ಭಾಷಣ ಮಾಡಬೇಕಂತ ಹಟ ಹಿಡಿದಾಗ ಸದನದಿಂದ ಹೊರ ಹೋದರು. ಇದು ಐತಿಹಾಸಿಕವಾದ ದಿನ.

ಹಿಂದಿಯಲ್ಲಿ ಮಾತನಾಡಿರುವುದು ಅನ್ಯಾಯ

ಇದು ಗಂಭೀರವಾದ ಪರಿಸ್ಥಿತಿ. ರಾಜ್ಯಕ್ಕೆ ಮಾಡಿದ ದ್ರೋಹ. ಬಿಡಿ ಜತ್ತಿ ಅವರ ಮಗ, ನಾನು ಮತ್ತು ಈಗಿನ ರಾಜ್ಯಪಾಲರು ಸೇರಿದ್ದಾಗ ಕನ್ನಡ ಪಂಡಿತರನ್ನ ನೇಮಿಸಿಕೊಂಡು ಕನ್ನಡ ಕಲಿಯಿರಿ ಅಂತ ರಾಜ್ಯಪಾಲರಿಗೆ ಸಭೆಯಲ್ಲಿ ಹೇಳಿದ್ದೆ. ಬಹಿರಂಗವಾಗಿ ಮಾತನಾಡಿದ್ದೆ ಸಂಪೂರ್ಣವಾಗಿ ಕನ್ನಡದ ಭೂಮಿಯಲ್ಲಿ ಕನ್ನಡದ ಜಂಟಿ ಅಧಿವೇಶನದಲ್ಲಿ ಹಿಂದಿಯಲ್ಲಿ ಮಾತನಾಡಿರುವುದು ಅನ್ಯಾಯ.

ಇದನ್ನೂ ಓದಿ: Karnataka Budget Session: ಇಡೀ ದೇಶಕ್ಕೆ ಕರ್ನಾಟಕದ ಗ್ಯಾರಂಟಿ ಮಾದರಿ; ಬಜೆಟ್​​ ಅಧಿವೇಶನದಲ್ಲಿ ರಾಜ್ಯಪಾಲ ಗೆಹ್ಲೋಟ್

ಫೆ. 24ರ ಒಳಗೆ ಎಲ್ಲೆಲ್ಲೂ ಕನ್ನಡ ನಾಮಫಲಕ ಹಾಕಬೇಕು ಅಂತಾರೆ. ಆದರೆ ಎಲ್ಲೂ ಹಾಕಿಲ್ಲ, ಮಾರ್ವಾಡಿಗರು, ತಮಿಳಿಗರು ತುಂಬಿ ತುಳುಕುತ್ತಿದ್ದಾರೆ. ಫೆ. 24ರ ಒಳಗೆ ಸಂಪೂರ್ಣ ಬದಲಾವಣೆ ಆಗದಿದ್ದರೆ ಸಂಪೂರ್ಣ ಬಂದ್ ಮಾಡುತ್ತೇವೆ. ಸದನದಲ್ಲಿ ಒಪ್ಪಿಗೆ ತಂದು ಜಾರಿಗೆ ಮಾಡಲೇಬೇಕು ಎಂದು ಹೇಳಿದ್ದಾರೆ.

ರಾಜ್ಯಪಾಲರ ಭಾಷಣದಲ್ಲಿ ಉಪ್ಪು, ಹುಳಿ, ಖಾರ ಏನೂ ಇಲ್ಲ: ಆರಗ ಜ್ಞಾನೇಂದ್ರ

ವಿಧಾನಸೌಧದಲ್ಲಿ ಮಾಜಿ ಗೃಹ ಸಚಿವ ಆರಗ ಜ್ಞಾನೇಂದ್ರ ಪ್ರತಿಕ್ರಿಯಿಸಿದ್ದು, ರಾಜ್ಯಪಾಲರ ಬಾಯಿಂದ ಸರ್ಕಾರದ ಭಾಷಣ ಓದಿಸಿದ್ದಾರೆ. ಇದರಲ್ಲಿ ಉಪ್ಪು, ಹುಳಿ, ಖಾರ ಏನೂ ಇಲ್ಲ. ರಾಜ್ಯ ಸರ್ಕಾರದ ಗ್ಯಾರಂಟಿ ಯೋಜನೆಗಳು ಜನರಿಗೆ ತಲುಪಿಲ್ಲ.

ಇದನ್ನೂ ಓದಿ: Karnataka Budget 2024: ಬಜೆಟ್​ ಅಧಿವೇಶನದಲ್ಲಿ ಜೈ ಶ್ರೀರಾಮ ಘೋಷಣೆ ಕೂಗಿದ ಬಿಜೆಪಿ, ಕಾಂಗ್ರೆಸ್​ ನಾಯಕರು

ರಾಜ್ಯದ ಜನರಿಗೆ ಗ್ಯಾರಂಟಿ ಭರವಸೆ ನೀಡಿ ಅಧಿಕಾರಕ್ಕೆ ಬಂದಿದ್ದಾರೆ. 8 ತಿಂಗಳಲ್ಲಿ‌ ಅಸಮರ್ಥರಾಗಿದ್ದಾರೆ, ಅಭಿವೃದ್ಧಿ ಕಾರ್ಯ ಮಾಡಿಲ್ಲ. 5-6 ತಿಂಗಳಿಂದ ವೃದ್ಧಾಪ್ಯ ವೇತನ, ವಿಧವಾ ವೇತನ ಬಿಡುಗಡೆ ಆಗಿಲ್ಲ ಎಂದು ವಾಗ್ದಾಳಿ ಮಾಡಿದ್ದಾರೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Published On - 5:56 pm, Mon, 12 February 24

‘ಬಿಗ್​ಬಾಸ್ ಅನ್ನು ಹಾಳು ಮಾಡಲು ನಿಮ್ಮಪ್ಪನಾಣೆ ಸಾಧ್ಯವಿಲ್ಲ‘
‘ಬಿಗ್​ಬಾಸ್ ಅನ್ನು ಹಾಳು ಮಾಡಲು ನಿಮ್ಮಪ್ಪನಾಣೆ ಸಾಧ್ಯವಿಲ್ಲ‘
ಸಿದ್ದರಾಮಯ್ಯ ಪಾರ್ವತಿ ಅವರನ್ನು ಮದುವೆ ಆಗಿದ್ದೇ ತಪ್ಪಾ? ಸಿಎಂ ಇಬ್ರಾಹಿಂ
ಸಿದ್ದರಾಮಯ್ಯ ಪಾರ್ವತಿ ಅವರನ್ನು ಮದುವೆ ಆಗಿದ್ದೇ ತಪ್ಪಾ? ಸಿಎಂ ಇಬ್ರಾಹಿಂ
ಮಹಾರಾಷ್ಟ್ರದ ದೇವಸ್ಥಾನದಲ್ಲಿ ಡೋಲು ಬಾರಿಸಿದ ಪ್ರಧಾನಿ ಮೋದಿ
ಮಹಾರಾಷ್ಟ್ರದ ದೇವಸ್ಥಾನದಲ್ಲಿ ಡೋಲು ಬಾರಿಸಿದ ಪ್ರಧಾನಿ ಮೋದಿ
ಮೈಸೂರು ದಸರಾದಲ್ಲಿ ಗಿಡ್ಡ ಕಾಲಿನ ಬಂಡೂರು ಕುರಿಯೇ ಆಕರ್ಷಣೆ
ಮೈಸೂರು ದಸರಾದಲ್ಲಿ ಗಿಡ್ಡ ಕಾಲಿನ ಬಂಡೂರು ಕುರಿಯೇ ಆಕರ್ಷಣೆ
ಲಾಯರ್ ಜಗದೀಶ್ ವಿಚಾರಣೆ ನಡೆಸುವ ಸುಳಿವು ಕೊಟ್ಟ ಕಿಚ್ಚ: ವಿಡಿಯೋ
ಲಾಯರ್ ಜಗದೀಶ್ ವಿಚಾರಣೆ ನಡೆಸುವ ಸುಳಿವು ಕೊಟ್ಟ ಕಿಚ್ಚ: ವಿಡಿಯೋ
ಪಿಡಿಒ, ಕಾರ್ಯದರ್ಶಿಗಳ ಹೋರಾಟಕ್ಕೆ ಬೆಂಬಲ ಘೋಷಿಸಿದ ಕುಮಾರಸ್ವಾಮಿ,ವಿಜಯೇಂದ್ರ
ಪಿಡಿಒ, ಕಾರ್ಯದರ್ಶಿಗಳ ಹೋರಾಟಕ್ಕೆ ಬೆಂಬಲ ಘೋಷಿಸಿದ ಕುಮಾರಸ್ವಾಮಿ,ವಿಜಯೇಂದ್ರ
ಶನಿವಾರ ಭಕ್ತರ ಪರಾಕಾಷ್ಠೆ-ತಿಮ್ಮಪ್ಪನ ದರ್ಶನಕ್ಕೆ ಕಾಯಬೇಕು 18 ಗಂಟೆ...
ಶನಿವಾರ ಭಕ್ತರ ಪರಾಕಾಷ್ಠೆ-ತಿಮ್ಮಪ್ಪನ ದರ್ಶನಕ್ಕೆ ಕಾಯಬೇಕು 18 ಗಂಟೆ...
ನಾಮಿನೇಷನ್ ತೂಗುಗತ್ತಿ ಜೊತೆ ಕುತೂಹಲ ಮೂಡಿಸಿದ ಕಿಚ್ಚನ ಪಂಚಾಯ್ತಿ
ನಾಮಿನೇಷನ್ ತೂಗುಗತ್ತಿ ಜೊತೆ ಕುತೂಹಲ ಮೂಡಿಸಿದ ಕಿಚ್ಚನ ಪಂಚಾಯ್ತಿ
Daily Devotional: ನವರಾತ್ರಿ ಮೂರನೇ ದಿನ ಚಂದ್ರಘಂಟಾ ದೇವಿ ಆರಾಧನೆ
Daily Devotional: ನವರಾತ್ರಿ ಮೂರನೇ ದಿನ ಚಂದ್ರಘಂಟಾ ದೇವಿ ಆರಾಧನೆ
Nithya Bhavishya: ನವರಾತ್ರಿಯ ಮೂರನೇ ದಿನದ ರಾಶಿ ಭವಿಷ್ಯ ತಿಳಿಯಿರಿ
Nithya Bhavishya: ನವರಾತ್ರಿಯ ಮೂರನೇ ದಿನದ ರಾಶಿ ಭವಿಷ್ಯ ತಿಳಿಯಿರಿ