Sign In

By signing in or creating an account, you agree with Associated Broadcasting Company's Terms & Conditions and Privacy Policy.

ಹೆಲ್ಮೆಟ್​ ಹಾಕದಿರುವುದನ್ನು ಪ್ರಶ್ನಿಸಿದ್ದಕ್ಕೆ ಪೊಲೀಸಪ್ಪನ ಕೈಕಚ್ಚಿದ ಬೈಕ್ ಸವಾರ, ವಿಡಿಯೋ ನೋಡಿ

ಇತ್ತೀಚೆಗೆ ಬೆಂಗಳೂರಿನಲ್ಲಿ ಬಿಬಿಎಂಟಿಸಿ ಬಸ್ ಕಂಡಕ್ಟರ್​ವೊಬ್ಬರು ವಿದ್ಯಾರ್ಥಿ ಕೈಕಚ್ಚಿರುವ ಪ್ರಕರಣ ನಡೆದಿತ್ತು. ಇದೇ ತರಹನಾದ ಮತ್ತೊಂದು ಸುದ್ದಿ ಬೆಳಕಿಗೆ ಬಂದಿದೆ. ಆದ್ರೆ, ಹೆಲ್ಮೆಟ್​ ಧರಿಸದಿರುವುದನ್ನು ಪ್ರಶ್ನಿಸಿದ ಸಂಚಾರಿ ಪೊಲೀಸ್ ಪೇದೆಯ ಕೈಕಚ್ಚಿರುವ ಘಟನೆ ನಡೆದಿದ್ದು, ಇದೀಗ ವಿಡಿಯೋ ಫುಲ್ ವೈರಲ್ ಆಗಿದೆ.

ಹೆಲ್ಮೆಟ್​ ಹಾಕದಿರುವುದನ್ನು ಪ್ರಶ್ನಿಸಿದ್ದಕ್ಕೆ ಪೊಲೀಸಪ್ಪನ ಕೈಕಚ್ಚಿದ ಬೈಕ್ ಸವಾರ, ವಿಡಿಯೋ ನೋಡಿ
Follow us
TV9 Web
| Updated By: ರಮೇಶ್ ಬಿ. ಜವಳಗೇರಾ

Updated on:Feb 12, 2024 | 5:48 PM

ಬೆಂಗಳೂರು, (ಫೆಬ್ರವರಿ 21): ಹೆಲ್ಮೆಟ್​ ಸಂಬಂಧ (helmet) ಸಂಚಾರಿ ಪೊಲೀಸರು (Traffic Police) ಹಾಗೂ ವಾಹನ ಸವಾರರ ನಡುವೆ ಕಿರಿಕ್ ನಡೆಯುತ್ತಿರುತ್ತವೆ. ಆದ್ರೆ, ಇಲ್ಲೋರ್ವ ಬೈಕ್ ಸವಾರ ಹೆಲ್ಮೆಟ್ ಹಾಕದಿರುವುದನ್ನು ಪ್ರಶ್ನಿಸಿದ್ದಕ್ಕೆ ಸಂಚಾರಿ ಪೊಲೀಸ್ ಪೇದೆಯ ಕೈಕಚ್ಚಿದ್ದಾನೆ. ಬೆಂಗಳೂರಿನ (Bengaluru) ವಿಲ್ಸನ್ ಗಾರ್ಡನ್ 10ನೇ ಕ್ರಾಸ್​ನಲ್ಲಿ ಈ ಘಟನೆ ನಡೆದಿದೆ. ಬಳಿಕ ಸ್ಥಳಕ್ಕೆ ಹೊಯ್ಸಳ ಸಿಬ್ಬಂದಿ ಕರೆಸಿ ಬೈಕ್​ ಸವಾರನನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ. ಅಲ್ಲದೇ ಬೈಕ್​ ಸವಾರನ ವಿರುದ್ಧ ಸಂಚಾರಿ ಪೊಲೀಸರು ದೂರು ದಾಖಲಿಸಿದ್ದಾರೆ.

ಹೆಲ್ಮೆಟ್​ ಹಾಕದಿರುವ ಬೈಕ್ ಸವಾರನನ್ನು ಸಂಚಾರಿ ಪೊಲೀಸ್​ ಪೇದೆ ಅಡ್ಡಹಾಕಿದ್ದಾರೆ. ಬಳಿಕ ಹೆಲ್ಮೆಟ್ ಯಾಕೆ ಹಾಕಿಲ್ಲ ಎಂದು ಪ್ರಶ್ನಿಸಿ ಕೀ ಕಿತ್ತುಕೊಂಡಿದ್ದಾರೆ.  ಈ ವೇಳೆ ಇಬ್ಬರ ನಡುವೆ ವಾಗ್ದಾದ ನಡೆದಿದ್ದು, ಕೊನೆಗೆ ಬೈಕ್​ ಸವಾರ ಸಿಟ್ಟಿನಿಂದ ಕೀ ಕೊಡುವಂತೆ ಪೊಲೀಸ್​ ಕಾನ್ಸ್​ಟೇಬಲ್​ ಕೈ ಕಚ್ಚಿದ್ದಾನೆ. ಕೂಡಲೇ ಕಾನ್ಸ್​ಟೇಬಲ್ ಹೊಯ್ಸಳಗೆ ಕರೆ ಮಾಡಿ ಸ್ಥಳಕ್ಕೆ ಕರೆಯಿಸಿಕೊಂಡಿದ್ದಾರೆ. ಇದೀಗ ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಫುಲ್ ವೈರಲ್ ಆಗಿದೆ.

ಕೆಆರ್​ ಜಯತೀರ್ಥ ಎನ್ನುವವರು ವಿಡಿಯೋವನ್ನು ಟ್ವಿಟ್ಟರ್​(ಎಕ್ಸ್​) ನಲ್ಲಿ ಶೇರ್ ಮಾಡಿದ್ದು, ಹೆಲ್ಮೆಟ್ ರಹಿತ ಚಾಲಕನ ಫೋಟೋ ಹಿಡಿದಿದಕ್ಕೆ ಫೋಟೋ ಅಪ್ಲೋಡ್ ಮಾಡಿದರೆ ಫೋನ್ ಒಡೆದು ಹಾಕುವುದಾಗಿ ಅವಾಜ್ ಹಾಕಿ ಎಳೆದಾಡಿ ಪೋಲೀಸರ ಕೈಕಚ್ಚಿದ ಸವಾರ. ಪೋಲೀಸರ ಕೈ ಬಲ ಪಡಿಸಿ ಎಂದು ಬರೆದುಕೊಂಡಿದ್ದಾರೆ.

ದೂರಿಗೆ ಪ್ರತಿದೂರು

ದೇವದುರ್ಗ ಜೆಡಿಎಸ್​ ಶಾಸಕಿ ಕರೆಮ್ಮ ಪುತ್ರ ಹಾಗೂ ಆಪ್ತ ಸಹಾಯಕ (ಪಿಎ) ಕಾನ್ಸ್​ಟೇಬಲ್​ ಮೇಲೆ ಹಲ್ಲೆ ಮಾಡಿದ್ದಾರೆ ಎಂದು ಆರೋಪಸಲಾಗಿದ್ದು, ಈ ಸಂಬಂಧ ದೂರು ದಾಖಲಾಗಿದೆ. ಇದೀಗ ಇದೇ ಪ್ರಕರಣಕ್ಕೆ ಸಂಬಂಧಿಸಿದಂತೆ ಹಲ್ಲೆಗೊಳಗಾದ ಪೊಲೀಸ್ ಪೇದೇ ಸೇರಿದಂತೆ ಇತರೆ ಸಿಬ್ಬಂದಿ ವಿರುದ್ಧ ಪ್ರತಿ ದೂರು ದಾಖಲಾಗಿದೆ. ಟ್ರ್ಯಾಕ್ಟರ್​ ತಡೆದು ಅವಾಚ್ಯ ಶಬ್ದದಿಂದ ನಿಂದಿಸಿ ಹಲ್ಲೆ ನಡೆಸಿದ್ದಾರೆ ಎಂದು ಟ್ರಾಕ್ಟರ್ ಚಾಲಕ ಮೌನೇಶ್​ ನೀಡಿದ ದೂರಿನ ಮೇರೆಗೆ ರಾಯಚೂರು ಜಿಲ್ಲೆಯ ದೇವದುರ್ಗ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಹಲ್ಲೆಗೊಳಗಾಗಿರುವ ಪೊಲೀಸ್​​ ಕಾನ್ಸ್​ಟೇಬಲ್ ಹನುಮಂತರಾಯ, ಹನುಮೇಶ್ ಹಾಗೂ ಮಹೇಶ್ ವಿರುದ್ಧ ಎಫ್​ಐಆರ್ ದಾಖಲಾಗಿದೆ. ಪುತ್ರನ ಮೇಲೆ ಕೇಸ್ ದಾಖಲಾದ ಬೆನ್ನಲ್ಲೇ ಕೌಂಟರ್ ಕೇಸ್ ದಾಖಲಿಸಿಕೊಳ್ಳುವಂತೆ ಒತ್ತಾಯಿಸಿ ಶಾಸಕಿ ಕರೆಮ್ಮ ಪೊಲೀಸ್ ಠಾಣೆ ಮುಂದೆ ತಮ್ಮ ಬೆಂಬಗಲಿಗರ ಜೊತೆ ಪ್ರತಿಭಟನೆ  ಮಾಡಿದ್ದರು. ಇದೀಗ ಕರೆಮ್ಮ ಆಗ್ರಹ ಮೇರೆಗೆ ಪ್ರತಿದೂರು ದಾಖಲಾಗಿದೆ.

Published On - 5:44 pm, Mon, 12 February 24

‘ಓಂ’ ಚಿತ್ರಕ್ಕೆ ಬರಲಿದೆ ಸೀಕ್ವೆಲ್; ಅಪ್​ಡೇಟ್ ಕೊಟ್ಟ ಉಪೇಂದ್ರ-ಶಿವಣ್ಣ
‘ಓಂ’ ಚಿತ್ರಕ್ಕೆ ಬರಲಿದೆ ಸೀಕ್ವೆಲ್; ಅಪ್​ಡೇಟ್ ಕೊಟ್ಟ ಉಪೇಂದ್ರ-ಶಿವಣ್ಣ
ಫ್ಲೈಓವರ್​ನಿಂದ ಸರ್ವೀಸ್ ರಸ್ತೆಗೆ ಬಿದ್ದ ತೈಲ ಟ್ಯಾಂಕರ್, ಭಯಾನಕ ವಿಡಿಯೋ
ಫ್ಲೈಓವರ್​ನಿಂದ ಸರ್ವೀಸ್ ರಸ್ತೆಗೆ ಬಿದ್ದ ತೈಲ ಟ್ಯಾಂಕರ್, ಭಯಾನಕ ವಿಡಿಯೋ
ಮಂಗಳೂರಿನಲ್ಲಿ ರಂಜಾನ್: ಸಾಮೂಹಿಕ ಪ್ರಾರ್ಥನೆಯಲ್ಲಿ ಸ್ಪೀಕರ್ ಖಾದರ್ ಭಾಗಿ
ಮಂಗಳೂರಿನಲ್ಲಿ ರಂಜಾನ್: ಸಾಮೂಹಿಕ ಪ್ರಾರ್ಥನೆಯಲ್ಲಿ ಸ್ಪೀಕರ್ ಖಾದರ್ ಭಾಗಿ
ಮಸೀದಿ ಎದುರು ಮಹಿಳೆ-ಭದ್ರತಾ ಅಧಿಕಾರಿ ಪರಸ್ಪರ ಕಪಾಳಮೋಕ್ಷ
ಮಸೀದಿ ಎದುರು ಮಹಿಳೆ-ಭದ್ರತಾ ಅಧಿಕಾರಿ ಪರಸ್ಪರ ಕಪಾಳಮೋಕ್ಷ
ಇಂದು ದೇಶಾದ್ಯಂತ ರಂಜಾನ್ ಹಬ್ಬ ಆಚರಣೆ: 30 ದಿನಗಳ ಉಪವಾಸ ಅಂತ್ಯ
ಇಂದು ದೇಶಾದ್ಯಂತ ರಂಜಾನ್ ಹಬ್ಬ ಆಚರಣೆ: 30 ದಿನಗಳ ಉಪವಾಸ ಅಂತ್ಯ
ಯಾರಾದ್ರೂ ಸತ್ರಾ? ಪಾದಚಾರಿಗಳಿಗೆ ಗುದ್ದಿದ್ಮೇಲೆ ಕಾರು ಚಾಲಕ ಕೇಳಿದ್ದಿದು
ಯಾರಾದ್ರೂ ಸತ್ರಾ? ಪಾದಚಾರಿಗಳಿಗೆ ಗುದ್ದಿದ್ಮೇಲೆ ಕಾರು ಚಾಲಕ ಕೇಳಿದ್ದಿದು
ನಂಜನಗೂಡು ನಂಜುಂಡೇಶ್ವರ ದೇವಾಲಯದಲ್ಲಿ ಓಕುಳಿ ಉತ್ಸವ ಸಂಭ್ರಮ
ನಂಜನಗೂಡು ನಂಜುಂಡೇಶ್ವರ ದೇವಾಲಯದಲ್ಲಿ ಓಕುಳಿ ಉತ್ಸವ ಸಂಭ್ರಮ
Devotional: ಮಹಿಳೆಯರಿಗೆ ಕೈ ಕೆರೆತವಾದ್ರೆ ಏನೆಲ್ಲಾ ಆಗುತ್ತೆ ಗೊತ್ತಾ?
Devotional: ಮಹಿಳೆಯರಿಗೆ ಕೈ ಕೆರೆತವಾದ್ರೆ ಏನೆಲ್ಲಾ ಆಗುತ್ತೆ ಗೊತ್ತಾ?
Daily Horoscope: ಹಣಕಾಸಿನ ವಿಷಯದಲ್ಲಿ ತಾಳ್ಮೆವಹಿಸುವುದು ಒಳ್ಳೆಯದು
Daily Horoscope: ಹಣಕಾಸಿನ ವಿಷಯದಲ್ಲಿ ತಾಳ್ಮೆವಹಿಸುವುದು ಒಳ್ಳೆಯದು
ಉಪೇಂದ್ರ ಊಟ ಮಾಡೋದು ಬಹಳ ವಿಚಿತ್ರ; ಅಚ್ಚರಿಯ ವಿಷಯ ಹೇಳಿದ ಶಿವಣ್ಣ
ಉಪೇಂದ್ರ ಊಟ ಮಾಡೋದು ಬಹಳ ವಿಚಿತ್ರ; ಅಚ್ಚರಿಯ ವಿಷಯ ಹೇಳಿದ ಶಿವಣ್ಣ