ಪ್ಲಾಂಕಥಾನ್ ಮೂಲಕ ಇಸ್ರೋದ ಅಪೂರ್ವ ಸಾಧನೆಗಳ ಅಭಿನಂದಿಸುತ್ತಲೇ ಗಿನ್ನಿಸ್ ರೆಕಾರ್ಡ್ಸ್ ಮಾಡಿದ ಬಜಾಜ್ ಅಲಿಯಾನ್ಸ್ ಇನ್ಶೂರೆನ್ಸ್
Plank For Aces: ಪ್ಲಾಂಕ್ ಮಾಡುತ್ತಿರುವ ಅತಿದೊಡ್ಡ ಆನ್ಲೈನ್ ವೀಡಿಯೊ ಆಲ್ಬಮ್ ಅನ್ನು ರಚಿಸುವ ಮೂಲಕ ಸಾವಿರಾರು ಜನರು ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆಗೆ (ಇಸ್ರೋ) ಗೌರವ ಸಲ್ಲಿಸಿದರು. ಇಸ್ರೋ ತಂಡ ಮತ್ತು ನಟಿ ತಾಪ್ಸಿ ಪನ್ನು ಅವರ ತಂಡವು ಪ್ಲಾಂಕಥಾನ್ನ 4ನೇ ಆವೃತ್ತಿಯ ನೇತೃತ್ವ ವಹಿಸಿದ್ದು, ಈ ಆವೃತ್ತಿಯು ಹೊಸ ಗಿನ್ನಿಸ್ ವರ್ಲ್ಡ್ ರೆಕಾರ್ಡ್ ಮಾಡಿದೆ.
ಬೆಂಗಳೂರು, ಫೆಬ್ರವರಿ 12: ಭಾರತದ ಪ್ರಮುಖ ಖಾಸಗಿ ಜೀವ ವಿಮಾ ಸಂಸ್ಥೆಗಳಲ್ಲಿ ಒಂದಾದ ಬಜಾಜ್ ಅಲಿಯಾನ್ಸ್ ಲೈಫ್, ನಿನ್ನೆ ಭಾನುವಾರ, ಚಂದ್ರಯಾನ ಮತ್ತು ಸೌರ ಮಿಷನ್, ಆದಿತ್ಯ ಎಲ್1 ಮೂಲಕ ಗಮನಾರ್ಹ ಸಾಧನೆ ಮಾಡಿದ ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆಯ (ಇಸ್ರೋ -ISRO) ಯಶಸ್ಸನ್ನು ಆಚರಿಸಲು ಬೆಂಗಳೂರಿನ ಶ್ರೀ ಕಂಠೀರವ ಹೊರಾಂಗಣ ಕ್ರೀಡಾಂಗಣದಲ್ಲಿ #ಪ್ಲಾಂಕಥಾನ್ (Plankthon)ನ ನಾಲ್ಕನೇ ಆವೃತ್ತಿಯನ್ನು ಆಯೋಜಿಸಿತ್ತು. ಈ ಪ್ಲಾಂಕಥಾನ್ ಕಾರ್ಯಕ್ರಮವು ಕಂಪನಿಯ ಅತ್ಯಂತ ಜನಪ್ರಿಯ #PlankForAces ಅಭಿಯಾನದ ಆಚರಣೆಯಾಗಿದೆ. ಈ ಮೂಲಕ ಪ್ಲಾಂಕ್ ಮಾಡುವ ವೀಡಿಯೊವನ್ನು ಅಪ್ಲೋಡ್ ಮಾಡಲು ಆಹ್ವಾನಿಸಲಾಗಿದ್ದು, ಆ ಮೂಲಕ ಇಸ್ರೋದಲ್ಲಿನ ಅದ್ಭುತ ವಿಜ್ಞಾನಿಗಳಿಗೆ ಧನ್ಯವಾದ ಹೇಳಲು ಭಾರತೀಯರನ್ನು ಒಟ್ಟುಗೂಡಿಸಲು ಯೋಜಿಸಲಾಗಿತ್ತು (Guinness World Record).
ಬೆಂಗಳೂರಿನಲ್ಲಿ ನಡೆದ ಪ್ಲಾಂಕಥಾನ್ ಕಾರ್ಯಕ್ರಮದಲ್ಲಿ ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆಯ(ಇಸ್ರೋ) ಕೆಪಾಸಿಟಿ ಬಿಲ್ಡಿಂಗ್ ಆಂಡ್ ಪಬ್ಲಿಕ್ ಔಟ್ ರೀಟ್ ವಿಭಾಗದ ನಿರ್ದೇಶಕರಾದ ಎನ್ ಸುಧೀರ್ ಕುಮಾರ್ ಅವರ ನೇತೃತ್ವದ ಇಸ್ರೋ ವಿಜ್ಞಾನಿಗಳ ತಂಡ ಭಾಗವಹಿಸಿತ್ತು. ಮಿಷನ್ ಮಂಗಲ್ ಸೇರಿದಂತೆ ಹಲವಾರು ಜನಪ್ರಿಯ ಹಿಂದಿ ಚಲನಚಿತ್ರಗಳಲ್ಲಿ ನಟಿಸಿರುವ, ಇತ್ತೀಚೆಗಷ್ಟೇ ಡಂಕಿ ಸಿನಿಮಾ ಮೂಲಕ ಖ್ಯಾತಿ ಗಳಿಸಿದ ಭಾರತೀಯ ಚಿತ್ರರಂಗದ ಜನಪ್ರಿಯ ನಟಿ ತಾಪ್ಸಿ ಪನ್ನು ಕಾರ್ಯಕ್ರಮದ ನೇತೃತ್ವ ವಹಿಸಿ ಆಕರ್ಷಣೆಯ ಬಿಂದುವಾಗಿದ್ದರು. ಬಜಾಜ್ ಅಲಿಯಾನ್ಸ್ ಲೈಫ್ ಇನ್ಶೂರೆನ್ಸ್ ಸಿಇಓ, ಎಂಡಿ ತರುಣ್ ಚುಗ್ ಮತ್ತು ಬಜಾಜ್ ಅಲಿಯಾನ್ಸ್ ಲೈಫ್ ಇನ್ಶೂರೆನ್ಸ್ ನ ಮುಖ್ಯ ಮಾರುಕಟ್ಟೆ ಅಧಿಕಾರಿ ಚಂದ್ರಮೋಹನ್ ಉಪಸ್ಥಿತರಿದ್ದರು. ಗಿನ್ನಿಸ್ ವರ್ಲ್ಡ್ ರೆಕಾರ್ಡ್ಸ್ ಅಧಿಕಾರಿಗಳು ಬಜಾಜ್ ಅಲಿಯಾನ್ಸ್ ಲೈಫ್ ಇನ್ಶೂರೆನ್ಸ್ ಅನ್ನು #PLANKFORACES ಅಭಿಯಾನದ ಪ್ಲಾಂಕ್ ಮಾಡುವ ಅತಿದೊಡ್ಡ ಆನ್ಲೈನ್ ವೀಡಿಯೊ ಆಲ್ಬಮ್ಗಾಗಿ ಹೊಸ ಗಿನ್ನಿಸ್ ವರ್ಲ್ಡ್ ರೆಕಾರ್ಡ್ಸ್ ಟೈಟಲ್ ಹೋಲ್ಡರ್ ಎಂದು ಘೋಷಿಸಿದರು. #PlankforAces ಅಭಿಯಾನದಲ್ಲಿ ಎಲ್ಲಾ ವಿಭಾಗಗಳಿಂದ 5,194 ವೀಡಿಯೊಗಳನ್ನು ಅಪ್ಲೋಡ್ ಮಾಡಲಾಗಿತ್ತು.
ಬಜಾಜ್ ಅಲಿಯಾನ್ಸ್ ಲೈಫ್ ಇನ್ಶೂರೆನ್ನ ಪ್ಲಾಂಕಾಥಾನ್ 2024ರಲ್ಲಿ ಹಾಜರಿದ್ದವರನ್ನು ಉದ್ದೇಶಿಸಿ ಮಾತನಾಡಿದ ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆಯ ಕೆಪಾಸಿಟಿ ಬಿಲ್ಡಿಂಗ್ ಆಂಡ್ ಪಬ್ಲಿಕ್ ಔಟ್ ರೀಚ್ ವಿಭಾಗದ ನಿರ್ದೇಶಕರಾದ ಎನ್ ಸುಧೀರ್ ಕುಮಾರ್, “ಇದು ನಿಜಕ್ಕೂ ಇಸ್ರೋದ ಚಂದ್ರಯಾನ ಮತ್ತು ಸೌರ ಮಿಷನ್, ಆದಿತ್ಯ ಎಲ್1 ರ ಸಾಧನೆಗಳಿಗೆ ಮೀಸಲಾದ ಅಸಾಮಾನ್ಯ ಕಾರ್ಯಕ್ರಮವಾಗಿದೆ. ಆ ಯೋಜನೆಗಳು ದೇಶಕ್ಕಾಗಿ ಪ್ರತಿಯೊಬ್ಬರನ್ನು ಪ್ರಾರ್ಥಿಸುವಂತೆ ಮತ್ತು ಒಂದಾಗುವಂತೆ ಮಾಡಿದಂತೆ, ಆ ಸಾಮೂಹಿಕ ಭಾರತೀಯ ಮನೋಭಾವವ ಇಲ್ಲಿಯೂ ಪ್ರತಿಬಿಂಬಿಸಿದ್ದಕ್ಕಾಗಿ ನಾನು ಸಂತೋಷಪಡುತ್ತೇನೆ. #PlankForAces ತಮ್ಮ ದೇಶದ ಬಗ್ಗೆ ಗೌರವ ಉಂಟು ಮಾಡುವ ಮೂಲಕ ಹಲವಾರು ಸಾವಿರ ಜನರನ್ನು ಒಟ್ಟುಗೂಡಿಸಿದೆ, ಜೊತೆಗೆ ಫಿಟ್ ಮತ್ತು ಆರೋಗ್ಯಕರವಾಗಿರಲು ಪ್ರೇರಣೆ ಒದಗಿಸಿದೆ. ಭಾಗವಹಿಸಿದ ಎಲ್ಲರಿಗೂ ಅವರ ಪ್ರಯತ್ನಗಳಿಗಾಗಿ ನಾವು ಪ್ರಶಂಸಿಸುತ್ತೇವೆ ಮತ್ತು ಧನ್ಯವಾದ ಸಲ್ಲಿಸುತ್ತೇವೆ. ಬಾಹ್ಯಾಕಾಶ ಸಂಶೋಧನೆಯ ಹೊಸ ಗಡಿಗಳ ಮೇಲೆ ನಾವು ನಮ್ಮ ಗಮನವನ್ನು ಕೇಂದ್ರೀಕರಿಸಿದಂತೆ ನಿಮ್ಮ ಶುಭಾಶಯಗಳು ಭಾರತವನ್ನು ಹೆಮ್ಮೆಪಡುವಂತೆ ಮಾಡುವ ನಮ್ಮ ಪ್ರಯತ್ನವನ್ನು ಮತ್ತಷ್ಟು ಉತ್ತೇಜಿಸುತ್ತದೆ”ಎಂದು ಹೇಳಿದರು.
#PlankForAces ನ ಯಶಸ್ಸಿನ ಕುರಿತು ಮತ್ತು ಕಂಪನಿ ಹೊಸ ವಿಶ್ವದಾಖಲೆಯನ್ನು ಸ್ಥಾಪಿಸಿದ ಕುರಿತು ಪ್ರತಿಕ್ರಿಯಿಸಿದ ಬಜಾಜ್ ಅಲಿಯಾನ್ಸ್ ಲೈಫ್ ಇನ್ಶೂರೆನ್ಸ್ನ ಮುಖ್ಯ ಮಾರುಕಟ್ಟೆ ಅಧಿಕಾರಿ ಶ್ರೀ ಚಂದ್ರಮೋಹನ್ ಮೆಹ್ರಾ, “ಬಜಾಜ್ ಅಲಿಯಾನ್ಸ್ ಲೈಫ್ ಪ್ಲಾಂಕಥಾನ್ ಭಾರತದ ಪ್ರಮುಖ ಫಿಟ್ನೆಸ್ ಉಪಕ್ರಮವಾಗಿ ವಿಕಸನಗೊಂಡಿದ್ದು, ಅದು ಭಾರತದ ಭಾವವನ್ನು ಸೆರೆಹಿಡಿಯುತ್ತದೆ. ನಮ್ಮೆಲ್ಲರಿಗೂ ಅಪಾರವಾದ ಹೆಮ್ಮೆಯನ್ನುಂಟುಮಾಡುವ ಇಸ್ರೋದ ಅತ್ಯುತ್ತಮ ಸಾಧನೆಗಳ ಬಗ್ಗೆ ತಮ್ಮ ಮೆಚ್ಚುಗೆಯನ್ನು ವ್ಯಕ್ತಪಡಿಸಲು ಆಫ್ಲೈನ್ ಮತ್ತು ಆನ್ಲೈನ್ನಲ್ಲಿ ಭಾಗವಹಿಸಿದ ಹತ್ತಾರು ಸಾವಿರ ಮಂದಿಗೆ ನಾವು ಕೃತಜ್ಞರಾಗಿರುತ್ತೇವೆ” ಎಂದು ಹೇಳಿದರು.
ಬಾಲಿವುಡ್ನ ಮಿಷನ್ ಮಂಗಲ್ ಚಿತ್ರದ ಪ್ರಮುಖ ನಟಿ ಮತ್ತು ಭಾರತದ ಪ್ರಮುಖ ಸಿನಿಮಾ ನಟಿ ತಾಪ್ಸಿ ಪನ್ನು, “#PlankForAces ಆಂದೋಲನವು ನನಗೆ ವಿಶೇಷವಾಗಿತ್ತು ಮತ್ತು ಅಷ್ಟೇ ಸ್ಪೂರ್ತಿದಾಯಕವಾಗಿತ್ತು. ಇದು ಫಿಟ್ನೆಸ್ನ ಬಗ್ಗೆ ವಿಶಿಷ್ಟ ಅಭಿಯಾನವಾಗಿದ್ದು, ಅನೇಕ ಜನರನ್ನು ಒಟ್ಟುಗೂಡಿಸಿತ್ತು. ಜೊತೆಗೆ ಇದು ಇಸ್ರೋದ ನಮ್ಮ ವಿಜ್ಞಾನಿಗಳಿಗೆ ಧನ್ಯವಾದ ಸಲ್ಲಿಸುವ ಅವಕಾಶವಾಗಿತ್ತು! ನಾನು ಬಜಾಜ್ ಅಲಿಯಾನ್ಸ್ ಲೈಫ್ ಇನ್ಶೂರೆನ್ಸ್ ಅನ್ನು ಅವರ ನಾಲ್ಕನೇ ಆವೃತ್ತಿಯ ಪ್ಲಾಂಕಥಾನ್ ಮತ್ತು ಅವರ ಹೊಸ ಗಿನ್ನೆಸ್ ವಿಶ್ವ ದಾಖಲೆಗಾಗಿ ಅಭಿನಂದಿಸುತ್ತೇನೆ. ಇಂದು ಪ್ಲ್ಯಾಂಕ್ ಮಾಡಿದ ಅಥವಾ #PlankForAces ಗಾಗಿ ತಮ್ಮ ವೀಡಿಯೊಗಳನ್ನು ಅಪ್ಲೋಡ್ ಮಾಡಿದ ಪ್ರತಿಯೊಬ್ಬರೂ ತಮ್ಮ ಆರೋಗ್ಯ ಮತ್ತು ಫಿಟ್ನೆಸ್ ಆಂದೋಲನವನ್ನು ಮುಂದುವರಿಸುತ್ತಾರೆ ಮತ್ತು ಇನ್ನೂ ಅನೇಕರು ಈ ಆರೋಗ್ಯಕರ ಸಮುದಾಯದ ಭಾಗವಾಗುತ್ತಾರೆ ಎಂದು ನಾನು ಭಾವಿಸುತ್ತೇನೆ” ಎಂದು ಹೇಳಿದರು.
ತಾಪ್ಸಿ ಪನ್ನು ಅವರು ಬಜಾಜ್ ಅಲಿಯಾನ್ಸ್ ಲೈಫ್ ಇನ್ಶೂರೆನ್ಸ್ನ #PlankForAces ನ ನೇತೃತ್ವ ವಹಿಸಿದ್ದು ಜನಪ್ರಿಯ ಭಾರತೀಯ ಚಲನಚಿತ್ರ ಮಿಷನ್ ಮಂಗಲ್ನೊಂದಿಗಿನ ಅವರ ಭಾಗವಹಿಸುವಿಕೆಗಾಗಿ ಮಾತ್ರವಲ್ಲ, ಜೊತೆಗೆ ನಟಿ ತಾನು ನಟಿಸಿದ ಎಲ್ಲಾ ಪಾತ್ರಗಳಿಗೆ ಸಲ್ಲಿಸಿದ ನ್ಯಾಯಕ್ಕಾಗಿ ಕೂಡ. ಸಮಾಜಕ್ಕೆ ಬಲವಾದ ಸಂದೇಶ ನೀಡುವ ಫಿಟ್ನೆಸ್ ಮತ್ತು ಕ್ರೀಡೆಯ ಕಥಾಹಂದರ ಹೊಂದಿರುವ ಹಲವಾರು ಅಸಾಮಾನ್ಯ ಚಲನಚಿತ್ರಗಳಲ್ಲಿ ಅವರು ನಾಯಕಿಯಾಗಿ ನಟಿಸಿದ್ದಾರೆ. ಈ ಗುಣಲಕ್ಷಣಗಳು ಬಜಾಜ್ ಅಲಿಯಾನ್ಸ್ ಲೈಫ್ ಇನ್ಶೂರೆನ್ಸ್ನ ಪ್ರಮುಖ ಈವೆಂಟ್ ಪ್ಲಾಂಕಥಾನ್ನ ನಾಲ್ಕನೇ ಆವೃತ್ತಿಯನ್ನು ಮುನ್ನಡೆಸುವುದಕ್ಕೆ ಆಯ್ಕೆ ಮಾಡಲು ಪ್ರಮುಖ ಆಯ್ಕೆಯಾಗಿದೆ. ಬಜಾಜ್ ಅಲಿಯಾನ್ಸ್ ಲೈಫ್ ಇನ್ಶೂರೆನ್ಸ್ ನಿಂದ ಪ್ಲಾಂಕಥಾನ್
ಭಾರತದ ಪ್ರಮುಖ ಖಾಸಗಿ ಲೈಫ್ ಇನ್ಶೂರೆನ್ಸ್ ಕಂಪನಿಗಳಲ್ಲಿ ಒಂದಾದ ಬಜಾಜ್ ಅಲಿಯಾನ್ಸ್ ಲೈಫ್ ಇನ್ಶೂರೆನ್ಸ್, ದೇಶದ ನಾಗರಿಕರಲ್ಲಿ ಆರೋಗ್ಯ ಮತ್ತು ಫಿಟ್ನೆಸ್ ಅನ್ನು ಉತ್ತೇಜಿಸಲು 2018ರಲ್ಲಿ ತನ್ನ ವಾರ್ಷಿಕ ಪ್ಲಾಂಕಥಾನ್ ಆಂದೋಲನವನ್ನು ಪ್ರಾರಂಭಿಸಿತು. ಅಬಿಯಾನದಲ್ಲಿ ಇದು ಪ್ಲಾಂಕ್ ಮಾಡಲು ಸಾವಿರಾರು ಜನರನ್ನು ಒಟ್ಟುಗೂಡಿಸುತ್ತದೆ. ಪ್ಲಾಂಕ್ ವ್ಯಕ್ತಿಯ ಭಂಗಿ ಮತ್ತು ಹೊಟ್ಟೆ ಭಾಗವನ್ನು ಬಲಪಡಿಸಲು ಸಹಾಯ ಮಾಡುವ ಸುಲಭವಾದ ವ್ಯಾಯಾಮಗಳಲ್ಲಿ ಒಂದಾಗಿದೆ. ಇಂದು, ಬಜಾಜ್ ಅಲಿಯಾನ್ಸ್ ಲೈಫ್ ಇನ್ಶೂರೆನ್ಸ್ ತನ್ನ ಬಹು ನಿರೀಕ್ಷಿತ ಪ್ಲಾಂಕಥಾನ್ನ ನಾಲ್ಕನೇ ಆವೃತ್ತಿಯನ್ನು #PlankForAcesನ ಸಂಭ್ರಮದೊಂದಿಗೆ ಆಚರಿಸಿತು. ಬಜಾಜ್ ಅಲಿಯಾನ್ಸ್ ಲೈಫ್ ಪ್ಲಾಂಕಥಾನ್ ವೈಯಕ್ತಿಕ ಆರೋಗ್ಯ ಮತ್ತು ಫಿಟ್ನೆಸ್ ಪ್ರಯೋಜನಗಳನ್ನು ಮೀರಿ 2018ರಿಂದ ಸಾಮಾಜಿಕ ಕಾರಣಗಳಿಗೆ ಕೊಡುಗೆ ನೀಡುತ್ತಿದೆ:
• ಮೊದಲ ಆವೃತ್ತಿಯಾದ #36SecPlankChallenge, ಹೃದಯಾ ಫೌಂಡೇಶನ್ ಸಹಯೋಗದೊಂದಿಗೆ ಆರ್ಥಿಕವಾಗಿ ಹಿಂದುಳಿದ ಮಕ್ಕಳಲ್ಲಿ ಹೃದಯದ ಅಸ್ವಸ್ಥತೆಗಳನ್ನು ಗುಣಪಡಿಸಲು ಸಂಬಂಧಿಸಿತ್ತು ಮತ್ತು 2,353 ಜನರು ಯಶಸ್ವಿಯಾಗಿ ಪ್ಲ್ಯಾಂಕ್ ಮಾಡಿ ಗಿನ್ನೆಸ್ ವರ್ಲ್ಡ್ ರೆಕಾರ್ಡ್ಸ್TM ದಾಖಲಿಸಿದರು.
• ಎರಡನೇ ಆವೃತ್ತಿಯಾದ, #PlankForIndia, ಓಜಿಕ್ಯೂ ಸಹಯೋಗದೊಂದಿಗೆ ಯುವ ಭಾರತೀಯ ಒಲಿಂಪಿಯನ್ಗಳನ್ನು ಬೆಂಬಲಿಸಿತ್ತು ಮತ್ತು ಮುಂಬೈನಲ್ಲಿ 2,471 ಜನರು ಏಕಕಾಲದಲ್ಲಿ 60 ಸೆಕೆಂಡುಗಳ ಕಾಲ ಪ್ಲಾಂಕ್ ಮಾಡುವುದರೊಂದಿಗೆ ಹೊಸ ವಿಶ್ವ ದಾಖಲೆಯನ್ನು ಸ್ಥಾಪಿಸಲಾಯಿತು.
• ಮೂರನೇ ಆವೃತ್ತಿಯಾದ #PlankToThank ಭಾರತೀಯ ಸಶಸ್ತ್ರ ಪಡೆಗಳಿಗೆ ಕೃತಜ್ಞತೆಯನ್ನು ವ್ಯಕ್ತಪಡಿಸುವ ಮತ್ತು ಭಾರತದ 75ನೇ ಸ್ವಾತಂತ್ರ್ಯ ದಿನಾಚರಣೆಯನ್ನು ಆಚರಿಸುವ ಮತ್ತು ನಿವೃತ್ತ ಯೋಧರಿಗೆ ಜೀವನೋಪಾಯವನ್ನು ಒದಗಿಸುವ ಗುರಿಯನ್ನು ಹೊಂದಿತ್ತು. ನವದೆಹಲಿಯಲ್ಲಿ 4,454 ಜನರು ಏಕಕಾಲದಲ್ಲಿ 60 ಸೆಕೆಂಡುಗಳ ಕಾಲ ಪ್ಲಾಂಕ್ ಮಾಡುವ ಮೂಲಕ ಕಂಪನಿಯು ತನ್ನದೇ ಆದ ದಾಖಲೆಯನ್ನು ಮುರಿದಿತ್ತು.