Sign In

By signing in or creating an account, you agree with Associated Broadcasting Company's Terms & Conditions and Privacy Policy.

ಟಿಕೆಟ್ ರಹಿತ ಪ್ರಯಾಣಿಕರಿಗೆ ಬಿಸಿ ಮುಟ್ಟಿಸಿದ ಕೆಎಸ್‌ಆರ್‌ಟಿಸಿ: 5,71,286 ರೂ. ದಂಡ ವಸೂಲಿ

ಕೆಎಸ್​ಆರ್​ಟಿಸಿಯ ತನಿಖಾ ತಂಡಗಳಿಂದ ತಪಾಸಣಾ ಕಾರ್ಯವನ್ನು ಚುರುಕುಗೊಳಿಸಿ ನಿಗಮದ ವ್ಯಾಪ್ತಿಯಲ್ಲಿ ಸಂಚರಿಸುವ 44521 ವಾಹನಗಳನ್ನು ತನಿಖೆಗೊಳಪಡಿಸಿ 3391 ಪ್ರಕರಣಗಳನ್ನು ಪತ್ತೆಹಚ್ಚಿದ್ದು, 3712 ಟಿಕೆಟ್​ ರಹಿತ ಪ್ರಯಾಣಿಕರಿಂದ 5.71.286 ರೂ. ದಂಡದ ರೂಪದಲ್ಲಿ ವಸೂಲಿ ಮಾಡಿದ್ದಾರೆ. ತಪ್ಪಿತಸ್ಥರ ವಿರುದ್ಧ ಇಲಾಖೆ ಸೂಕ್ತ ಕ್ರಮವನ್ನು ಜರುಗಿಸಲಾಗಿದೆ.

ಟಿಕೆಟ್ ರಹಿತ ಪ್ರಯಾಣಿಕರಿಗೆ ಬಿಸಿ ಮುಟ್ಟಿಸಿದ ಕೆಎಸ್‌ಆರ್‌ಟಿಸಿ: 5,71,286 ರೂ. ದಂಡ ವಸೂಲಿ
ಕೆಎಸ್‌ಆರ್‌ಟಿಸಿ ಬಸ್​ (ಸಂಗ್ರಹ ಚಿತ್ರ)
Follow us
Kiran Surya
| Updated By: ಗಂಗಾಧರ​ ಬ. ಸಾಬೋಜಿ

Updated on: Feb 12, 2024 | 6:37 PM

ಬೆಂಗಳೂರು, ಫೆಬ್ರವರಿ 12: ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ (KSRTC) ಟಿಕೆಟ್ ರಹಿತ ಪ್ರಯಾಣಿಕರಿಗೆ ದಂಡದ‌ ಬಿಸಿ ಮುಟ್ಟಿಸಿದೆ. ಪರಿಣಾಮ ಜನವರಿಯಲ್ಲಿ 3712 ಪ್ರಯಾಣಿಕರಿಂದ ₹5,71,286 ರೂ. ದಂಡ ವಸೂಲಿ ಮಡಲಾಗಿದೆ. ಈ ಕುರಿತಾಗಿ ಮಾಧ್ಯಮ ಪ್ರಕಟಣೆ ಹೊರಡಿಸಿರುವ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ ತನ್ನ ತನಿಖಾ ತಂಡಗಳಿಂದ ತಪಾಸಣಾ ಕಾರ್ಯವನ್ನು ಚುರುಕುಗೊಳಿಸಿ ನಿಗಮದ ವ್ಯಾಪ್ತಿಯಲ್ಲಿ ಸಂಚರಿಸುವ 44521 ವಾಹನಗಳನ್ನು ತನಿಖೆಗೊಳಪಡಿಸಿ 3391 ಪ್ರಕರಣಗಳನ್ನು ಪತ್ತೆಹಚ್ಚಿದ್ದು, 3712 ಟಿಕೆಟ್​ ರಹಿತ ಪ್ರಯಾಣಿಕರಿಂದ 5.71.286 ರೂ. ದಂಡದ ರೂಪದಲ್ಲಿ ವಸೂಲಿ ಮಾಡಿದ್ದಾರೆ. ನಿಗಮದ ಆದಾಯದಲ್ಲಿ ಸೋರಿಕೆ ಆಗುತ್ತಿದ್ದ 81,583 ರೂ ಗಳನ್ನು ತನಿಖಾಧಿಕಾರಿಗಳು ಪತ್ತೆಹಚ್ಚಿದ್ದಾರೆ. ಹಾಗೂ ತಪ್ಪಿತಸ್ಥರ ವಿರುದ್ಧ ಇಲಾಖೆ ಸೂಕ್ತ ಕ್ರಮವನ್ನು ಜರುಗಿಸಲಾಗಿದೆ. ಆದ್ದರಿಂದ ಸಾರ್ವಜನಿಕ ಪ್ರಯಾಣಿಕರು, ಬಸ್ಸಿನಲ್ಲಿ ಪ್ರಯಾಣಿಸುವಾಗ ಸರಿಯಾದ ಟಿಕೆಟ್​, ಪಾಸ್ ಪಡೆದು ಪ್ರಯಾಣ ಮಾಡುವಂತೆ, ನಿಗಮವು ಪ್ರಯಾಣಿಕರಲ್ಲಿ ಕೋರಿದೆ.

ಕೆಎಸ್​ಆರ್​ಟಿಸಿಗೆ ಮತ್ತೆ ಪ್ರತಿಷ್ಠಿತ SKOCH ಪ್ರಶಸ್ತಿ

ಇತ್ತೀಚೆಗೆ ಕೆಎಸ್​ಆರ್​ಟಿಸಿಗೆ ಮತ್ತೆ ಪ್ರತಿಷ್ಠಿತ SKOCH ಪ್ರಶಸ್ತಿ ಒಲಿದುಬಂದಿತ್ತು. ಕಾರ್ಮಿಕ ಕಲ್ಯಾಣ, ಶಕ್ತಿ ಯೋಜನೆಗಳಿಗೆ ಸ್ಕಾಚ್ ರಾಷ್ಟ್ರೀಯ ಪ್ರಶಸ್ತಿ ಲಭಿಸಿದೆ. ಇತ್ತೀಚೆಗಷ್ಟೇ, ಇತಿಹಾಸದಲ್ಲಿಯೇ ಪ್ರಪ್ರಥಮವಾಗಿ ತನ್ನ ಸಿಬ್ಬಂದಿಗಳಿಗಾಗಿ 1 ಕೋಟಿ ಸಾರಿಗೆ ಸುರಕ್ಷಾ ವಿಮಾ ಯೋಜನೆ ಜಾರಿ ಮಾಡಿದ ಕೆಎಸ್​ಆರ್​​ಟಿಸಿಗೆ ಪ್ರತಿಷ್ಠಿತ ಸ್ಕಾಚ್ ರಾಷ್ಟ್ರೀಯ ಪ್ರಶಸ್ತಿ ಲಭಿಸಿದ ಬೆನ್ನಲ್ಲೇ ಈ ಪ್ರಶಸ್ತಿ ಒಲಿದುಬಂದಿತ್ತು.

ಇದನ್ನೂ ಓದಿ: ಶಕ್ತಿ ಯೋಜನೆ ಕೆಲವೇ ತಿಂಗಳು ಅಷ್ಟೇ -ಮಹಿಳೆಯರಿಗೆ ಉಚಿತ ಬಸ್​ ಸೇವೆ ಕೊಡುವುದು ಸರ್ಕಾರಕ್ಕೆ ಸವಾಲಿನದ್ದಾಗಿದೆ

ಕೆಎಸ್‌ಆರ್‌ಟಿಸಿಗೆ ಇತ್ತೀಚೆಗೆ ಹೊಸ ಬಸ್‌ಗಳು ಸೇರ್ಪಡೆಗೊಂಡಿವೆ. ಹಲವು ವೈಶಿಷ್ಟ್ಯ ಹೊಂದಿರುವ ಅಶ್ವಮೇಧ ಹೆಸರಿನ 100 ಹೊಸ ಬಸ್‌ಗಳು ರಸ್ತೆಗೆ ಇಳಿದಿವೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಈ ಬಸ್‌ಗಳಿಗೆ ಇತ್ತೀಚೆಗೆ ಹಸಿರು ನಿಶಾನೆ ತೋರಿದ್ದರು. ಮಹಿಳೆಯರು ಈ ಬಸ್ಸಿನಲ್ಲಿ ಉಚಿತವಾಗಿ ಪ್ರಯಾಣ ಬೆಳಸಬಹುದಾಗಿದೆ. ಮೊದಲ ಹಂತದಲ್ಲಿ ನೂರು ಹೊಸ ಅಶ್ವಮೇಧ ಕ್ಲಾಸಿಕ್ ಬಸ್‌ಗಳಿಗೆ ಚಾಲನೆ ಸಿಕ್ಕಿದೆ.

ಉದ್ಘಾಟನೆ ಬಳಿಕ ಸಿಎಂ ಬಸ್‌ ಒಳಗೆ ತೆರಳಿ ವೀಕ್ಷಣೆ ಮಾಡಿದ್ದರು. ಈ ಸಂದರ್ಭದಲ್ಲಿ 5800 ಬಸ್​ಗಳು ಸೇರ್ಪಡೆ ಮಾಡಿದ್ದೇವೆ. ರಾಜ್ಯದ ಜನರಿಗೆ ಸುರಕ್ಷಿತ ಪ್ರಯಾಣಕ್ಕೆ ಬೇಕಾಗದ ಎಲ್ಲಾ ಸೌಲಭ್ಯ ಮಾಡಿಕೊಡುತ್ತೇವೆ ಎಂದು ಹೇಳಿದ್ದರು.

ಇದನ್ನೂ ಓದಿ: ಬೆಂಗಳೂರು-ಮೈಸೂರು ಹೆದ್ದಾರಿಗೆ ಬರಲಿದೆ ಜಿಪಿಎಸ್ ಆಧಾರಿತ ಟೋಲಿಂಗ್ ವ್ಯವಸ್ಥೆ: ಸ್ವಯಂಚಾಲಿತ ಶುಲ್ಕ ಪಾವತಿ

ಈ ಎಕ್ಸ್‌ಪ್ರೆಸ್‌ ಬಸ್ಸಿನಲ್ಲಿ ಮಹಿಳೆಯರು ಉಚಿತವಾಗಿ ಪ್ರಯಾಣ ಮಾಡಬಹುದಾಗಿದೆ. ಉದ್ಘಾಟನೆಯಾದ ಅಶ್ವಮೇಧ ಕ್ಲಾಸಿಕ್‌ ಬಸ್‌ ಹಳೇ ಕೆಂಪು ಬಸ್‌ಗಿಂತಲೂ ವೈಶಿಷ್ಟ್ಯತೆಯಿಂದ ಕೂಡಿದೆ.

ಅಶ್ವಮೇಧ ಕ್ಲಾಸಿಕ್‌ ಬಸ್‌ ವಿಶೇಪತೆ

52 ಬಕೆಟ್ ಸೀಟು, ಬಸ್ಸು ಒಳಗೆ ಮತ್ತು ಹೊರ ಭಾಗದಲ್ಲಿ ಎಲ್ಇಡಿ ಮಾರ್ಗಫಲಕ, ಮಹಿಳೆಯರ ಸುರಕ್ಷತೆಗಾಗಿ 12 ಪ್ಯಾನಿಕ್ ಬಟನ್, ಜಿಪಿಎಸ್, ಎರಡು ರೇರ್ ಕ್ಯಾಮೆರಾ ಅಳವಡಿಸಲಾಗಿದೆ.ಮೊಬೈಲ್ ಫೋನ್ ಚಾರ್ಜ್ ಹಾಕಿಕೊಳ್ಳಲು ಆರು ಚಾರ್ಜಿಂಗ್ ಪಾಯಿಂಟ್,ಲಗೇಜ್ ಇಡಲು ವಿಸ್ತಾರವಾದ ಜಾಗ ಕಲ್ಪಿಸಲಾಗಿದೆ.

ಮತ್ತಷ್ಟು ರಾಜ್ಯದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.