ರಾಮನಗರ ಜಿಲ್ಲೆಗೆ ಹೊಸ 100 ಅಶ್ವಮೇಧ ಬಸ್ ಬಿಡುಗಡೆಯಾಗಿರುವ ಘೋಷಣೆ ಮಾಡಿದ ಡಿಕೆ ಶಿವಕುಮಾರ್

ರಾಮನಗರ ಜಿಲ್ಲೆಗೆ ಹೊಸ 100 ಅಶ್ವಮೇಧ ಬಸ್ ಬಿಡುಗಡೆಯಾಗಿರುವ ಘೋಷಣೆ ಮಾಡಿದ ಡಿಕೆ ಶಿವಕುಮಾರ್

ಅರುಣ್​ ಕುಮಾರ್​ ಬೆಳ್ಳಿ
|

Updated on: Feb 12, 2024 | 6:46 PM

ರಾಮನಗರವನ್ನು ಮಾದರಿ ಜಿಲ್ಲೆಯನ್ನಾಗಿ ಪರಿವರ್ತಿಸುವ ಬಗ್ಗೆ ಮಾತಾಡಿದ ಡಿಸಿಎಂ, ಅಂಕಿ-ಅಂಶಗಳ ಮೂಲಕ ಎಲ್ಲವನ್ನು ಜನರ ಮುಂದಿಡುತ್ತೇವೆ, ರಾಮನಗರ, ಕನಕಪುರ, ಹಾರೋಹಳ್ಳಿ ಮತ್ತು ಚನ್ನಪಟ್ಟಣ-ಎಲ್ಲ ತಾಲ್ಲೂಕುಗಳಲ್ಲಿ ಸರ್ವತೋಮುಖ ಅಭಿವೃದ್ಧಿಗಾಗಿ ಶ್ರಮಿಸಲಾಗುವುದು ಎಂದು ಹೇಳಿದರು.

ರಾಮನಗರ: ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್ (DK Shivakumar) ಇಂದು ರಾಮನಗರಕ್ಕೆ (Ramanagara) ಒಂದು ಕೊಡುಗೆಯನ್ನು ಘೋಷಿಸಿದರು. ಶಿವಕುಮಾರ್ ದಶಕಗಳಿಂದ ಬೆಂಗಳೂರುನಲ್ಲಿ ನೆಲೆಸಿರುವುದು ನಿಜವಾದರೂ ರಾಮನಗರ ಅವರ ತವರು ಜಿಲ್ಲೆ ಅನ್ನೋದು ಗೊತ್ತಿರುವ ವಿಚಾರವೇ. ಕರ್ನಾಟಕ ರಾಜ್ಯ ಸಾರಿಗೆ ಸಂಸ್ಥೆಯ ವತಿಯಿಂದ ಜಿಲ್ಲೆಗೆ 100 ಹೊಚ್ಚಹೊಸ ಅಶ್ವಮೇಧ ಬಸ್ ಗಳನ್ನು (Ashvamedha bus) ಬಿಡುಗಡೆ ಮಾಡಿರುವ ಸಂಗತಿಯನ್ನು ಅವರು ಪತ್ರಕರ್ತರಿಗೆ ಹೇಳಿದರು. ಶಕ್ತಿ ಯೋಜನೆ ಜಾರಿಯಾದ ಬಳಿಕ ಬಸ್ ಗಳಲ್ಲಿ ಮಹಿಳಾ ಪ್ರಯಾಣಿಕರ ಸಂಖ್ಯೆ ಬಹಳ ಹೆಚ್ಚಾಗಿರುವುದರಿಂದ ಪ್ರಯಾಣಿಸುವುದು ಕಷ್ಟವಾಗುತ್ತಿದೆ ಎಂದು ಪುರುಷರು ಒಂದೇ ಸಮ ದೂರುತ್ತಿದ್ದ ಕಾರಣ 100 ಅಶ್ವಮೇಧ ಬಸ್ ಗಳನ್ನು ರಾಮನಗರ ಜಿಲ್ಲೆಗೆ ನೀಡಲಾಗಿದೆ ಎಂದು ಶಿವಕುಮಾರ್ ಹೇಳಿದರು. ರಾಮನಗರವನ್ನು ಮಾದರಿ ಜಿಲ್ಲೆಯನ್ನಾಗಿ ಪರಿವರ್ತಿಸುವ ಬಗ್ಗೆ ಮಾತಾಡಿದ ಡಿಸಿಎಂ, ಅಂಕಿ-ಅಂಶಗಳ ಮೂಲಕ ಎಲ್ಲವನ್ನು ಜನರ ಮುಂದಿಡುತ್ತೇವೆ, ರಾಮನಗರ, ಕನಕಪುರ, ಹಾರೋಹಳ್ಳಿ ಮತ್ತು ಚನ್ನಪಟ್ಟಣ-ಎಲ್ಲ ತಾಲ್ಲೂಕುಗಳಲ್ಲಿ ಸರ್ವತೋಮುಖ ಅಭಿವೃದ್ಧಿಗಾಗಿ ಶ್ರಮಿಸಲಾಗುವುದು ಎಂದು ಹೇಳಿದರು.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ