ಸಿದ್ದರಾಮಯ್ಯ ಮತ್ತು ಶಿವಕುಮಾರ ನಡುವೆ ವೈಮನಸ್ಸು ಮುಂದುವರಿಯುವುದನ್ನು ನಾವ್ಯಾವತ್ತೂ ಬಯಸಿಲ್ಲ: ಸಿಟಿ ರವಿ

| Updated By: ಅರುಣ್​ ಕುಮಾರ್​ ಬೆಳ್ಳಿ

Updated on: Jan 17, 2023 | 3:52 PM

ಸಿದ್ದರಾಮಯ್ಯ ಮತ್ತು ಶಿವಕುಮಾರ ನಡುವೆ ವೈಮನಸ್ಸು ಮುಂದುವರಿಯಲಿ ಅಂತ ಬಿಜೆಪಿ ಯಾವತ್ತೂ ಬಯಸಿಲ್ಲ, ಆದರೆ ಕಾಲವೇ ಎಲ್ಲವನ್ನು ನಿರ್ಣಯಿಸುತ್ತದೆ ಎಂದು ರವಿ ಸೂಚ್ಯವಾಗಿ ಹೇಳಿದರು.

ದೆಹಲಿ: ಸೋಮವಾರ ಬೆಂಗಳೂರಲ್ಲಿ ನಡೆದ ನಾ ನಾಯಕಿ ಕಾರ್ಯಕ್ರಮದಲ್ಲಿ ಮತ್ತು ಅದಕ್ಕೂ ಮೊದಲು ನಡೆದ ಬೇರೆ ಬೇರೆ ಕಾರ್ಯಕ್ರಮಗಳಲ್ಲಿ ಸಿದ್ದರಾಮಯ್ಯ (Siddaramaiah) ಮತ್ತು ಡಿಕೆ ಶಿವಕುಮಾರ (DK Shivakumar) ಜೊತೆಯಾಗಿ ಓಡಾಡಿದ್ದು, ಪರಸ್ಪರ ಆಲಂಗಿಸಿದ್ದು, ಆಪ್ತವಾಗಿ ಸಮಾಲೋಚನೆ ನಡೆಸಿದ್ದು ಬಿಜೆಪಿ ನಾಯಕರಿಗೆ ಇರುಸು ಮುರುಸನ್ನುಂಟು ಮಾಡಿದೆ. ದೆಹಲಿಯಲ್ಲಿಂದು ಸುದ್ದಿಗಾರರೊಂದಿಗೆ ಮಾತಾಡಿದ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿಟಿ ರವಿ (CT Ravi), ಸಿದ್ದರಾಮಯ್ಯ ಮತ್ತು ಶಿವಕುಮಾರ ನಡುವೆ ವೈಮನಸ್ಸು ಮುಂದುವರಿಯಲಿ ಅಂತ ಬಿಜೆಪಿ ಯಾವತ್ತೂ ಬಯಸಿಲ್ಲ, ಆದರೆ ಕಾಲವೇ ಎಲ್ಲವನ್ನು ನಿರ್ಣಯಿಸುತ್ತದೆ ಎಂದು ಸೂಚ್ಯವಾಗಿ ಹೇಳಿದರು.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ