ಕುಮಾರಸ್ವಾಮಿಗೆ ನಾವು ಉತ್ತರ ಕೊಡುವುದನ್ನು ಬಿಡಬೇಕು -ಕೃಷಿ ಸಚಿವ ಎನ್ ಚಲುವರಾಯಸ್ವಾಮಿ ಲೇವಡಿ

| Updated By: ಸಾಧು ಶ್ರೀನಾಥ್​

Updated on: Aug 05, 2023 | 7:08 PM

ವರ್ಗಾವಣೆ ಬಗ್ಗೆ ಕುಮಾರಸ್ವಾಮಿ ಮಾತನಾಡಿದ್ದು ಸರಿ ಎಂದು ದೇವೇಗೌಡರು ಹೇಳಿದ್ರೆ ನಾನು ಒಪ್ಪಿಕೊಳ್ಳುತ್ತೇನೆ- ಕೃಷಿ ಸಚಿವ ಎನ್ ಚಲುವರಾಯಸ್ವಾಮಿ ಲೇವಡಿ

ಮಂಡ್ಯ, ಆಗಸ್ಟ್​ 5: ಯಾವುದೇ ಸರ್ಕಾರ ಬಂದಾಗ ವರ್ಗಾವಣೆ ಆಗದೇ ಇರುತ್ತದೆಯಾ. ಕಾನೂನು ಪರಿಮಿತಿಯಲ್ಲಿ ವರ್ಗಾವಣೆ ಮಾಡದೇ ಇರುತ್ತಾರಾ. ಪ್ರತಿ ವರ್ಷ ವರ್ಗಾವಣೆಯನ್ನ ಬೊಮ್ಮಾಯಿ, ಯಡಿಯೂರಪ್ಪ, ಕುಮಾರಸ್ವಾಮಿ ಎಲ್ಲರೂ ಮಾಡಿದ್ದಾರೆ. ಅದೇ ರೀತಿ ವರ್ಗಾವಣೆ ಆಗುತ್ತದೆ. ಅದನ್ನೆ ವರ್ಗಾವಣೆ ದಂಧೆ ಅಂದರೇ ಏನು ಅರ್ಥ. ಏನೋ ಹೇಳಿ ಹೋಗುವುದು ಕುಮಾರಸ್ವಾಮಿ ಸ್ಥಾನಕ್ಕೆ ಗೌರವ ತರುವ ವಿಚಾರವಲ್ಲ. ದೇವೇಗೌಡರ ಬಳಿಯೇ ಹೋಗಿ ಕೇಳಿ. ನಿಮ್ಮ ಮಗ ಈ ರೀತಿ ಮಾತನಾಡುತ್ತಿದ್ದಾರೆ, ನಿಮ್ಮ ಅಭಿಪ್ರಾಯವೇನು ಎಂದು ಕೇಳಿನೊಡಿ. ಆಗ ಅವರೇನಾದ್ರು ಹೇಳಿದ್ರೆ ಉತ್ತರ ‌ಕೊಡುತ್ತೇನೆ. ನಾವು ಅನೇಕರಿಗೆ ಉತ್ತರ ಕೊಡುವುದು ಬಿಟ್ಟಿದ್ದೇವೆ. ಅದೇ ರೀತಿ ಕುಮಾರಸ್ವಾಮಿ ಅವರಿಗೂ ಉತ್ತರ ಕೊಡುವುದು ಬಿಡಬೇಕು. ಈ ಹಿಂದೆ ದೇವೇಗೌಡರ ಹೇಳುತ್ತಿದ್ದ ವಿಚಾರವನ್ನ ನಾನು ಈಗ ಹೇಳಲು ಸಾಧ್ಯವಿಲ್ಲ. ಒಟ್ಟಿಗೆ ಊಟ ಮಾಡುತ್ತಿದ್ದ ವೇಳೆ ಹೇಳುತ್ತಿದ್ದ ಮಾತನ್ನ ಹೇಳಲು ಸಾಧ್ಯವಿಲ್ಲ. ಖಾಸಗಿ ವಿಚಾರವನ್ನ ಚರ್ಚೆ ಮಾಡಿದ್ದು ಅದರ ಬಗ್ಗೆ ನಾನು ಮಾತನಾಡಬಾರದು. ದೇವೇಗೌಡರು ಕುಮಾರಸ್ವಾಮಿ ಮಾತನಾಡಿದ್ದು ಸರಿ ಎಂದು ಹೇಳಿದ್ರೆ ನಾನು ಒಪ್ಪಿಕೊಳ್ಳುತ್ತೇನೆ. ಕುಮಾರಸ್ವಾಮಿ ಸರ್ಕಾರದ್ದೂ ವರ್ಗಾವಣೆಗೆ ತಡೆ ಕೊಟ್ಟಿದ್ದಾರೆ. ಬಿಜೆಪಿ ಸರ್ಕಾರದ್ದು ಆಗಿದೆ ಎಂದು ಮಾಜಿ ಸಿಎಂ ಕುಮಾರಸ್ವಾಮಿ (HD Kumaraswamy) ವಿರುದ್ದ ಕೃಷಿ ಸಚಿವ ಎನ್ ಚಲುವರಾಯಸ್ವಾಮಿ ( N Chaluvarayaswamy) ವಾಗ್ದಾಳಿ ನಡೆಸಿದ್ರು.

ಬಿಜೆಪಿ ಅವರು ಇವರಿಗೆ ವರ್ಗಾವಣೆ ಮಾಡಿರಬೇಕು. ಮಾಜಿ ಸಿಎಂ ಕುಮಾರಸ್ವಾಮಿ ಅವರನ್ನ ಬಿಜೆಪಿ ವಕ್ತಾರನ್ನಾಗಿ ಮಾಡಿರಬೇಕು. ಎಲ್ಲ ಪೂರ್ತಿ ಇವರಿಗೆ ಕೊಟ್ಟಿರಬೇಕು. ಪಾಪ ಬಿಜೆಪಿ ಅವರು ಮಾತನಾಡುತ್ತಿಲ್ಲ. ಎಲ್ಲ ಕುಮಾರಸ್ವಾಮಿ ಅವರೇ ಮಾತನಾಡುತ್ತಿದ್ದಾರೆ ಎಂದು ಕೃಷಿ ಸಚಿವ ಎನ್ ಚಲುವರಾಯಸ್ವಾಮಿ, ಮಾಜಿ ಸಿಎಂ ಕುಮಾರಸ್ವಾಮಿ ಅವರಿಗೆ ಟಾಂಗ್ ಕೊಟ್ಟರು. ರಾಜ್ಯ ಕಾಂಗ್ರೆಸ್ ಸರ್ಕಾರದ ವಿರುದ್ದ ಕುಮಾರಸ್ವಾಮಿ ಆರೋಪ ವಿಚಾರವಾಗಿ ಮಂಡ್ಯದಲ್ಲಿ ಮಾತನಾಡಿದ ಸಚಿವ ಚಲುವರಾಯಸ್ವಾಮಿ, ನಾವು ಕಾರ್ಯಕ್ರಮಗಳು ಮಾಡುತ್ತಿದ್ದೇವೆ.ಇದರ ಬಗ್ಗೆ ಜನ ತಿರುಗಿ ನೋಡುತ್ತಿದ್ದಾರೆ. ಈ ಕಾರ್ಯಕ್ರಮಗಳ ಬಗ್ಗೆ ರಾಜ್ಯದ ಜನರಲ್ಲಿ ಖುಷಿ ಇದೆ. ಇದನ್ನ ಮರೆಮಾಚಲು ಏನು ಮಾಡಬಹುದು. ಕುಮಾರಸ್ವಾಮಿ ಅವರು ಸಿಎಂ ಆದಾಗ ಕೊಟ್ಟ ಭರವಸೆ ಈಡೇರಿಸಲಿಲ್ಲ. ಸಿಎಂ ಒಂದೇ ಚೇರ್ ಇದ್ದಿದ್ದು. ಎರಡು ಚೇರ್ ಇರಲಿಲ್ಲ. ಸಹಿ ಹಾಕುತ್ತಿದ್ದಿದ್ದು ಅವರ ಪೆನ್ ನಲ್ಲಿ ತಾನೇ. ಅವರು ಮಾಡಲು ಏನು ತೊಂದರೆ ಇರಲಿಲ್ಲ. ಹಣಕಾಸು ಖಾತೆ ಅವರ ಬಳಿಯೇ ಇತ್ತು. ಕುಮಾರಸ್ವಾಮಿ ಅವರಿಗೆ ಮುಂದೇ ಏನು ಎಂಬ ಆತಂಕ ಹುಟ್ಟಿದೆ. ಈ ರೀತಿ ಡೈವರ್ಟ್ ಮಾಡಲು ಬಾಂಬ್ ಸಿಡಿಸುತ್ತಿದ್ದಾರೆ. ಮಾಧ್ಯಮಗಳಲ್ಲೂ ಕುಮಾರಸ್ವಾಮಿ ಹೇಳಿಕೆಗಳನ್ನ ಹಾಕುತ್ತಿದ್ದೀರಾ. ಕಾಂಗ್ರೆಸ್ ಯೋಜನೆಗಳನ್ನ ಬಿಟ್ಟು ನಮ್ಮ ಕಡೆ ತಿರುಗಿ ನೋಡಲಿ ಎಂಬ ಕಾರಣಕ್ಕೆ ಪ್ಲಾನ್ ಮಾಡಿರಬಹುದು.

ಸಿದ್ದರಾಮಯ್ಯ ಗಿಂತ ಉತ್ತಮ ಆಡಳಿತ ಕೊಡುವವರನ್ನ ನೋಡಿಲ್ಲ. ಎಲ್ಲ ವರ್ಗದ ಜನ ಸಿದ್ದರಾಮಯ್ಯ ಆಡಳಿತ ಒಪ್ಪುತ್ತಾರೆ. ಭ್ರಷ್ಟಾಚಾರ ವಿಚಾರದಲ್ಲಿ ಶಿಸ್ತು ಬದ್ದ ಆಡಳಿತ ನಡೆಸುವವರನ್ನ ನಾನು ಯಾರನ್ನು ನೋಡಿಲ್ಲ. ಅಷ್ಟು ಕ್ಲಿಯರ್ ಆಗಿ ಇರಬೇಕಾದ್ರೆ. ಯತೀಂದ್ರ ಮಾಜಿ ಶಾಸಕ ಇದ್ದಾರೆ. ಆಕ್ಟೀವ್ ಪಾಲಿಟಿಕ್ಸ್ ನಲ್ಲಿ ಇದ್ದಾರೆ. ಪಾರ್ಟಿ ಲೀಡರ್ ಆಗಿ ಕೆಲಸ ಮಾಡುತ್ತಿದ್ದಾರೆ. ಯಾರಾದರೂ ಪಕ್ಷದ ಕಾರ್ಯಕರ್ತರು ಬಂದಾಗ, ವರ್ಗಾವಣೆ ವಿಚಾರ ಬಂದಾಗ ಸಿಎಂ ಜೊತೆ ಮಂತ್ರಿಗಳ ಜೊತೆ ಮಾತನಾಡಿಬೇಡಿ ಎಂದರೇ ಹೇಗೆ. ಕುಮಾರಸ್ವಾಮಿ ಸಿಎಂ ಆದಾಗ ಅವರ ಮನೆಯವರೆಲ್ಲ ಸೇರಿಕೊಂಡು ರಾಜಕಾರಣ ಮಾಡಿಲ್ವಾ. ಇಡೀ ಕುಟುಂಬದವರು, ರಾಜಕಾರಣಕ್ಕೆ ಸಂಬಂಧ ಇಲ್ಲದವರು ರಾಜಕಾರಣ ಮಾಡಿಲ್ವ. ಆಗ ನಾವು ಕೇಳಿದ್ದೇವಾ. ಅವರು ಅವರ ಪಾಡಿಗೆ ಸುಮ್ಮನೇ ಇರಬೇಕು. ಕುಮಾರಸ್ವಾಮಿ ಅವರಿಗೆ ಒಂದು ಗೌರವ ಇದೆ. ದೇವೇಗೌಡರ ಬಳಿ ಕುಮಾರಸ್ವಾಮಿ ಮಾರ್ಗದರ್ಶನ ತೆಗೆದುಕೊಂಡರೇ ಇದೆಲ್ಲ ಆಗಲ್ಲ. ಮಾರ್ಗದರ್ಶನ ತೆಗೆದುಕೊಳ್ಳದೇ ಹೋದರೆ ಈ ರೀತಿ ತಪ್ಪು ಆಗುತ್ತದೆ ಎಂದು ಕೃಷಿ ಸಚಿವ ಎನ್ ಚಲುವರಾಯಸ್ವಾಮಿ ಲೇವಡಿ ಮಾಡಿದರು.