ಹೈದ್ರಾಬಾದ್-ಕರ್ನಾಟಕ ಹೆಸರನ್ನು ಕಲ್ಯಾಣ ಕರ್ನಾಟಕ ಅಂತ ಬದಲಾಯಿಸಿದ್ದು ಬಿಟ್ಟರೆ ಈ ಭಾಗಕ್ಕೆ ಬಿಜೆಪಿ ಕೊಡುಗೆ ಏನೂ ಇಲ್ಲ: ಸಿದ್ದರಾಮಯ್ಯ, ಮುಖ್ಯಮಂತ್ರಿ
ಕಲ್ಯಾಣ ಕರ್ನಾಟಕ ಪ್ರಾಂತ್ಕದಲ್ಲಿ ತಮ್ಮ ಸರ್ಕಾರ 99,600 ಮನೆಗಳನ್ನು ಕಟ್ಟಿಸಿದ್ದರೆ, ಬಿಜೆಪಿ ಸರ್ಕಾರ ನಿರ್ಮಿಸಿದ್ದು ಕೇವಲ 19,000 ಮನೆ ಮಾತ್ರ ಎಂದು ಮುಖ್ಯಮಂತ್ರಿ ಹೇಳಿದರು.
ಕಲಬುರಗಿ: ರಾಜ್ಯದಲ್ಲಿ ಆಡಳಿತ ನಡೆಸಿದ ಮತ್ತು ಕೇಂದ್ರದಲ್ಲಿ ಆಡಳಿತ ನಡೆಸುತ್ತಿರುವ ಬಿಜೆಪಿ ಸರ್ಕಾರ (BJP government) ಕರ್ನಾಟಕಕ್ಕೆ ಅದರಲ್ಲೂ ವಿಶೇಷವಾಗಿ ಉತ್ತರ ಕರ್ನಾಟಕಕ್ಕೆ ಯಾವ ಕೊಡುಗೆಯನ್ನೂ ನೀಡಿಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ (CM Siddaramaiah) ಹೇಳಿದರು. ನಗರದಲ್ಲಿಂದು ಗೃಹ ಜ್ಯೊತಿ ಯೋಜನೆಗೆ ಅಧಿಕೃತವಾಗಿ ಚಾಲನೆ ನೀಡಿ ಮಾತಾಡಿದ ಸಿದ್ದರಾಮಯ್ಯ ಹಿಂದೆ ತಾವು ಮುಖ್ಯಮಂತ್ರಿಯಾಗಿದ್ದ ಅವಧಿಯಲ್ಲಿ ವಸತಿ ಯೋಜನೆ ಅಡಿ 14,42,000 ಮನೆಗಳನ್ನು ನಿರ್ಮಿಸಲಾಗಿತ್ತು ಆದರೆ ಸಮ್ಮಿಶ್ರ ಸರ್ಕಾರದ ಅವಧಿಯೂ ಸೇರಿದಂತೆ 5-ವರ್ಷ ಅವಧಿಯಲ್ಲಿ ಬಿಜೆಪಿ ಸರ್ಕಾರ ಕಟ್ಟಿಸಿದ್ದು ಕೇವಲ 8 ಲಕ್ಷ ಮನೆ ಮಾತ್ರ ಎಂದು ಹೇಳಿದರು. ಕಲ್ಯಾಣ ಕರ್ನಾಟಕ ಪ್ರಾಂತ್ಕದಲ್ಲಿ ತಮ್ಮ ಸರ್ಕಾರ 99,600 ಮನೆಗಳನ್ನು ಕಟ್ಟಿಸಿದ್ದರೆ, ಬಿಜೆಪಿ ಸರ್ಕಾರ ನಿರ್ಮಿಸಿದ್ದು ಕೇವಲ 19,000 ಮನೆ ಮಾತ್ರ ಎಂದು ಹೇಳಿದ ಅವರು, ಈ ಭಾಗಕ್ಕೆ ಬಿಜೆಪಿ ನೀಡಿದ ಕೊಡುಗೆಯೆಂದರೆ, ಹೈದ್ರಾಬಾದ್-ಕರ್ನಾಟಕ (Hyderabad-Karnataka) ಹೆಸರನ್ನು ಕಲ್ಯಾಣ ಕರ್ನಾಟಕ (Kalyana Karnataka) ಅಂತ ಬದಲಾಯಿಸಿದ್ದು ಎಂದರು.
ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ