ನಮಗೆ ಮಗ ಬೇಕು, ದರ್ಶನ್ ಬಂದು ಭೇಟಿಯಾಗುವುದಲ್ಲ: ಕಾಶೀನಾಥಯ್ಯ, ರೇಣುಕಾಸ್ವಾಮಿ ತಂದೆ
ರೇಣುಕಾಸ್ವಾಮಿಯನ್ನು ಹತ್ಯೆ ಮಾಡಿರುವ ಅರೋಪ ಎದುರಿಸುತ್ತಿರುವ ಚಿತ್ರನಟ ದರ್ಶನ್, ಗೆಳತಿ ಪವಿತ್ರಾ ಗೌಡ ಮತ್ತು ಉಳಿದವರಿಗೆಲ್ಲ ನ್ಯಾಯಾಲಯದಿಂದ ಜಾಮೀನು ಸಿಕ್ಕಿದೆ. ವಿಷಯಕ್ಕೆ ಸಂಬಂಧಿಸಿದಂತೆ ಮುಖ್ಯಮಂತ್ರಿ ಸಿದ್ದರಾಮಯ್ಯರನ್ನು ಭೇಟಿಯಾಗುತ್ತೀರಾ ಎಂದು ಕೇಳಿದ ಪ್ರಶ್ನೆಗೆ ಕಾಶೀನಾಥಯ್ಯ, ಅದರ ಬಗ್ಗೆಯೂ ಯೋಚನೆ ಮಾಡಿಲ್ಲ, ಅಪ್ತರು ಮತ್ತು ಹಿತೈಷಿಗಳನ್ನು ಭೇಟಿಯಾಗಿ ಅಭಿಪ್ರಾಯ ಕೇಳೋದಾಗಿ ಹೇಳಿದರು.
ಚಿತ್ರದುರ್ಗ: ತಮ್ಮ ಮಗನನ್ನು ಕೊಲೆಗೈದ ಅರೋಪಿಗಳಿಗೆ ಜಾಮೀನು ಸಿಕ್ಕಿರೋದು ಸಹಜವಾಗೇ ರೇಣುಕಾಸ್ವಾಮಿ ತಂದೆ ಕಾಶೀನಾಥಯ್ಯರನ್ನು ಖಿನ್ನರಾಗಿಸಿದೆ. ಅರೋಪಿ ನಂಬರ್ 2 ದರ್ಶನ್ ತಮ್ಮನ್ನು ಕಾಣಲು ಬಂದರೆ ಅವರೊಂದಿಗೆ ಮಾತಾಡುತ್ತೀರಾ ಎಂದು ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು, ಅದರ ಬಗ್ಗೆ ತಾನು ಯೋಚನೆ ಮಾಡಿಲ್ಲ, ತಮಗೆ ಮಗ ಬೇಕು, ಅವನಿಗಾಗಿ ಪರಿತಪಿಸುತ್ತಿದ್ದೇವೆ, ಬೇರೆಯವರ ಅವಶ್ಯಕತೆ ನಮಗಿಲ್ಲ, ನಾಡಿನ ಕಾನೂನು ವ್ಯವಸ್ಥೆ ಮೇಲೆ ತನಗೆ ಅಪಾರ ವಿಶ್ವಾಸವಿದೆ ಎಂದು ಹೇಳಿದರು.
ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
ಇದನ್ನೂ ಓದಿ: ದರ್ಶನ್ ಜೊತೆ ಸಹಚರರಿಗೂ ಬಿಗ್ ರಿಲೀಫ್; ಹೈಕೋರ್ಟ್ನಲ್ಲಿ ಸಿಕ್ತು ಜಾಮೀನು