Karnataka Bandh: ಸೆಕ್ಷನ್ 144 ಹಿಂಪಡೆಯದಿದ್ದರೂ ನಾವು ಶುಕ್ರವಾರ ರ‍್ಯಾಲಿ ಮಾಡೋದು ನಿಶ್ಚಿತ: ವಾಟಾಳ್ ನಾಗರಾಜ್
ಟೌನ್ ಹಾಲ್ ನಿಂದ ಫ್ರೀಡಂ ಪಾರ್ಕ್ ವರೆಗೆ ಶಾಂತಿಯುತವಾಗಿ ರ‍್ಯಾಲಿ ನಡೆಸಲಿದ್ದೇವೆ, ಯಾರಿಗೂ ತೊಂದರೆ ಕೊಡೋದಿಲ್ಲ, ಪೊಲೀಸರು ಸೆಕ್ಷನ್ 144 ಹಿಂಪಡೆಯಲು ಅಂತ ವಿನಂತಿ ಮಾಡುತ್ತೇವೆ, ವಾಪಸ್ಸು ತೆಗೆದುಕೊಂಡರೆ ಸರಿ, ಹಿಂಪಡೆಯದಿದ್ದರೂ ರ‍್ಯಾಲಿ ಮಾಡೋದು ಮಾತ್ರ ನಿಶ್ಚಿತ ಎಂದು ವಾಟಾಳ್ ನಾಗರಾಜ್ ಹೇಳಿದರು.
ಬೆಂಗಳೂರು: ಕಾವೇರಿ ಜಲವಿವಾದಕ್ಕೆ ಸಂಬಂಧಿಸಿದಂತೆ ಕನ್ನಡ ಪರ ಸಂಘಟನೆಗಳು (Pro Kannada Organisations) ಕರೆ ನೀಡಿರುವ ಕರ್ನಾಟಕ ಬಂದ್ ಗೆ (Karnataka Bandh) ಇವತ್ತಿನಿಂದಲೇ ಉತ್ತಮ ಪ್ರತಿಕ್ರಿಯೆಗಳುಸಿಗುತ್ತಿವೆ. ನೂರಾರು ಸಂಘಟನೆಗಳು ಬಂದ್ ಮಲ್ಲಿ ಪಾಲ್ಗೊಳ್ಳುತ್ತಿದ್ದರೂ ಕೆಲ ಸಂಘಟನೆಗಳು ತಮ್ಮನ್ನು ಕರೆದಿಲ್ಲ ಅಂತ ಮುನಿಸಿಕೊಂಡಿವೆ. ಟಿವಿ9 ಕನ್ನಡ ವಾಹಿನಿ ಪ್ರತಿನಿಧಿಯೊಂದಿಗೆ ಮಾತಾಡಿದ ವಾಟಾಳ್ ನಾಗರಾಜ್ (Vatal Nagaraj), ಇದು ಕನ್ನಡ ಜಲನೆಲದ ಪ್ರಶ್ನೆ, ನಾಡಿಗೆ ಬೆಂಕಿಹೊತ್ತಿಕೊಂಡಿದೆ, ಬಂದ್ ಸಫಲವಾಗಿ ಸಮಸ್ಯೆ ಇತ್ಯರ್ಥಗೊಂಡರೆ ಅದರ ಕೀರ್ತಿ ಎಲಲ್ಲರಿಗೆ ಸಲ್ಲುತ್ತದೆ, ಹಾಗಾಗಿ ಎಲ್ಲ ಸಂಘಟನೆಗಳು ಭಾಗವಹಿಸಿ ಅಂತ ಮನವಿ ಮಾಡಿದರು. ನಾಳೆ ನಗರದಲ್ಲಿ 144 ಸೆಕ್ಷನ್ (Prohibitory Orders) ಜಾರಿಗೊಳಿಸಿರುವ ಬಗ್ಗೆ ಕೋಪ ಪ್ರಕಟಿಸಿದ ನಾಗರಾಜ್, ಇದರ ಅವಶ್ಯಕತೆ ಇರಲಿಲ್ಲ, ಟೌನ್ ಹಾಲ್ ನಿಂದ ಫ್ರೀಡಂ ಪಾರ್ಕ್ ವರೆಗೆ ಶಾಂತಿಯುತವಾಗಿ ರ‍್ಯಾಲಿ ನಡೆಸಲಿದ್ದೇವೆ, ಯಾರಿಗೂ ತೊಂದರೆ ಕೊಡೋದಿಲ್ಲ, ಪೊಲೀಸರು ಸೆಕ್ಷನ್ 144 ಹಿಂಪಡೆಯಲು ಅಂತ ವಿನಂತಿ ಮಾಡುತ್ತೇವೆ, ವಾಪಸ್ಸು ತೆಗೆದುಕೊಂಡರೆ ಸರಿ, ಹಿಂಪಡೆಯದಿದ್ದರೂ ರ‍್ಯಾಲಿ ಮಾಡೋದು ಮಾತ್ರ ನಿಶ್ಚಿತ ಎಂದು ಹೇಳಿದರು.
ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ