Karnataka Bandh: ಡಿಕೆ ಶಿವಕುಮಾರ್ ಗೆ ನನ್ನ ಬಗ್ಗೆ ಗೊತ್ತಿಲ್ಲ, ಬಂದ್ಗೆ ಅವಕಾಶವಿಲ್ಲ ಅಂದ್ರೆ ಮನೆಗೆ ಓಡಿಹೋಗ್ತೀವಾ? ವಾಟಾಳ್ ನಾಗರಾಜ್
Karnataka Bandh: ಅಸಲಿಗೆ ಅವರು ಬಂದ್ ಅಂದ್ರೆ ಏನಂದುಕೊಂಡಿದ್ದಾರೆ, ಮನೆಗಳಿಗೆ ಹೋಗಿ ಬೀಗ ಹಾಕಿಬಿಡ್ತೀವಾ? ನಮಗೂ ಗೌರವ ಜವಾಬ್ದಾರಿ ಇದೆ. ನಮ್ಮ ಮುಷ್ಕರದಿಂದ ಸರ್ಕಾರಕ್ಕೆ ಹೆಚ್ಚಿನ ಶಕ್ತಿ ಸಿಗುತ್ತದೆ ಅಂತ ಶಿವಕುಮಾರ್ ಗೆ ಗೊತ್ತಾಗುತ್ತಿಲ್ಲವೇ? ಎಂದು ನಾಗರಾಜ್ ಹೇಳಿದರು.
ಬೆಂಗಳೂರು: ನಾಳೆ ಬಂದ್ ಗೆ ಅವಕಾಶವಿಲ್ಲ, ಹೋರಾಟ ಮಾತ್ರ ಮಾಡಬಹುದು ಅಂತ ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್ (DK Shivakumar) ಹೇಳಿರುವುದಕ್ಕೆ ವಾಟಾಳ್ ನಾಗರಾಜ್ (Vatal Nagaraj) ತೀಕ್ಷ್ಣ ಪ್ರತಿಕ್ರಿಯೆ ನೀಡಿದರು. ಶಿವಕುಮಾರ್ ಅಧಿಕಾರದಲ್ಲಿರುವ ಕಾರಣ ಹೀಗೆ ಮಾತಾಡುತ್ತಿದ್ದಾರೆ, ವಾಟಾಳ್ ನಾಗರಾಜನ 40 ವರ್ಷಗಳ ಇತಿಹಾಸವನ್ನು ತೆಗೆದುನೋಡಲಿ, ನನ್ನ ಅನೇಕ WyTASsU1ಚಳುವಳಿಗಳಲ್ಲಿ (protests) ಅವರು ಕನಕಪುರದಿಂದ ಓಡೋಡಿ ಬಂದು ಭಾಗವಹಿಸಿದ್ದಾರೆ, ನನ್ನ ಜೊತೆ ಸೇರಿ ಹೋರಾಟ ನಡೆಸಿದ್ದಾರೆ ಎಂದು ನಾಗಾರಾಜ್ ಹೇಳಿದರು. ಅಸಲಿಗೆ ಅವರು ಬಂದ್ ಅಂದ್ರೆ ಏನಂದುಕೊಂಡಿದ್ದಾರೆ, ಮನೆಗಳಿಗೆ ಹೋಗಿ ಬೀಗ ಹಾಕಿಬಿಡ್ತೀವಾ? ನಮಗೂ ಗೌರವ ಜವಾಬ್ದಾರಿ ಇದೆ. ನಮ್ಮ ಮುಷ್ಕರದಿಂದ ಸರ್ಕಾರಕ್ಕೆ ಹೆಚ್ಚಿನ ಶಕ್ತಿ ಸಿಗುತ್ತದೆ ಅಂತ ಶಿವಕುಮಾರ್ ಗೆ ಗೊತ್ತಾಗುತ್ತಿಲ್ಲವೇ? ಎಂದು ನಾಗರಾಜ್ ಹೇಳಿದರು. ಅವರು ಬಂದ್ ಅವಕಾಶ ಕೋಡೋದಿಲ್ಲ ಅಂದಾಕ್ಷಣ ಮನೆಗೆ ಓಡಿಹೋಗಿಬಿಡ್ತೀವಾ? ಶಿವಕುಮಾರ್ ನನ್ನ ಬಗ್ಗೆ ಇನ್ನೂ ಸರಿಯಾಗಿ ಗೊತ್ತಿಲ್ಲ, ಗೊತ್ತಿದ್ದರೆ ಅವರು ಹೀಗೆ ಮಾತಾಡುತ್ತಿರಲಿಲ್ಲ ಎಂದು ನಾಗರಾಜ್ ಹೇಳಿದರು.
ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ