ಬಂಗಾಳದಲ್ಲಿ ಚುನಾವಣೆ ವೇಳೆ ಕಲ್ಲಿನಿಂದ ಹೊಡೆದ ಜನ; ಎದ್ದು ಬಿದ್ದು ಓಡಿದ ಬಿಜೆಪಿ ಅಭ್ಯರ್ಥಿ

|

Updated on: May 25, 2024 | 9:58 PM

Lok Sabha Elections: ಪಶ್ಚಿಮ ಬಂಗಾಳದ ಜಾರ್​ಗ್ರಾಮ್ ಲೋಕಸಭಾ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ಪ್ರಣತ್ ತುಡು ಎಂಬುವವರ ಮೇಲೆ ಏಕಾಏಕಿ ಹಲ್ಲೆ ನಡೆಸಲಾಗಿದೆ. ಇದ್ದಕ್ಕಿದ್ದಂತೆ ರಸ್ತೆಗಳನ್ನು ತಡೆದ ಟಿಎಂಸಿ ಗೂಂಡಾಗಳು ನನ್ನ ಕಾರಿಗೆ ಇಟ್ಟಿಗೆಗಳನ್ನು ಎಸೆಯಲು ಪ್ರಾರಂಭಿಸಿದರು. ನನ್ನ ಭದ್ರತಾ ಸಿಬ್ಬಂದಿ ಮಧ್ಯಪ್ರವೇಶಿಸಲು ಪ್ರಯತ್ನಿಸಿದಾಗ ಅವರು ಗಾಯಗೊಂಡರು. ನನ್ನ ಜೊತೆಗಿದ್ದ ಇಬ್ಬರು ಸಿಐಎಸ್ಎಫ್ ಜವಾನರು ತಲೆಗೆ ಗಾಯಗೊಂಡು ಆಸ್ಪತ್ರೆಗೆ ಸೇರಿಸಬೇಕಾಯಿತು ಎಂದು ಪ್ರಣತ್ ತುಡು ಆರೋಪಿಸಿದ್ದಾರೆ.

ಪಶ್ಚಿಮ ಬಂಗಾಳದಲ್ಲಿ (West Bengal) ಇಂದು 6ನೇ ಹಂತದ ಲೋಕಸಭಾ ಚುನಾವಣೆ (Lok Sabha Elections 2024) ನಡೆದಿದೆ. ಈ ವೇಳೆ ಜನರ ಗುಂಪೊಂದು ಜಾರ್‌ಗ್ರಾಮ್ (Jhargram) ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಪ್ರಣತ್ ತುಡು ಅವರ ಮೇಲೆ ಕಲ್ಲುಗಳನ್ನು ಎಸೆದು ದಾಳಿ ನಡೆಸಿದ್ದು, ಕಂಗಾಲಾದ ಪ್ರಣತ್ ತುಡು ತಪ್ಪಿಸಿಕೊಳ್ಳಲು ಪರದಾಡುತ್ತಾ ಓಡಿಹೋಗಿದ್ದಾರೆ. ಅವರನ್ನು ರಕ್ಷಿಸಲು ಅವರ ಭದ್ರತಾ ಸಿಬ್ಬಂದಿ ಕೂಡ ಹರಸಾಹಸ ಪಟ್ಟಿದ್ದಾರೆ.

ಪ್ರಣತ್ ತುಡು ಎಂಬ ಅಭ್ಯರ್ಥಿಯನ್ನು ರಕ್ಷಿಸಲು ಭದ್ರತಾ ಸಿಬ್ಬಂದಿ ಶೀಲ್ಡ್‌ಗಳನ್ನು ಹಿಡಿದುಕೊಂಡು ಹೋಗುತ್ತಿರುವ ವಿಡಿಯೋ ವೈರಲ್ ಆಗಿದೆ. ಈ ಘಟನೆಗೆ “ತೃಣಮೂಲ ಕಾಂಗ್ರೆಸ್ (ಟಿಎಂಸಿ) ಗೂಂಡಾಗಳು ನನ್ನ ಮೇಲೆ ಹಲ್ಲೆ ಮಾಡಿಸಿದ್ದಾರೆ” ಎಂದು ಪ್ರಣತ್ ತುಡು ಆರೋಪಿಸಿದ್ದಾರೆ. ಅವರ ಇಬ್ಬರು ಭದ್ರತಾ ಸಿಬ್ಬಂದಿಯ ತಲೆಗೆ ಗಾಯಗೊಂಡು ಆಸ್ಪತ್ರೆಗೆ ದಾಖಲಾಗಬೇಕಾಯಿತು.

ಇನ್ನಷ್ಟು ವಿಡಿಯೋ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ