ರೈಲಿನ ಚಕ್ರದಡಿಗೆ ಸಿಲುಕುತ್ತಿದ್ದ ವೃದ್ಧರನ್ನು ರಕ್ಷಿಸಿದ ಬಂಗಾಳದ ಕಾನ್‌ಸ್ಟೆಬಲ್ ಪಲ್ಲವಿಗೆ ಜೀವನ್ ರಕ್ಷಾ ಪದಕ ಪ್ರದಾನ

Updated on: Jan 28, 2025 | 9:55 PM

ಪಶ್ಚಿಮ ಬಂಗಾಳದ ಪುರುಲಿಯಾದಲ್ಲಿ ರೈಲ್ವೆ ರಕ್ಷಣಾ ಪಡೆ (ಆರ್‌ಪಿಎಫ್)ಯ ಕಾನ್‌ಸ್ಟೆಬಲ್ ಪಲ್ಲವಿ ಬಿಸ್ವಾಸ್ ಅವರಿಗೆ ಅವರ ಅಸಾಧಾರಣ ಧೈರ್ಯಕ್ಕಾಗಿ 2024ರ ಪ್ರತಿಷ್ಠಿತ ಜೀವನ್ ರಕ್ಷಾ ಪದಕವನ್ನು ನೀಡಲಾಗಿದೆ. ರಾಷ್ಟ್ರೀಯ ಗೌರವವಾದ ಜೀವನ ರಕ್ಷಾ ಪದಕವನ್ನು ಇತರರನ್ನು ಉಳಿಸಲು ತಮ್ಮ ಪ್ರಾಣವನ್ನೇ ಪಣಕ್ಕಿಟ್ಟ ವ್ಯಕ್ತಿಗಳಿಗೆ ನೀಡಲಾಗುತ್ತದೆ. ಪಲ್ಲವಿಯ ನಿಸ್ವಾರ್ಥತೆ ಮತ್ತು ಕರ್ತವ್ಯಕ್ಕೆ ಸಮರ್ಪಣೆಯ ಕಾರ್ಯವು ಆರ್‌ಪಿಎಫ್‌ಗೆ ಹೆಮ್ಮೆಯನ್ನು ತಂದಿದೆ ಮತ್ತು ಅನೇಕರಿಗೆ ಸ್ಫೂರ್ತಿ ನೀಡಿದೆ.

ಕೊಲ್ಕತ್ತಾ: ಪಶ್ಚಿಮ ಬಂಗಾಳದ ಪುರುಲಿಯಾ ರೈಲ್ವೆ ನಿಲ್ದಾಣದಲ್ಲಿ ಚಲಿಸುವ ರೈಲು ಮತ್ತು ಪ್ಲಾಟ್‌ಫಾರ್ಮ್ ನಡುವಿನ ಅಂತರಕ್ಕೆ ಬೀಳುತ್ತಿದ್ದ 65 ವರ್ಷದ ವೃದ್ಧರನ್ನು ರಕ್ಷಿಸಿದ ಹಿನ್ನೆಲೆಯಲ್ಲಿ ರೈಲ್ವೆ ರಕ್ಷಣಾ ಪಡೆ (ಆರ್‌ಪಿಎಫ್)ಯ ಕಾನ್‌ಸ್ಟೆಬಲ್ ಪಲ್ಲವಿ ಬಿಸ್ವಾಸ್ ಅವರಿಗೆ ಜೀವನ್ ರಕ್ಷಾ ಪದಕ ಪ್ರಶಸ್ತಿ ಘೋಷಿಸಲಾಗಿದೆ. ಈ ಮಾಹಿತಿಯನ್ನು ರೈಲ್ವೆ ರಕ್ಷಣಾ ಪಡೆ (ಆರ್‌ಪಿಎಫ್ ಇಂಡಿಯಾ) ಸಿಸಿಟಿವಿ ದೃಶ್ಯಗಳೊಂದಿಗೆ ಎಕ್ಸ್​ನಲ್ಲಿ ಹಂಚಿಕೊಂಡಿದೆ. ಇದರಲ್ಲಿ ಚಲಿಸುವ ರೈಲನ್ನು ಹತ್ತಲು ಪ್ರಯತ್ನಿಸುತ್ತಿದ್ದಾಗ ವೃದ್ಧರೊಬ್ಬರು ಎಡವಿ ಬೀಳುವುದನ್ನು ನೋಡಬಹುದು. ರೈಲಿನಡಿ ಸಿಲುಕುತ್ತಿದ್ದ ಅವರನ್ನು ತಕ್ಷಣ ಓಡಿ ಬಂದ ಪಲ್ಲವಿ ಕಾಪಾಡಿದ್ದಾರೆ. ರಾಷ್ಟ್ರೀಯ ಗೌರವವಾದ ಜೀವನ ರಕ್ಷಾ ಪದಕವನ್ನು ಇತರರನ್ನು ಉಳಿಸಲು ತಮ್ಮ ಪ್ರಾಣವನ್ನೇ ಪಣಕ್ಕಿಟ್ಟ ವ್ಯಕ್ತಿಗಳಿಗೆ ನೀಡಲಾಗುತ್ತದೆ.

 

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Follow Us
Sushma Chakre

ಮೂಲತಃ ಮಲೆನಾಡ ಹೆಬ್ಬಾಗಿಲು ಶಿವಮೊಗ್ಗದವಳು. ಬೆಂಗಳೂರಿನಲ್ಲಿ ವಾಸ. ಪತ್ರಿಕೋದ್ಯಮದಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದೇನೆ. 10 ವರ್ಷಗಳಿಂದ ಸಂಯುಕ್ತ ಕರ್ನಾಟಕ, ವಿಜಯವಾಣಿ, ನ್ಯೂಸ್18 ಕನ್ನಡ, ಟಿವಿ9 ಡಿಜಿಟಲ್ ವಿಭಾಗದಲ್ಲಿ ಕೆಲಸ ಮಾಡಿದ ಅನುಭವವಿದೆ. ಸಾಹಿತ್ಯ, ಸಂಗೀತ, ಸಿನಿಮಾ, ಬರವಣಿಗೆಯಲ್ಲಿ ಆಸಕ್ತಿ.

Read More