ಇಂದಿರಾ ಕಿಟ್‌ನಲ್ಲಿ ಏನೇನು ಪದಾರ್ಥಗಳು ಇರುತ್ತೆ? ಇಲ್ಲಿದೆ ವಿವರ
ಅನ್ನಭಾಗ್ಯ ಯೋಜನೆಯಡಿ ಇಂದಿರಾ ಆಹಾರ ಕಿಟ್ ವಿತರಣೆ ಕುರಿತು ಆಹಾರ ಸಚಿವ ಕೆ.ಹೆಚ್.ಮುನಿಯಪ್ಪ ಸ್ಪಷ್ಟನೆ ನೀಡಿದ್ದಾರೆ. ಪಡಿತರ ಚೀಟಿಯಲ್ಲಿರುವ ಸದಸ್ಯರ ಸಂಖ್ಯೆ ಆಧರಿಸಿ ಕಿಟ್ ಪ್ರಮಾಣ ನಿಗದಿಪಡಿಸಲಾಗಿದೆ. ಒಬ್ಬರು ಅಥವಾ ಇಬ್ಬರಿಗೆ 0.5 ಕೆಜಿ, ಮೂರರಿಂದ ನಾಲ್ಕು ಮಂದಿಗೆ 1 ಕೆಜಿ, ಹಾಗೂ ಐದಕ್ಕಿಂತ ಹೆಚ್ಚು ಜನರಿಗೆ 1.5 ಕೆಜಿ ಕಿಟ್ ವಿತರಿಸಲಾಗುವುದು ಎಂದಿದ್ದಾರೆ.
ಬೆಂಗಳೂರು, ಅಕ್ಟೋಬರ್ 09: ಅನ್ನಭಾಗ್ಯ ಯೋಜನೆಯಡಿ ಇಂದಿರಾ ಆಹಾರ ಕಿಟ್ ವಿತರಣೆ ವಿಚಾರವಾಗಿ ಮಾತನಾಡಿದ ಆಹಾರ ಸಚಿವ ಕೆ.ಹೆಚ್.ಮುನಿಯಪ್ಪ, ಒಂದು ಕಾರ್ಡ್ನಲ್ಲಿ ಇಬ್ಬರಿದರೆ ಅರ್ಧ ಕೆಜಿ ಕಿಟ್ ಕೊಡುತ್ತೇವೆ. 1 ಕಾರ್ಡ್ನಲ್ಲಿ 3-4 ಪಡಿತರದಾರರಿದ್ದರೆ ಒಂದೊಂದು ಕೆಜಿ ಕಿಟ್ ಕೊಡುವುದಾಗಿ ಹೇಳಿದ್ದಾರೆ. ನಗರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, 5ಕ್ಕಿಂತ ಹೆಚ್ಚು ಜನ ಇದ್ದರೆ ಒಂದೂವರೆ ಕೆಜಿವುಳ್ಳ ಕಿಟ್ ನೀಡುತ್ತೇವೆ. ರಾಜ್ಯದಲ್ಲಿ ಒಟ್ಟು 1,26,15,815 ಪಡಿತರ ಕಾರ್ಡ್‌ಗಳು ಇವೆ. ಒಟ್ಟು 4,48,62,192 ಜನರು ಅನುಕೂಲ ಪಡೆಯುತ್ತಿದ್ದಾರೆ ಎಂದಿದ್ದಾರೆ.
ಮತ್ತಷ್ಟು ವಿಡಿಯೋ ಸುದ್ದಿಗಳನ್ನು ನೋಡಲು ಇಲ್ಲಿ ಕ್ಲಿಕ್ ಮಾಡಿ.
